ಉಗ್ರ ದಾಳಿ ಹಿನ್ನಲೆ: ಶ್ರೀಲಂಕಾದಲ್ಲಿ ಚರ್ಚ್ ಗಳು ತಾತ್ಕಾಲಿಕ ಬಂದ್, ಜೀವ ಹಾನಿ ತಡೆಯಲು ಸರ್ಕಾರದ ಕ್ರಮ!

ಶ್ರೀಲಂಕಾದಲ್ಲಿ ಸಂಭವಿಸಿದ ಭೀಕರ ಉಗ್ರ ದಾಳಿ ಹಿನ್ನಲೆಯಲ್ಲಿ ರಾಜಧಾನಿ ಕೊಲಂಬೋದ ಪ್ರಮುಖ ಚರ್ಚ್ ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಕುರಿತು ಚಿಂತಿಸಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲಂಬೋ: ಶ್ರೀಲಂಕಾದಲ್ಲಿ ಸಂಭವಿಸಿದ ಭೀಕರ ಉಗ್ರ ದಾಳಿ ಹಿನ್ನಲೆಯಲ್ಲಿ ರಾಜಧಾನಿ ಕೊಲಂಬೋದ ಪ್ರಮುಖ ಚರ್ಚ್ ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಕುರಿತು ಚಿಂತಿಸಲಾಗುತ್ತಿದೆ.
ಕೊಲೊಂಬೋದಲ್ಲಿ ಚರ್ಚ್​ಗಳನ್ನೇ ಗುರಿಯಾಗಿಸಿಕೊಂಡು ಐಸಿಸ್​ ಉಗ್ರ ಸಂಘಟನೆ ನಡೆಸಿದ ಪೈಶಾಚಿಕ ದಾಳಿಗೆ ಜನ ಬೆಚ್ಚಿ ಬಿದ್ದಿದ್ದು,  ಅಲ್ಲದೇ ಚರ್ಚ್ ನಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆ ವೇಳೆಯೇ ಅಧಿಕ ಜನ ಸೇರಿವುದರಿಂದ ಹೆಚ್ಚಿನ ಜನರನ್ನು ಸುಲಭವಾಗಿ ಕೊಲ್ಲಬಹುದು ಎಂಬುದು ಉಗ್ರರ ಉದ್ದೇಶವಾಗಿತ್ತು ಎಂಬುದು ಬಾಂಬ್ ಸ್ಫೋಟದಿಂದ ಸಾಬೀತಾಗಿದೆ. ಸದ್ಯ ದ್ವೀಪ ರಾಷ್ಟ್ರದಲ್ಲಿ ಪ್ರಕ್ಷುಬ್ಧ ಸ್ಥಿತಿ ಏರ್ಪಟ್ಟಿದ್ದು, ಮುಂಜಾಗ್ರತಾ ಕ್ರಮವಾಗಿ ಲಂಕೆಯಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ.
ಭಾನುವಾರ ನಡೆದ ಸರಣಿ ಬಾಂಬ್​ ದಾಳಿ ಬಳಿಕ ನಿನ್ನೆ ಮತ್ತೊಂದು ಬಾಂಬ್​ ಸ್ಪೋಟಿಸಿದೆ. ಯಾವ ಕ್ಷಣದಲ್ಲಿ ಬೇಕಾದರೂ ಬಾಂಬ್​ ಮತ್ತೆ ಸ್ಫೋಟಗಳ್ಳುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ಚರ್ಚ್​ಗಳ ಬಾಗಿಲು ಹಾಕಲು ಸರ್ಕಾರ ಮುಂದಾಗಿದೆ. ಲಂಕಾ ರಾಷ್ಟ್ರದಲ್ಲಿ ಸದ್ಯದಲ್ಲಿರುವ ಪರಿಸ್ಥಿತಿಯನ್ನು ಅವಲೋಕಿಸಿದೆ. ಇದಕ್ಕಾಗಿ ಚರ್ಚ್ ಗಳ ಬಾಗಿಲನ್ನು ತಾತ್ಕಾಲಿಕವಾಗಿ ಮುಚ್ಚುವುದು ಒಳಿತು ಎಂದು ಸಚಿವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜನರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವುದು ಒಳಿತು. ಸದ್ಯ ಚರ್ಚ್​ ಬಾಗಿಲನ್ನು ತಾತ್ಕಾಲಿಕವಾಗಿ ಮುಚ್ಚೋಣ. ಇಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಚರ್ಚ್​ಗಳನ್ನು ಮತ್ತೆ ತೆರೆಯೋಣ ಎಂದು ಮನವಿ ಮಾಡಿದ್ದಾರೆ.
ಈ ಕುರಿತಂತೆ ಲಂಕೆಯ ಕ್ಯಾಥೋಲಿಕ್ ಚರ್ಚ್ ಗಳ ಮುಖ್ಯಸ್ಥರೊಂದಿಗೆ ಸರ್ಕಾರ ಚರ್ಚೆ ನಡೆಸಿದ್ದು, ಚರ್ಚ್ ಗಳನ್ನು ತಾತ್ಕಾಲಿಕ ಬಂದ್ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಸರ್ಕಾರ ಇನ್ನು ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com