ಕಾಶ್ಮೀರ ತುಕ್ಡೆ ತುಕ್ಡೆ: ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಎದೆಗೆ ಬಿತ್ತು ಬೆಂಕಿ, ವಿಶ್ವಸಂಸ್ಥೆ ಯಾಕೆ ಬೇಕು?

ಕೆಲ ಕಿಡಿಗೇಡಿಗುಳ ಭಾರತವನ್ನು ತುಂಡರಿಸುತ್ತೇವೆ ಎಂದು ಘೋಷಣೆ ಕೂಗಿದಾಗ ನೆರೆಯ ಪಾಕಿಸ್ತಾನಕ್ಕೆ ಖುಷಿ ಆಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ 370 ಕಲಂ ಕಿತ್ತೆಸೆದಿದ್ದು
ಶಾಹಿದ್ ಆಫ್ರಿದಿ
ಶಾಹಿದ್ ಆಫ್ರಿದಿ
ನವದೆಹಲಿ: ಕೆಲ ಕಿಡಿಗೇಡಿಗುಳ ಭಾರತವನ್ನು ತುಂಡರಿಸುತ್ತೇವೆ ಎಂದು ಘೋಷಣೆ ಕೂಗಿದಾಗ ನೆರೆಯ ಪಾಕಿಸ್ತಾನಕ್ಕೆ ಖುಷಿ ಆಗಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ 370 ಕಲಂ ಕಿತ್ತೆಸೆದಿದ್ದು ಇದೀಗ ಪಾಕಿಗಳ ಜಂಗಾಬಲವೇ ಕುಸಿದಂತಾಗಿದೆ. ಇದನ್ನು ವ್ಯಕ್ತಪಡಿಸಿದ್ದು ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ.
ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಹಲವು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದ ಶಾಹಿದ್ ಆಫ್ರಿದಿ ಇದೀಗ ವಿಶ್ವಸಂಸ್ಥೆಯ ಅಸ್ಥಿತ್ವವನ್ನು ಪ್ರಶ್ನಿಸಿದ್ದಾರೆ. 
ತಮ್ಮ ಟ್ವೀಟ್ ನಲ್ಲಿ ಶಾಹಿದ್ ಆಫ್ರಿದಿ, ವಿಶ್ವಸಂಸ್ಥೆ ನಿರ್ಣಯದ ಪ್ರಕಾರ, ಕಾಶ್ಮೀರಿಗಳಿಗೆ ಅವರ ಸರಿಯಾದ ಹಕ್ಕುಗಳನ್ನು ನೀಡಬೇಕು. ನಮ್ಮೆಲ್ಲರಂತೆ ಸ್ವಾತಂತ್ರ್ಯದ ಹಕ್ಕುಗಳು. ವಿಶ್ವಸಂಸ್ಥೆಯನ್ನು ಯಾಕಾಗಿ ರಚಿಸಲಾಗಿದೆ ಮತ್ತು ಅದು ಏಕೆ ನಿದ್ರಿಸುತ್ತಿದೆ? ಮಾನವೀಯತೆಯ ವಿರುದ್ಧ ಕಾಶ್ಮೀರದಲ್ಲಿ ನಡೆಯುತ್ತಿರುವ ಅಪ್ರಚೋದಿತ ಆಕ್ರಮಣ ಮತ್ತು ಅಪರಾಧಗಳನ್ನು ಗಮನಿಸಬೇಕು. ಅಮೆರಿಕ ಪ್ರಧಾನಿ ಮಧ್ಯಸ್ಥಿಕೆ ವಹಿಸಬೇಕು. ತಮ್ಮ ಪಾತ್ರವನ್ನು ನಿಭಾಯಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ. 
ವಿಪಕ್ಷಗಳ ಗದ್ದಲದ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಂಡಿಸಿದರು. ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಒಳಗೊಂಡಿರುವ ಕೇಂದ್ರಾಡಳಿತ ಪ್ರದೇಶ ಮತ್ತು ಲಡಾಕ್ ವಿಧಾನಸಭೆ ಒಳಗೊಂಡಿರದ ಕೇಂದ್ರಾಡಳಿತ ಪ್ರದೇಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com