ಕ್ರೈಸ್ಟ್ ಚರ್ಚ್ ದಾಳಿಗೆ ಪ್ರತೀಕಾರವಾಗಿ ಕೊಲಂಬೊ ಸರಣಿ ಬಾಂಬ್ ಸ್ಫೋಟ..!

ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನ ಮಸೀದಿಯಲ್ಲಿ ಕಳೆದ ಮಾರ್ಚ್ ನಲ್ಲಿ ನಡೆದಿದ್ದ ಸಾಮೂಹಿಕ ಹತ್ಯೆಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ಉಗ್ರರು ಸರಣಿ ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಹೇಳಲಾಗಿದೆ.

Published: 23rd April 2019 12:00 PM  |   Last Updated: 23rd April 2019 05:07 AM   |  A+A-


Initial probe shows Sri Lanka attacks were 'retaliation for Christchurch' says Sri Lanka Deputy Defence Minister

ಸಂಗ್ರಹ ಚಿತ್ರ

Posted By : SVN SVN
Source : UNI
ಕೊಲಂಬೊ: ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನ ಮಸೀದಿಯಲ್ಲಿ ಕಳೆದ ಮಾರ್ಚ್ ನಲ್ಲಿ ನಡೆದಿದ್ದ ಸಾಮೂಹಿಕ ಹತ್ಯೆಗೆ ಪ್ರತೀಕಾರವಾಗಿ ಶ್ರೀಲಂಕಾದಲ್ಲಿ ಉಗ್ರರು ಸರಣಿ ಬಾಂಬ್ ಸ್ಫೋಟ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ಶ್ರೀಲಂಕಾದ ರಕ್ಷಣಾ ಉಪ ಸಚಿವ ರುವಾನ್ ವಿಜೆವರ್ದನೆ ಇಂದು ಶ್ರೀಲಂಕಾ ಸಂಸತ್ತಿದೆ ಮಾಹಿತಿ ನೀಡಿದ್ದು, 'ನ್ಯೂಜಿಲೆಂಡ್ ನ  ಕ್ರೈಸ್ಟ್ ಚರ್ಚ್ ನಲ್ಲಿ  ಮುಸ್ಲಿಮರ ಮಸೀದಿಗಳ  ಮೇಲೆ ನಡೆದ ದಾಳಿಗೆ ಪ್ರತಿಕಾರವಾಗಿ   ಈಸ್ಟರ್ ಭಾನುವಾರದಂದು ನ್ಯಾಷನಲ್ ಥೌವೀತ್ ಜಮಾಥ್ ( ಎನ್ ಟಿ ಜೆ)  ಹೆಸರಿನ ಇಸ್ಲಾಮಿಕ್ ತೀವ್ರವಾದಿ ಗುಂಪು  ಸರಣಿ ಬಾಂಬ್  ದಾಳಿಗಳನ್ನು ನಡೆಸಿದೆ ಎಂದು ಪ್ರಾಥಮಿಕ ತನಿಖೆಯ ವೇಳೆ ಬಹಿರಂಗಗೊಂಡಿದೆ  ಎಂದು ಮಾಹಿತಿ ನೀಡಿದ್ದಾರೆ.

ಸಂಸತ್ತಿನಲ್ಲಿ ಮಂಗಳವಾರ ವಿಶೇಷ ಹೇಳಿಕೆ ನೀಡಿರುವ ಸಚಿವ ವಿಜೆವರ್ದನೆ,  'ದಾಳಿ ನೆಡೆಸಿರುವ ತೀವ್ರವಾದಿಗಳ ಗುಂಪು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಜೆಎಮ್ಐ ನೊಂದಿಗೆ ಸಂಪರ್ಕ ಹೊಂದಿರುವುದು ತನಿಖೆಯ ಮೂಲಕ ಬಹಿರಂಗವಾಗಿದ್ದು, ಈ ಬಗ್ಗೆ ಇನ್ನೂ ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ. ಅಂತೆಯೇ ಈ ಗುಂಪಿನ ಪೂರ್ಣ ಮಾಹಿತಿ ನೀಡಲು ನಿರಾಕರಿಸಿದ ಅವರು, 'ಇಂತಹ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು. ಈ ಸಂಘಟನೆಗಳ ಸದಸ್ಯರನ್ನು ನ್ಯಾಯದ ಕಕ್ಷೆಗೆ ಒಳಪಡುವುದನ್ನು ಖಾತರಿ ಪಡಿಸಲಾಗುವುದು. ದಾಳಿಗಳ ಹಿಂದಿರುವ ವ್ಯಕ್ತಿಗಳ ಆಸ್ತಿ-ಪಾಸ್ತಿ ಮುಟ್ಟುಗೋಲುಹಾಕಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದರು.

ಈಸ್ಟರ್ ಭಾನುವಾರದಂದು  ಶ್ರೀಲಂಕಾದ ಚರ್ಚ್ ಗಳು ಹಾಗೂ  ಪಂಚತಾರಾ ಹೋಟೆಲ್ ಗಳ  ಮೇಲೆ  ಸ್ಥಳೀಯ ಇಸ್ಲಾಮಿಸ್ಟ್ ತೀವ್ರವಾದಿ ಗುಂಪು, ನ್ಯೂಜಿಲೆಂಡ್ ಮಸೀದಿಗಳ ಮೇಲೆ  ನಡೆದ ದಾಳಿಗಳಿಗೆ ಪ್ರತಿಕಾರವಾಗಿ ಭೀಕರ ಬಾಂಬ್  ದಾಳಿ ನಡೆಸಿದ್ದವು ಎಂದು ಪ್ರಾಥಮಿಕ ತನಿಖಾ ಅಂಶಗಳನ್ನು ಉಲೇಖಿಸಿ ಹಿರಿಯ ಸಚಿವರು ಸಂಸತ್ತಿಗೆ ಮಾಹಿತಿ  ನೀಡಿದ್ದಾರೆ.

ಮೂರು ಚರ್ಚ್ ಗಳು ಹಾಗೂ  ಹಲವು ವೈಭೋಪೇತ ಹೋಟೆಲ್ ಗಳ ಮೇಲೆ  ಭಾನುವಾರ ಬೆಳಗ್ಗೆ  ನಡೆಸಲಾದ ಸರಣಿ ಭೀಕರ ಬಾಂಬ್ ದಾಳಿಗಳಲ್ಲಿ ಈ ವರಗೂ 321 ಮಂದಿ ಮೃತಪಟ್ಟಿದ್ದು, 500ಕ್ಕೂ ಹೆಚ್ಚುಮಂದಿ ಗಾಯಗೊಂಡಿದ್ದಾರೆ.  ಎಲ್ ಟಿ ಟಿ ಇ ನೊಂದಿಗಿನ ಅಮಾನವೀಯ ನಾಗರೀಕ ಸಮರ ಅಂತ್ಯಗೊಂಡ 10ವರ್ಷಗಳ ನಂತರ  ನಡೆದ ಈ ದಾಳಿಗಳು ದ್ವೀಪರಾಷ್ಟ್ರದ ಶಾಂತಿಯನ್ನೇ ನುಚ್ಚುನೂರು ಮಾಡಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp