ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ಭಾರತ, ಚೀನಾ ಈಗ 'ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲ',  WTO ಲಾಭ ಪಡೆಯಲು ಬಿಡುವುದಿಲ್ಲ: ಟ್ರಂಪ್

ಭಾರತ ಹಾಗೂ ಚೀನಾ 'ಅಭಿವೃದ್ಧಿ ಹೊಂದುತ್ತಿರುವ' ರಾಷ್ಟ್ರಗಳಾಗಿ ಉಳಿದಿಲ್ಲ. ಅವು 'ಅಭಿವೃದ್ಧಿ ಹೊಂದಿದ ದೇಶ'ಗಳಾಗಿವೆ. ಹೀಗಾಗಿ 'ಅಭಿವೃದ್ಧಿ ಹೊಂದುತ್ತಿರುವ ದೇಶ' ಎಂಬ ಹಣೆಪಟ್ಟಿ ಕಟ್ಟಿಕೊಂಡು ವಿಶ್ವ ವಾಣಿಜ್ಯ....

ವಾಷಿಂಗ್ಟನ್: ಭಾರತ ಹಾಗೂ ಚೀನಾ 'ಅಭಿವೃದ್ಧಿ ಹೊಂದುತ್ತಿರುವ' ರಾಷ್ಟ್ರಗಳಾಗಿ ಉಳಿದಿಲ್ಲ. ಅವು 'ಅಭಿವೃದ್ಧಿ ಹೊಂದಿದ ದೇಶ'ಗಳಾಗಿವೆ. ಹೀಗಾಗಿ 'ಅಭಿವೃದ್ಧಿ ಹೊಂದುತ್ತಿರುವ ದೇಶ' ಎಂಬ ಹಣೆಪಟ್ಟಿ ಕಟ್ಟಿಕೊಂಡು ವಿಶ್ವ ವಾಣಿಜ್ಯ ಸಂಸ್ಥೆ( WTO)ಯಿಂದ ಉಪಯೋಗ ಪಡೆಯುತ್ತಿವೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

'ಅಮೆರಿಕ ಫಸ್ಟ್' ಪಾಲಿಸಿಗೆ ಆದ್ಯತೆ ನೀಡುತ್ತಿರುವ ಡೊನಾಲ್ಡ್ ಟ್ರಂಪ್, ಇನ್ನು ಮುಂದೆ ಭಾರತ ಮತ್ತು ಚೀನಾ ಡಬ್ಲ್ಯುಟಿಒ ಲಾಭ ಪಡೆಯಲು ಬಿಡುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಭಾರತ, ಅಮೆರಿಕದ ಸರಕುಗಳಿಗೆ ಅತಿಯಾದ ಆಮದು ಸುಂಕ ವಿಧಿಸುತ್ತಿರುವುದನ್ನು ಖಂಡಿಸಿ, ಭಾರತವನ್ನು 'ಟ್ಯಾರಿಫ್ ಕಿಂಗ್' ಎಂದು ಟ್ರಂಪ್ ಹೇಳಿದ್ದರು.

ಈಗಾಗಲೇ ಚೀನಾದ ಸರಕುಗಳ ಮೇಲೆ ಅಮೆರಿಕ ಅತಿಯಾದ ಆಮದು ಸುಂಕ ಹೇರಿದ್ದು, ಚೀನಾ ಸಹ ಅದಕ್ಕೆ ಪ್ರತೀಕಾರ ತೀರಿಸಿಕೊಂಡಿದೆ. ತನ್ನಿಮಿತ್ತ ಚೀನಾ ಮತ್ತು ಅಮೆರಿಕ ನಡುವೆ ವಾಣಿಜ್ಯ ಯುದ್ಧ ಆರಂಭವಾಗಿದೆ. ಭಾರತ ಅಮೆರಿಕದಿಂದ ರಫ್ತಾಗುತ್ತಿದ್ದ ಹಾರ್ಲೆ ಡೆವಿಡ್ಸನ್ ಬೈಕುಗಳ ಮೇಲೆ ಅತಿಯಾಗಿ ಆಮದು ಸುಂಕ ಹೇರುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ದೂರಿದ್ದರು. ಜೊತೆಗೆ ಅಮೆರಿಕದ ವಸ್ತುಗಳ ಮೇಲೆ ಭಾರತ ಹೇರುತ್ತಿರುವ ಅತಿಯಾದ ಸುಂಕಕ್ಕೆ ಪ್ರತಿಯಾಗಿ, ಭಾರತಕ್ಕೆ ನೀಡಿದ್ದ 'ಆದ್ಯತೆಯ ವಹಿವಾಟಿನ ಸೌಲಭ್ಯ'(Generalized System of Preferences)ವನ್ನು ಟ್ರಂಪ್ ಹಿಂಪಡೆದಿದ್ದರು.

Related Stories

No stories found.

Advertisement

X
Kannada Prabha
www.kannadaprabha.com