370ನೇ ವಿಧಿ ರದ್ದು: ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ ಪಾಕ್, ದ್ವಿಪಕ್ಷೀಯ ವ್ಯಾಪಾರ ಸ್ಥಗಿತ

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ಭಾರತದ ಕ್ರಮದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉನ್ನತ ನಾಗರಿಕ ಮತ್ತು ಮಿಲಿಟರಿ ನಾಯಕತ್ವವು....
370ನೇ ವಿಧಿ ರದ್ದು: ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ ಪಾಕ್,  ದ್ವಿಪಕ್ಷೀಯ ವ್ಯಾಪಾರ ಸ್ಥಗಿತ
370ನೇ ವಿಧಿ ರದ್ದು: ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ ಪಾಕ್, ದ್ವಿಪಕ್ಷೀಯ ವ್ಯಾಪಾರ ಸ್ಥಗಿತ
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ಭಾರತದ ಕ್ರಮದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉನ್ನತ ನಾಗರಿಕ ಮತ್ತು ಮಿಲಿಟರಿ ನಾಯಕತ್ವವು ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಲಲು ಮುಂದಾಗಿದೆ. ಇದರ ಹಿನ್ನೆಲೆಯಲ್ಲಿ ಪಾಕಿಸ್ತಾನ ಇಸ್ಲಾಮಾಬಾದ್ ನಲ್ಲಿನ ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದೆ ಹಾಗೂ ಭಾರತದೊಂದಿಗಿನ ದ್ವಿಪಕ್ಷೀಯ ವ್ಯಾಪಾರವನ್ನು ಅಮಾನತು ಮಾಡಿದೆ. 
ಪ್ರಧಾನಿ ಇಮ್ರಾನ್ ಖಾನ್ ಅವರ ಅಧ್ಯಕ್ಷತೆಯಲ್ಲಿ ಒಂದು ವಾರದೊಳಗೆ ರಾಷ್ಟ್ರೀಯ ಭದ್ರತಾ ಸಮಿತಿಯ (ಎನ್‌ಎಸ್‌ಸಿ) ಎರಡನೇ ಅಧಿವೇಶನದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
"ನಮ್ಮ ರಾಯಭಾರಿಗಳು ಇನ್ನು ಮುಂದೆ ನವದೆಹಲಿಯಲ್ಲಿ ಇರುವುದಿಲ್ಲ ಮತ್ತು ಅವರ ಸಹವರ್ತಿಗಳನ್ನು ಸಹ ವಾಪಸ್ ಕಳುಹಿಸಲಾಗುವುದು" ಎಂದು ವಿದೇಶಾಂಗ ಸಚಿವ ಷಾ ಮಹಮೂದ್ ಖುರೇಷಿ ಎ.ಆರ್.ವೈ. ನ್ಯೂಸ್ ಗೆ ಹೇಳಿದ್ದಾರೆ.
ಸಭೆಯ ನಂತರ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಲು, ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರವನ್ನು ಸ್ಥಗಿತಗೊಳಿಸಲು, ನಿರ್ಧರಿಸುವುದರೊಡನೆ ಕಾಶ್ಮೀರ ವಿಚಾರದಲ್ಲಿನ ಭಾರತದ ನಿರ್ಧಾರವನ್ನು ವಿಶ್ವಸಂಸ್ಥೆಯಲ್ಲಿ ಪ್ರಶ್ನಿಸಲು ತೀರ್ಮಾನಿಸಿದೆ. ಮಾತ್ರವಲ್ಲ ಆಗಸ್ಟ್ 14 ರಂದು ಕಾಶ್ಮೀರಿಗಳು ಒಗ್ಗಟ್ಟಾಗಿ ಕಾಶ್ಮೀರದಲ್ಲಿ ಪಾಕ್ ಸ್ವಾತಂತ್ರ ದಿನಾಚರಣೆ ಮಾಡುವುದಕ್ಕೆ  ಎನ್‌ಎಸ್‌ಸಿ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com