ಅಮೆರಿಕ: ಮುಸ್ಲಿಮರು ಎಂದು ತಪ್ಪಾಗಿ ಭಾವಿಸಿ ಪಾದಾಚಾರಿಗಳ ಮೇಲೆ ವಾಹನ ಹರಿಸಿದ ವ್ಯಕ್ತಿ

ಅಮೆರಿಕದ ಕ್ಯಾಲಿಫೋರ್ನಿಯಾ ವ್ಯಕ್ತಿಯೊಬ್ಬ ಮುಸ್ತಿಮರು ಎಂದು ತಪ್ಪಾಗಿ ಭಾವಿಸಿ ಪಾದಾಚಾರಿಗಳ ಮೇಲೆ ವಾಹನ ಹರಿಸಿದ್ದು, ಘಟನೆಯಲ್ಲಿ....

Published: 27th April 2019 12:00 PM  |   Last Updated: 27th April 2019 07:18 AM   |  A+A-


US driver mistakes pedestrians for Muslims, runs into them injuring 8: Police

ಚಾಲಕ ಐಶಾಯ್ ಪೀಪಲ್ಸ್

Posted By : LSB LSB
Source : AFP
ಲಾಸ್ ಏಂಜಲೀಸ್: ಅಮೆರಿಕದ ಕ್ಯಾಲಿಫೋರ್ನಿಯಾ ವ್ಯಕ್ತಿಯೊಬ್ಬ ಮುಸ್ತಿಮರು ಎಂದು ತಪ್ಪಾಗಿ ಭಾವಿಸಿ ಪಾದಾಚಾರಿಗಳ ಮೇಲೆ ವಾಹನ ಹರಿಸಿದ್ದು, ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಲಕ 34 ವರ್ಷದ ಐಶಾಯ್ ಪೀಪಲ್ಸ್ , ಸ್ಯಾನ್ ಫ್ರಾನ್ಸಿಸ್ಕೊದ ಸನ್ನಿವೇಲ್ ಬಳಿ ಒಂದು ಕುಟುಂಬವನ್ನು ಟಾರ್ಗೆಟ್ ಮಾಡಿ ಪಾದಾಚಾರಿಗಳ ಮೇಲೆ ವಾಹನ ಹರಿಸಿದ್ದು, ಈ ಸಂಬಂಧ ಆತನ ವಿರುದ್ಧ ದ್ವೇಷ ಅಪರಾಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಘಟನೆಯಲ್ಲಿ ಒಂದೇ ಕುಟುಂಬದ ಮೂವರು, ತಂದೆ, ಮಗ ಮತ್ತು ಮಂಗಳು ಸೇರಿದಂತೆ ಎಂಟು ಪಾದಾಚಾರಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ಈ ಕುಟುಂಬದ ರಾಷ್ಟ್ರೀಯತೆ ಮತ್ತು ಧರ್ಮವನ್ನು ಬಹಿರಂಗಪಡಿಸಿಲ್ಲ.

ಚಾಲಕ ಪೀಪಲ್ಸ್ ಮಾನಸಿಕ ಅಸ್ವಸ್ಥನಾಗಿದ್ದು, ಆತನಿಗೆ ಮನೋವೈದ್ಯಕೀಯ ಚಿಕಿತ್ಸೆಯ ಅಗತ್ಯ ಇದೆ. ಪೀಪಲ್ಸ್ ಒಬ್ಬ ಮಾಜಿ ಸೈನಿಕ ಎಂದು ಆತನ ಪರ ವಕೀಲರು ತಿಳಿಸಿದ್ದಾರೆ.
Stay up to date on all the latest ಅಂತಾರಾಷ್ಟ್ರೀಯ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp