ಶ್ರೀಲಂಕಾ ಉಗ್ರ ದಾಳಿಯ ಶಂಕಿತ ರೂವಾರಿ, ಮೂಲಭೂತವಾದಿ ನಾಯಕ ಝಹ್ರಾನ್ ಹಶೀಂ ಸಾವು

ಶ್ರೀಲಂಕಾ ಉಗ್ರ ದಾಳಿಯ ಶಂಕಿತ ರೂವಾರಿ ಹಾಗೂ ಕುಖ್ಯಾತ ವಿವಾದಾತ್ಮಕ ಮೂಲಭೂತವಾದಿ ಮುಖಂಡ ಝಹ್ರಾನ್ ಹಶೀಂ ಸಾವನ್ನಪ್ಪಿದ್ದಾನೆ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲಂಬೋ: ಶ್ರೀಲಂಕಾ ಉಗ್ರ ದಾಳಿಯ ಶಂಕಿತ ರೂವಾರಿ ಹಾಗೂ ಕುಖ್ಯಾತ ವಿವಾದಾತ್ಮಕ ಮೂಲಭೂತವಾದಿ ಮುಖಂಡ ಝಹ್ರಾನ್ ಹಶೀಂ ಸಾವನ್ನಪ್ಪಿದ್ದಾನೆ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಹೇಳಿದ್ದಾರೆ.
ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಶ್ರೀಲಂಕಾ ಅಧ್ಯಕ್ಷರ ಕಚೇರಿ, ಕೊಲಂಬೋದ ಶಾಂಘ್ರಿಲಾ ಹೊಟೆಲ್ ನಲ್ಲಿ ನಡೆದ ದಾಳಿಯಲ್ಲಿ ಮೂಲಭೂತವಾದಿ ಮುಖಂಡ ಝಹ್ರಾನ್ ಹಶೀಂ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ. ಈ ಬಗ್ಗೆ ಶ್ರೀಲಂಕಾ ಗುಪ್ತಚರ ಮೂಲಗಳು ಮಾಹಿತಿ ನೀಡಿವೆ ಎಂದು ಸಿರಿಸೇನಾ ಹೇಳಿದ್ದಾರೆ. ಹೊಟೆಲ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಅಧಿಕಾರಿಗಳು ಲಂಕಾ ಅಧ್ಯಕ್ಷರಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
'ಝಹ್ರಾನ್ ಹಶೀಂ ಸ್ಥಳೀಯ ಉಗ್ರ ಸಂಘಟನೆಯ ನಾಯಕನಾಗಿದ್ದು, ಶಾಂಘ್ರಿಲಾ ಹೊಟೆಲ್ ನಲ್ಲಿ ನಡೆದ ದಾಳಿಯಲ್ಲಿ ಆತ ಸಾವನ್ನಪ್ಪಿದ್ದಾನೆ. ಇದೇ ಹೊಟೆಲ್ ನಲ್ಲಿ ಮತ್ತೋರ್ವ ದಾಳಿಕೋರ ಇವ್ವಾಮ್ ಕೂಡ ದಾಳಿ ನಡೆಸಿ ಅದೇ ದಾಳಿಗೆ ಬಲಿಯಾಗಿದ್ದ. ಈ ಬಗ್ಗೆ ಶ್ರೀಲಂಕಾದ ಭದ್ರತಾ ಪಡೆಗಳು ಮಾಹಿತಿ ನೀಡಿದ್ದು, ಹೊಟೆಲ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ ಎಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಹೇಳಿದ್ದಾರೆ.
ದಾಳಿ ನಡೆದ ಬಳಿಕ ಇದೇ ಹಶೀಂ ಇಸಿಸ್ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ. ಹೀಗಾಗಿ ಈತನಿಗಾಗಿ ಶೋಧ ನಡೆಸಲಾಗಿತ್ತು. ಈ ವೇಳೆ ಈತನ ಎಲ್ಲ ಅಡಗುದಾಣಗಶ ಮೇಲೂ ಲಂಕಾ ಭದ್ರತಾ ಪಡೆಗಳು ದಾಳಿ ನಡೆಸಿದ್ದವು. ಆದರೆ ಈತ ಸಿಕ್ಕಿರಲಿಲ್ಲ. ಬಳಿಕ ಶಾಂಘ್ರಿಲಾ ಹೊಟೆಲ್ ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈತ ಸಾವನ್ನಪ್ಪಿರುವುದು ಖಚಿತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com