ತಪ್ಪು ವ್ಯಕ್ತಿಗಳಿಂದ ಆತ ಧಾರ್ಮಿಕತೆ ಕಲಿತ, ಆತ ಸತ್ತಿದ್ದು ಒಳ್ಳೆಯದೇ ಆಯಿತು: ಉಗ್ರನ ಸಹೋದರಿ

ಆತ ನನ್ನ ಸಹೋದರನಲ್ಲ, ತಪ್ಪು ವ್ಯಕ್ತಿಗಳಿಂದ ಧಾರ್ಮಿಕತೆ ಕಲಿತ, ಆತ ಸತ್ತಿದ್ದು ಒಳ್ಳೆಯದೇ ಆಯಿತು ಎಂದು ಶ್ರೀಲಂಕಾ ದಾಳಿಕೋರ ಉಗ್ರನ ಸಹೋದರಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲಂಬೋ: ಆತ ನನ್ನ ಸಹೋದರನಲ್ಲ, ತಪ್ಪು ವ್ಯಕ್ತಿಗಳಿಂದ ಧಾರ್ಮಿಕತೆ ಕಲಿತ, ಆತ ಸತ್ತಿದ್ದು ಒಳ್ಳೆಯದೇ ಆಯಿತು ಎಂದು ಶ್ರೀಲಂಕಾ ದಾಳಿಕೋರ ಉಗ್ರನ ಸಹೋದರಿ ಹೇಳಿದ್ದಾರೆ.
ಕಳೆದ ಈಸ್ಟರ್ ಸಂಡೆಯಂದು ಕೊಲಂಬೋದಲ್ಲಿ ನಡೆದಿದ್ದ ಭೀಕರ ಉಗ್ರ ದಾಳಿಯಲ್ಲಿ 9 ಮಂದಿ ಇಸ್ಲಾಮಿಕ್ ಸ್ಟೇಟ್ ಆತ್ಮಹತ್ಯಾ ದಾಳಿಕೋರರು 3 ಚರ್ಚ್ ಹಾಗೂ 3 ಹೋಟೆಲ್ ಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 253 ಮಂದಿ ಸಾವನ್ನಪ್ಪಿ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 
ಇದಾದ ಬೆನ್ನಲ್ಲೇ ಅಂದರೆ ಕಳೆದ ಶುಕ್ರವಾರದಂದು ಶ್ರೀಲಂಕಾದ ಕಾಲ್ ಮುನೈ ಪಟ್ಟಣದಲ್ಲಿ ಇಸಿಸ್ ಉಗ್ರರ ಅಡಗುದಾಣದ ಮೇಲೆ ಶ್ರೀಲಂಕಾದ ಸೇನೆ ದಾಳಿ ನಡೆಸಿತ್ತು. ಈ ವೇಳೆ ಮೂವರು ಉಗ್ರರು ಹತರಾಗಿದ್ದರು. ಇದೇ ಕಾಲ್ ಮುನೈ ಪಟ್ಟಣದಲ್ಲಿದ್ದ ಉಗ್ರ ಝಹ್ರಾನ್ ಹಶೀಂ ನ ಮನೆ ಮೇಲೆ ಶ್ರೀಲಂಕಾ ಸೇನೆ ದಾಳಿ ನಡೆಸಿದ್ದು, ಈ ವೇಳೆ ಉಗ್ರನ ಕುಟುಂಬಸ್ಥರು ಸೇನಾಧಿಕಾರಿಗಳೊಂದಿಗೆ ಮುಖಾಮುಖಿಯಾಗಿದ್ದಾರೆ. 
ಈ ವೇಳೆ ಉಗ್ರನ ಸಹೋದರಿ ಮದಾನಿಯಾ ತಮ್ಮ ಸಹೋದರ ತಪ್ಪು ವ್ಯಕ್ತಿಗಳೊಂದಿಗೆ ಸೇರಿ ಧಾರ್ಮಿಕತೆ ಕಲಿತ. ಆತ ಸತ್ತಿದ್ದು ಒಳ್ಳೆಯದೇ ಆಯಿತು. ಅವರ ಮೃತದೇಹಗಳನ್ನು ನಾನು ನೋಡಲಾರೆ. ಆದರೆ ಅವರು ಉಗ್ರರು... ಎಂದು ಹೇಳಿದ್ದಾರೆ.
ಇನ್ನು ಕಳೆದ ಈಸ್ಚರ್ ಸಂಡೆಯಂದು ಉಗ್ರ ಝಹ್ರಾನ್ ಹಶೀಂ ಶಾಂಘ್ರಿಲಾ ಹೊಟೆಲ್ ನಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡು 100ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾಗಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com