ಲಂಕಾದಲ್ಲಿ ಮತ್ತೆ ಉಗ್ರರ ಹಾವಳಿ, ಯೋಧರ ಗುಂಡಿಗೆ ಇಬ್ಬರು ಶಂಕಿತ ಇಸಿಸ್ ಉಗ್ರರು ಹತ!

ಕೊಲಂಬೋ ಸರಣಿ ಬಾಂಬ್ ಸ್ಫೋಟ ಹಸಿರಾಗಿರುವಂತೆಯೇ ಶ್ರೀಲಂಕಾದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಇಂದು ಇಬ್ಬರು ಶಂಕಿತ ಉಗ್ರರನ್ನು ಶ್ರೀಲಂಕಾ ಸೇನಾಪಡೆಗಳು ಹೊಡೆದುರುಳಿಸಿವೆ.

Published: 27th April 2019 12:00 PM  |   Last Updated: 27th April 2019 12:16 PM   |  A+A-


Sri Lanka troops kill two suspected IS gunmen, says official

ಸಂಗ್ರಹ ಚಿತ್ರ

Posted By : SVN SVN
Source : ANI
ಕೊಲಂಬೋ: ಕೊಲಂಬೋ ಸರಣಿ ಬಾಂಬ್ ಸ್ಫೋಟ ಹಸಿರಾಗಿರುವಂತೆಯೇ ಶ್ರೀಲಂಕಾದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಇಂದು ಇಬ್ಬರು ಶಂಕಿತ ಉಗ್ರರನ್ನು ಶ್ರೀಲಂಕಾ ಸೇನಾಪಡೆಗಳು ಹೊಡೆದುರುಳಿಸಿವೆ.

ಶ್ರೀಲಂಕಾದ ಕಲ್ಮುನಾಯ್ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಶೋಧಕಾರ್ಯಾಚರಣೆ ನಡೆಸಿದಾಗ ಶಂಕಿತ ಉಗ್ರರು ಸೈನಿಕರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಸೈನಿಕರೂ ಕೂಡ ಪ್ರತಿದಾಳಿ ನಡೆಸಿ ಇಬ್ಬರು ಉಗ್ರರನ್ನು ಕೊಂದು ಹಾಕಿದ್ದಾರೆ. ಅಂತೆಯೇ ಘಟನೆಯಲ್ಲಿ ಓರ್ವ ನಾಗರೀಕ ಕೂಡ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ನಿನ್ನೆಯಷ್ಟೇ ಇದೇ ಶ್ರೀಲಂಕಾದ ಕಾಲ್ ಮುನೈನಗರದಲ್ಲಿ ಮೂರು ಕಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿ, ಇಬ್ಬರು ಮೃತಪಟ್ಟಿದ್ದರು. 
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp