ಶ್ರೀಲಂಕಾ ಉಗ್ರ ದಾಳಿ: ತಮಿಳು ಶಿಕ್ಷಕ ಸೇರಿ 106 ಶಂಕಿತರ ಬಂಧನ

ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ಸೇನೆ ಮತ್ತು ಅಲ್ಲಿನ ತನಿಖಾ ಸಂಸ್ಥೆಗಳು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಈ ವರೆಗೂ ಒಟ್ಟು 106 ಶಂಕಿತರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೊಲಂಬೋ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾ ಸೇನೆ ಮತ್ತು ಅಲ್ಲಿನ ತನಿಖಾ ಸಂಸ್ಥೆಗಳು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಈ ವರೆಗೂ ಒಟ್ಟು 106 ಶಂಕಿತರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಈ 106 ಬಂಧಿತರ ಪೈಕಿ ಓರ್ವ ತಮಿಳು ಶಿಕ್ಷಕ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ. ಈಶಾನ್ಯ ಶ್ರೀಲಂಕಾದಲ್ಲಿ ಶುಕ್ರವಾರದಿಂದ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದು, ಕೊಲಂಬೋ, ಕ್ಯಾಂಡಿ, ಹಂಬೋಟೊಂಟಾ ಮತ್ತು ಜಾಫ್ನಾದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶ್ರೀಲಂಕಾ ಸೇನೆ ಈ 106 ಮಂದಿಯನ್ನು ಬಂಧಿಸಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ವರದಿಯಲ್ಲಿರುವಂತೆ ಜಾಫ್ನಾದಲ್ಲಿ ತಮಿಳು ಶಾಲೆಯ ಶಿಕ್ಷಕ ಮತ್ತು ಪ್ರಾಂಶಪಾಲನನ್ನೂ ಶಂಕೆಯ ಮೇರೆಗೆ ಶ್ರೀಲಂಕಾ ಸೇನೆ ಬಂಧಿಸಿದೆ ಎನ್ನಲಾಗಿದೆ. ಇದಲ್ಲದೆ ವವುನಿಯಾ ಪಟ್ಟಣದಲ್ಲಿ ಹೆದ್ದಾರಿಗಳನ್ನು ಶ್ರೀಲಂಕಾ ಸೇನೆ ಬಂದ್ ಮಾಡಿ ಅಲ್ಲಿ ಜಂಟಿ ಕಾರ್ಯಾಚರಣೆಯಲ್ಲಿ 10 ಮಂದಿಯನ್ನು ಬಂಧಿಸಿದೆ ಎಂದು ತಿಳಿದುಬಂದಿದೆ. ಅಂತೆಯೇ ಗಾಲೆಯಲ್ಲಿ ದಾಮ್ ಗದೆರಾ ಪ್ರದೇಶದಲ್ಲಿ ಇಬ್ಬರು ಶಂಕಿತರನ್ನು ಬಂಧಿಸಿರುವ ಶ್ರೀಲಂಕಾ ಸೇನೆ, ಬಂಧಿತರ ಪೈಕಿ ಓರ್ವ ಡಾಕ್ಟರ್ ಎಂದು ತಿಳಿದುಬಂದಿದೆ.
ಒಟ್ಟಾರೆ ಈಸ್ಚರ್ ಸಂಡೇ ಉಗ್ರ ದಾಳಿ ಬಳಿಕ ಎಚ್ಚೆತ್ತುಕೊಂಡಿರುವ ಶ್ರೀಲಂಕಾ ಸರ್ಕಾರ ಬರೊಬ್ಬರಿ 10 ವರ್ಷಗಳ ಬಳಿಕ ಮತ್ತೆ ಸಂಪೂರ್ಣ ಸೇನೆಯನ್ನು ಕಾರ್ಯಾಚರಣೆಗೆ ನಿಯೋಜಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com