ಶ್ರೀಲಂಕಾದಲ್ಲಿ ಮುಂದುವರೆದ ಉಗ್ರ ದಾಳಿ: ಮನೆಯಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಧಾರ್ಮಿಕ ಮುಖಂಡರ ಸಲಹೆ!

ಸರಣಿ ಬಾಂಬ್ ಸ್ಫೋಟದಿಂದ ತತ್ತರಿಸಿ ಹೋಗಿರುವ ಶ್ರೀಲಂಕಾದಲ್ಲಿ ಆತಂಕ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರಾರ್ಥನೆಗಾಗಿ ಮಸೀದಿ ಮತ್ತು ಚರ್ಚೆ ಗಳಿಗೆ ಆಗಮಿಸಿದಂತೆ ಧಾರ್ಮಿಕ ಮುಖಂಡರು ಸಲಹೆ ನೀಡಿದ್ದಾರೆ.

Published: 27th April 2019 12:00 PM  |   Last Updated: 27th April 2019 12:17 PM   |  A+A-


SrlLanka Terror Attack; Islamic religious body, urged Muslims to conduct prayers at home

ಸಂಗ್ರಹ ಚಿತ್ರ

Posted By : SVN SVN
Source : Online Desk
ಕೊಲಂಬೋ: ಸರಣಿ ಬಾಂಬ್ ಸ್ಫೋಟದಿಂದ ತತ್ತರಿಸಿ ಹೋಗಿರುವ ಶ್ರೀಲಂಕಾದಲ್ಲಿ ಆತಂಕ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರಾರ್ಥನೆಗಾಗಿ ಮಸೀದಿ ಮತ್ತು ಚರ್ಚೆ ಗಳಿಗೆ ಆಗಮಿಸಿದಂತೆ ಧಾರ್ಮಿಕ ಮುಖಂಡರು ಸಲಹೆ ನೀಡಿದ್ದಾರೆ.

ಶ್ರೀಲಂಕಾದ ಕ್ಯಾಥೋಲಿಕ್ ಚರ್ಚ್ ಗಳ ಒಕ್ಕೂಟ ಹಾಗೂ ಆಲ್ ಸಿಲೋನ್ ಜಮಾಯುತುಲ್ ಉಲ್ಲಮ ಮುಸ್ಲಿಂ ಸಂಘಟನೆ ಇಂತಹುದೊಂದು ಕರೆ ನೀಡಿದ್ದು, ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸುವಂತೆ ಸಲಹೆ ನೀಡಿದೆ. ಲಂಕಾದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಸಾಮೂಹಿಕ ಪ್ರಾರ್ಥನೆ ಬೇಡ  ಎಂದು ಸಲಹೆ ನೀಡಿದ್ದಾರೆ. 

ಇನ್ನು ಶ್ರೀಲಂಕಾದಲ್ಲಿ ಮತ್ತೆ ಸರಣಿ ಬಾಂಬ್ ಸ್ಫೋಟವಾಗಿದ್ದು, ನಿನ್ನೆ ಕಾಲ್ ಮುನೈನಗರದಲ್ಲಿ ಮೂರು ಕಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿ, ಇಬ್ಬರು ಮೃತಪಟ್ಟಿದ್ದರು. ಅಲ್ಲದೆ ಇದೇ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರು ನಡುವೆ ಗುಂಡಿನ ಕಾಳಗ ನಡೆಯುತ್ತಿದೆ. ಈಶಾನ್ಯ ಶ್ರೀಲಂಕಾದಲ್ಲಿ ಉಗ್ರರ ಅಡಗುದಾಣಗಳ ಮೇಲೆ ಲಂಕಾ ಸೇನೆ ದಾಳಿ ಮಾಡಿದೆ. ಈ ವೇಳೆ ಇಬ್ಬರು ಶಂಕಿತ ಉಗ್ರರು ಸಾವನ್ನಪ್ಪಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news
Poll
HD Kumaraswamy

ಹಿಂದಿ ಗೊತ್ತಿರುವುದರಿಂದ ರಾಷ್ಟ್ರ ರಾಜಕಾರಣದಲ್ಲಿ ಉತ್ತರ ಭಾರತದ ನಾಯಕರಿಗೆ ದಕ್ಷಿಣದವರಿಗಿಂತ ಹೆಚ್ಚಿನ ಪ್ರಯೋಜನ ಆಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp