ಶ್ರೀಲಂಕಾ ಮೇಲೆ ಮತ್ತೊಂದು ಬೃಹತ್ ದಾಳಿಗೆ ಉಗ್ರರ ಯೋಜನೆ: ಅಮೆರಿಕ ಎಚ್ಚರಿಕೆ

ಈಸ್ಟರ್ ಭಾನುವಾರದಂದು ರಕ್ತಪಿಪಾಸು ಉಗ್ರರ ಬಾಂಬ್ ಸ್ಫೋಟಕ್ಕೆ ತತ್ತರಿಸಿದ್ದ ಲಂಕಾ, ಇನ್ನೂ ಅಪಾಯದ ಸುಳಿಯಿಂದ ಸುರಕ್ಷಿತವಾಗಿಲ್ಲ ಎಂದು ಅಮೆರಿಕ ಹೇಳಿದೆ.
ಶ್ರೀಲಂಕಾ ಮೇಲೆ ಮತ್ತೊಂದು ಬೃಹತ್ ದಾಳಿಗೆ ಉಗ್ರರ ಯೋಜನೆ: ಅಮೆರಿಕ ಎಚ್ಚರಿಕೆ
ಶ್ರೀಲಂಕಾ ಮೇಲೆ ಮತ್ತೊಂದು ಬೃಹತ್ ದಾಳಿಗೆ ಉಗ್ರರ ಯೋಜನೆ: ಅಮೆರಿಕ ಎಚ್ಚರಿಕೆ
ಕೊಲಂಬೋ: ಈಸ್ಟರ್ ಭಾನುವಾರದಂದು ರಕ್ತಪಿಪಾಸು ಉಗ್ರರ ಬಾಂಬ್ ಸ್ಫೋಟಕ್ಕೆ ತತ್ತರಿಸಿದ್ದ ಲಂಕಾ, ಇನ್ನೂ ಅಪಾಯದ ಸುಳಿಯಿಂದ ಸುರಕ್ಷಿತವಾಗಿಲ್ಲ ಎಂದು ಅಮೆರಿಕ ಹೇಳಿದೆ. 
ಶ್ರೀಲಂಕಾದಲ್ಲಿ ಮತ್ತಷ್ಟು ಬೃಹತ್ ಪ್ರಮಾಣದಲ್ಲಿ ದಾಳಿ ನಡೆಸುವುದಕ್ಕೆ ಉಗ್ರರು ಯೋಜನೆ ರೂಪಿಸಿದ್ದಾರೆ ಎಂದು ಅಮೆರಿಕ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 
ಲಂಕಾ ಸರ್ಕಾರದ ಮನವಿಯ ಮೇರೆಗೆ ಸ್ಫೋಟ ಪ್ರಕರಣದ ಆರೋಪಿ ಸಂಘಟನೆಯನ್ನು ಶಿಕ್ಷೆಗೆ ಗುರಿಪಡಿಸುವುದಕ್ಕಾಗಿ ಅಗತ್ಯ ನೆರವು ನೀಡುತ್ತಿದ್ದೇವೆ ಎಂದು ಕೊಲಂಬೋದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯ ಅಧಿಕಾರಿ ನ್ಯಾನ್ಸಿ ವ್ಯಾನ್ ಹಾರ್ನ್  ಮಾಹಿತಿ ನೀಡಿದ್ದಾರೆ. 
ಇದೇ ವೇಳೆ ಭಯೋತ್ಪಾದಕ ಸಂಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿರುವ ಅಮೆರಿಕ, ಆತ್ಮಹತ್ಯಾ ದಾಳಿಯನ್ನು ನಡೆಸಿದ್ದ ಉಗ್ರ ಸಂಘಟನೆಯ ಸದಸ್ಯರು ಇನ್ನೂ ಸಕ್ರಿಯರಾಗಿದ್ದು, ಮತ್ತಷ್ಟು ಹೆಚ್ಚಿನ ಪ್ರಮಾಣದ ದಾಳಿಯನ್ನು ನಡೆಸಲು ಯೋಜನೆ ರೂಪಿಸಿದ್ದಾರೆ ಎಂದು ಎಚ್ಚರಿಕೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com