ಕಾಶ್ಮೀರ: ಯುಎನ್, ಯುಎಸ್ ಜೊತೆ ಸೇರಿ ಪರಾಮ್ತಮಿತ್ರ ಪಾಕ್ ಗೆ ಕೈಕೊಟ್ಟ ಚೀನಾ!

ಕಾಶ್ಮೀರದ ಆರ್ಟಿಕಲ್ 370 ರದ್ದತಿ ವಿಷಯದಲ್ಲಿ ವಿನಾಕಾರಣ ಭಾರತದ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿರುವ ಪಾಕಿಸ್ತಾನಕ್ಕೆ ಪ್ರಪಂಚದ ಯಾವುದೇ ಮೂಲೆಯಲ್ಲೂ ಬೆಂಬಲ ಸಿಗುತ್ತಿಲ್ಲ. ಪಾಕಿಸ್ತಾನದ ಪರಮಾಪ್ತ ಮಿತ್ರ ಚೀನಾ ಸಹ ಈಗ ಕೈಚೆಲ್ಲಿರುವುದು ಹೊಸ ಸಂಗತಿ.
ಕಾಶ್ಮೀರ: ಯುಎನ್, ಯುಎಸ್ ಜೊತೆ ಸೇರಿ ಪರಾಮ್ತಮಿತ್ರ ಪಾಕ್ ಗೆ ಕೈಕೊಟ್ಟ ಚೀನಾ!

ನವದೆಹಲಿ: ಕಾಶ್ಮೀರದ ಆರ್ಟಿಕಲ್ 370 ರದ್ದತಿ ವಿಷಯದಲ್ಲಿ ವಿನಾಕಾರಣ ಭಾರತದ ವಿರುದ್ಧ ವಿಶ್ವಸಂಸ್ಥೆಗೆ ದೂರು ನೀಡಿರುವ ಪಾಕಿಸ್ತಾನಕ್ಕೆ ಪ್ರಪಂಚದ ಯಾವುದೇ ಮೂಲೆಯಲ್ಲೂ ಬೆಂಬಲ ಸಿಗುತ್ತಿಲ್ಲ. ಪಾಕಿಸ್ತಾನದ ಪರಮಾಪ್ತ ಮಿತ್ರ ಚೀನಾ ಸಹ ಈಗ ಕೈಚೆಲ್ಲಿರುವುದು ಹೊಸ ಸಂಗತಿ. 

ಭಾರತದ ಕಾಶ್ಮೀರ ಕ್ರಾಂತಿಯ ವಿರುದ್ಧ ಪಾಕಿಸ್ತಾನ ಮೊದಲು ವಿಶ್ವಸಂಸ್ಥೆಗೆ ದೂರು ನೀಡಿತ್ತು. ಆದರೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷರು ಪಾಕಿಸ್ತಾನದ ಪತ್ರವನ್ನು ಪರಿಗಣಿಸಿಯೂ ಇಲ್ಲ, ಅದರ ಬಗ್ಗೆ ಪ್ರತಿಕ್ರಿಯೆ ನೀಡಲೂ ಇಲ್ಲ. ಇದು ಪಾಕಿಸ್ತಾನಕ್ಕೆ ಬಿದ್ದ ಬಲವಾದ ಹೊಡೆತ. ವಿಶ್ವಸಂಸ್ಥೆಯಲ್ಲಿ ಮುಖಭಂಗವಾಗುತ್ತಿದ್ದಂತೆಯೇ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಚೀನಾಗೆ ದೌಡಾಯಿಸಿದ್ದರು. ಆದರೆ ಚೀನಾ ಸಹ ಕಟುವಾಗಿ ಪ್ರತಿಕ್ರಿಯೆ ನೀಡಿದ್ದು, ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನಕ್ಕೆ ಇದ್ದ ಕೊನೆಯ ದಾರಿಯೂ ಬಂದ್ ಆಗಿದೆ. 

ಪಾಕಿಸ್ತಾನ, ಭಾರತ ಮಿತ್ರ ರಾಷ್ಟ್ರಗಳು, ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆ ಹಾಗೂ ಶಿಮ್ಲಾ ಒಪ್ಪಂದದ ಮೂಲಕವೇ ಪಾಕಿಸ್ತಾನ ಬಗೆಹರಿಸಿಕೊಳ್ಳಬೇಕು ಎಂಬ ಸ್ಪಷ್ಟ ಸಂದೇಶ ಚೀನಾ ಜೊತೆ ಮಾತನಾಡಿದ ಪಾಕಿಸ್ತಾನ ಸಚಿವ ಶಾ ಮೊಹಮ್ಮದ್ ಖುರೇಷಿಗೆ ಸಿಕ್ಕಿದೆ. ಆರ್ಟಿಕಲ್ 370 ರದ್ದುಗೊಳಿಸಿದ್ದಕ್ಕೆ ಭಾರತದ ವಿರುದ್ಧ ಕೂಗಾಡುತ್ತಿದ್ದ ಖುರೇಷಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಖಾಲಿ ಕೈಲಿ ವಾಪಸ್ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com