ಸಂಜೋತಾ ಬಳಿಕ, ಥಾರ್ ಎಕ್ಸ್ ಪ್ರೆಸ್ ರೈಲನ್ನೂ ತಡೆದ ಪಾಕಿಸ್ತಾನ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ ಇದನ್ನು ವಿರೋಧಿಸಿ ಸಂಜೋತಾ ಎಕ್ಸ್ ಪ್ರೆಸ್ ರೈಲು ಸ್ಥಗಿತಗೊಳಿಸಿದ್ದ ಪಾಕಿಸ್ತಾನ ಇದೀಗ ಥಾರ್ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನೂ ಸ್ಥಗಿತಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದು ಮಾಡಿದ ಬೆನ್ನಲ್ಲೇ ಇದನ್ನು ವಿರೋಧಿಸಿ ಸಂಜೋತಾ ಎಕ್ಸ್ ಪ್ರೆಸ್ ರೈಲು ಸ್ಥಗಿತಗೊಳಿಸಿದ್ದ ಪಾಕಿಸ್ತಾನ ಇದೀಗ ಥಾರ್ ಎಕ್ಸ್‌ಪ್ರೆಸ್‌ ರೈಲು ಸೇವೆಯನ್ನೂ ಸ್ಥಗಿತಗೊಳಿಸಿದೆ.

ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ಕುದಿಯುತ್ತಿರುವ ಪಾಕಿಸ್ತಾನ ನಿನ್ನೆಯಷ್ಟೇ ಸಂಜೋತಾ ಎಕ್ಸ್‌ಪ್ರೆಸ್‌ ರೈಲನ್ನು ರದ್ದುಗೊಳಿಸಿತ್ತು. ಇದೀಗ ಇದರ ಮುಂದುವರೆದ ಭಾಗ ಎಂಬಂತೆ ಥಾರ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನೂ ಕೂಡ ಸ್ಥಗಿತಗೊಳಿಸಿದೆ. 

ಈ ಕುರಿತಂತೆ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್  ಹೇಳಿಕೆ ನೀಡಿದ್ದು, 'ನಾವು ಥಾರ್ ಎಕ್ಸ್ ಪ್ರೆಸ್‌ ರೈಲನ್ನು ರದ್ದುಗೊಳಿಸಲು ತೀರ್ಮಾನಿಸಿದ್ದೇವೆ ಎಂದು ಶೇಖ್ ರಶೀದ್ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ. 'ಪಾಕಿಸ್ತಾನದ ಖೋಕ್ರಾಪರ್‌ ನಿಂದ ಭಾರತದ ಮೊನಬಾವೊ ನಡುವೆ ಥಾರ್ ಎಕ್ಸ್ ಪ್ರೆಸ್ ವಾರಕ್ಕೊಂದು ಬಾರಿ ಸಂಚರಿಸುತ್ತದೆ. ನಾನು ರೈಲ್ವೆ ಸಚಿವರಾಗಿರುವವರೆಗೆ ಪಾಕಿಸ್ತಾನ ಮತ್ತು ಭಾರತ ನಡುವೆ ಯಾವುದೇ ರೈಲು ಸಂಚರಿಸುವುದಿಲ್ಲ ಎಂದು ಶೇಖ್ ರಶೀದ್ ಆಕ್ರೋಶದಿಂದ ಹೇಳಿದ್ದಾರೆ.

ಇನ್ನು ಈ ಥಾರ್ ಎಕ್ಸ್ ಪ್ರೆಸ್ ರೈಲು ಜೋಧ್ ಪುರದ ಭಗತ್ ಕಿ ಕೋಠಿ ರೈಲು ನಿಲ್ದಾಣದಿಂದ ಕರಾಚಿಗೆ ಪ್ರತೀ ಶುಕ್ರವಾರ ರಾತ್ರಿ ಸಂಚರಿಸುತ್ತಿತ್ತು. ಸುಮಾರು 41 ವರ್ಷಗಳ ರೈಲು ಸೇವೆ ರದ್ಧತಿ ಬಳಿಕ 2006 ಫೆಬ್ರವರಿ 18ರಂದು ಈ ಥಾರ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಪುನಃ ಆರಂಭಗೊಳಿಸಲಾಗಿದ್ದು. ಇದೀಗ ಪಾಕಿಸ್ತಾನದ ಅಹಂಕಾರದಿಂದಾಗಿ ಮತ್ತೆ ಈ ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ. ಕಳೆದ 13 ವರ್ಷಗಳಲ್ಲಿ ಈ ರೈಲಿನಲ್ಲಿ ಸುಮಾರು 4 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com