ಬಾಲಾಕೋಟ್ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರ ಆಹ್ವಾನಿಸಿದ ಪಾಕಿಸ್ತಾನ!

ಭಾರತೀಯ ವಾಯು ಸೇನೆ ನಡೆಸಿದ್ದ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರನ್ನು ಕರೆದುಕೊಂಡು ಹೋಗಲು ತಾನು ಸಿದ್ಧವಿರುವುದಾಗಿ ಪಾಕಿಸ್ತಾನ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಭಾರತೀಯ ವಾಯು ಸೇನೆ ನಡೆಸಿದ್ದ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರನ್ನು ಕರೆದುಕೊಂಡು ಹೋಗಲು ತಾನು ಸಿದ್ಧವಿರುವುದಾಗಿ ಪಾಕಿಸ್ತಾನ ಹೇಳಿದೆ.
ಭಾರತೀಯ ವಾಯುಸೇನೆ ವಾಯುದಾಳಿಯಿಂದ ಯಾವುದೇ ಉಗ್ರರು ಸತ್ತಿಲ್ಲ. ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಪ್ರತಿಪಾದಿಸಿರುವ ಪಾಕಿಸ್ತಾನ ಇದೀಗ ಭಾರತೀಯ ಪತ್ರಕರ್ತರನ್ನು ಬಾಲಾಕೋಟ್ ಪ್ರದೇಶಕ್ಕೆ ಕರೆದುಕೊಂಡು ಹೋಗಲು ಸಿದ್ಧ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.
ರಾವಲ್ಪಿಂಡಿಯಲ್ಲಿರುವ ಪಾಕ್ ಸೇನೆ ಹೆಡ್ ಕ್ವಾರ್ಟರ್ಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕ್ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್, ಭಾರತ ಸರ್ಕಾರ ತಾನು ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಕ್ಯಾಂಪ್ ಗಳನ್ನು ಧ್ವಂಸ ಮಾಡಿರುವುದಾಗಿ ಹೇಳಿದೆ. ತನ್ನ ವಾಯುದಾಳಿಯಲ್ಲಿ ಜೈಶ್ ಉಗ್ರ ಸಂಘಟನೆಯ ಕ್ಯಾಂಪ್ ಗಳು ಧ್ವಂಸವಾಗಿದ್ದವು ಎಂದು ಭಾರತ ಸರ್ಕಾರ ಹೇಳಿದೆ. ಆದರೆ ಅಂದು ಅಂತಹ ಯಾವುದೇ ರೀತಿಯ ನಷ್ಟ ಸಂಭವಿಸಿಲ್ಲ. ಭಾರತ ಸರ್ಕಾರ ಸುಳ್ಳು ಹೇಳಿದೆ. ಈ ಕುರಿತ ಸತ್ಯ ದರ್ಶನಕ್ಕಾಗಿ ಭಾರತೀಯ ಪತ್ರಕರ್ತರನ್ನು ಬಾಲಾಕೋಟ್ ಗೆ ಕರೆದುಕೊಂಡು ಹೋಗಲು ತಾನು ಸಿದ್ಧ ಎಂದು ಗಫೂರ್ ಹೇಳಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಭಾರತ ಸುಳ್ಳು ಹೇಳಿಕೊಂಡು ಬರುತ್ತಿದೆ. ಆದರೆ ನಾವು ಅದಾವುದಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ. ಭಾರತ ಒಂದು ಜವಾಬ್ಧಾರಿಯುತ ರಾಷ್ಟ್ರವಾಗಿದ್ದು, ಇಂತಹ ಗಂಭೀರ ವಿಚಾರಗಳಲ್ಲಿ ಸುಳ್ಳು ಹೇಳಬಾರದು. ಬೇಕಿದ್ದರೆ ಭಾರತೀಯ ಪತ್ರಕರ್ಕರೇ ಬಾಲಾಕೋಟ್ ಗೆ ಬಂದು ಅಲ್ವಿನ ಪರಿಸ್ಥಿತಿ ವೀಕ್ಷಣೆ ಮಾಡಲಿ ಎಂದು ಗಫೂರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com