ಗ್ರೇಸ್ 1 ಟ್ಯಾಂಕರ್ ಬಿಡುಗಡೆ ಖಚಿತ ಪಡಿಸಿದ ರಾಯಭಾರಿ

ಒಂದು ತಿಂಗಳ ಹಿಂದೆ ಜಿಬ್ರಾಲ್ಟರ್ ನಲ್ಲಿ ವಶಕ್ಕೆ ಪಡೆದಿದ್ದ ಇರಾನಿನ ತೈಲವನ್ನು ಹೊತ್ತ ಗ್ರೇಸ್ 1 ಟ್ಯಾಂಕರ್ ನ್ನು ಬ್ರಿಟನ್ ನ ಇರಾನ್‌ ರಾಯಭಾರಿ ಹಮೀದ್ ಬೈದಿನೆಜಾದ್ ಅವರು ಗುರುವಾರ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಟೆಹರಾನ್: ಒಂದು ತಿಂಗಳ ಹಿಂದೆ ಜಿಬ್ರಾಲ್ಟರ್ ನಲ್ಲಿ ವಶಕ್ಕೆ ಪಡೆದಿದ್ದ ಇರಾನಿನ ತೈಲವನ್ನು ಹೊತ್ತ ಗ್ರೇಸ್ 1 ಟ್ಯಾಂಕರ್ ನ್ನು ಬ್ರಿಟನ್ ನ ಇರಾನ್‌ ರಾಯಭಾರಿ ಹಮೀದ್ ಬೈದಿನೆಜಾದ್ ಅವರು ಗುರುವಾರ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.

ವಶಕ್ಕೆ ಪಡೆದ ಟ್ಯಾಂಕರ್ ನ್ನು ಜಿಬ್ರಾಲ್ಟರ್ ಅಧಿಕಾರಿಗಳ ಮತ್ತು ನ್ಯಾಯಾಲಯದಿಂದ ನಂತರ, ಇರಾನಿನ ತೈಲದೊಂದಿಗೆ ಅಕ್ರಮವಾಗಿ ಬಂಧನಕ್ಕೊಳಗಾದ ಟ್ಯಾಂಕರ್ ಅನ್ನು ಬಿಡುಗಡೆ ಮಾಡಲಾಗಿದೆ "ಎಂದು ಬೈದಿನೆಜಾದ್ ತಮ್ಮ ಟ್ವಿಟ್ಟರ್ ಬ್ಲಾಗ್ ನಲ್ಲಿ ಬರೆದಿದ್ದಾರೆ.

ಬ್ರಿಟನ್‌ಗೆ ಕೆಲವು ದಾಖಲೆಗಳನ್ನು ಸಲ್ಲಿಸಲಾಗಿದ್ದು, ತನ್ನ ಗ್ರೇಸ್ ೧ ತೈಲ ಟ್ಯಾಂಕರನ್ನು ಅದು ಶೀಘ್ರವೇ ಬಿಡುಗಡೆ ಮಾಡಬಹುದಾಗಿದೆ ಎಂದು ಇರಾನ್ ಹೇಳಿದೆ. ಕೆಲವು ದಾಖಲೆಗಳನ್ನು ನೀಡಿದ ಬಳಿಕ, ಇರಾನ್‌ನ ತೈಲ ಟ್ಯಾಂಕರ್ ಗ್ರೇಸ್ 1ನ್ನು ಬಿಡುಗಡೆ ಮಾಡಲು ಬ್ರಿಟನ್ ಉತ್ಸುಕವಾಗಿದೆ. ಟ್ಯಾಂಕರ್‌ ನ ಬಿಡುಗಡೆ ಶೀಘ್ರವೇ ಆಗುತ್ತದೆ ಎಂದು ಆಶಿಸುತ್ತೇವೆ ಎಂದು ಇರಾನ್‌ನ ಬಂದರು ಮತ್ತು ಸಾಗರ ತೀರ ಇಲಾಖೆಯ ಉಪ ಮುಖ್ಯಸ್ಥ ಜಲೀಲ್ ಇಸ್ಲಾಮಿ ಹೇಳಿದ್ದಾರೆ ಎಂದು ಇರ್ನ ಸುದ್ದಿ ಸಂಸ್ಥೆ ತಿಳಿಸಿದೆ.

ಅಲ್ಲದೆ ಟ್ಯಾಂಕರ್ ನಲ್ಲಿದ್ದ ಭಾರತೀಯ ಮೂಲದ ಸಿಬ್ಬಂದಿಗಳೂ ಸೇರಿದಂತೆ ಎಲ್ಲ ಸಿಬ್ಬಂದಿಗಳ ವಿಚಾರಣೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ರಿಟನ್‌ನ ಮೆಡಿಟರೇನಿಯನ್ ಭೂಭಾಗ ಜಿಬ್ರಾಲ್ಟರ್‌ನ ಕರಾವಳಿಯಲ್ಲಿ ಬ್ರಿಟಿಷ್ ರಾಯಲ್ ನೌಕಾಪಡೆಯ ಸೈನಿಕರು ಜುಲೈ 4 ರಂದು ಸಿರಿಯಾಕ್ಕೆ ತೈಲ ಸಾಗಿಸುವ ಮೂಲಕ ಐರೋಪ್ಯ ಒಕ್ಕೂಟದ ದಿಗ್ಭಂಧನಗಳನ್ನು ಇರಾನ್ ಉಲ್ಲಂಘಿಸುತ್ತಿದೆ ಎಂಬ ಶಂಕೆಯಲ್ಲಿ ಇರಾನ್‌ ನ ತೈಲ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com