ಮಲ್ಯೇಷ್ಯಾದಿಂದಲೂ ವಿವಾದಿತ ಧಾರ್ಮಿಕ ಪ್ರಚಾರಕ ಝಾಕಿರ್ ನಾಯ್ಕ್ ಗೆ ಗೇಟ್ ಪಾಸ್?

ಜನಾಂಗೀಯ ಮತ್ತು ಪ್ರಚೋದನಾತ್ಮಕ ಭಾಷಣ ಮಾಡಿದ ಗಂಭೀರ ಆರೋಪ ಎದುರಿಸುತ್ತಿರುವ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ರ ಮಲ್ಯೇಷ್ಯಾ ನಾಗರೀಕತ್ವ ಹಕ್ಕು ಹಿಂಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

'ಮಲೇಷ್ಯಾದಲ್ಲಿ ಮುಸ್ಲಿಮರಿಗಿಂತ ಹಿಂದೂಗಳಿಗೆ 100 ಪಟ್ಟು ಹೆಚ್ಚು ಹಕ್ಕುಗಳಿವೆ'
ಜನಾಂಗೀಯ ಮತ್ತು ಪ್ರಚೋದನಾತ್ಮಕ ಭಾಷಣ ಆರೋಪ: ಝಾಕಿರ್ ನಾಯ್ಕ್ ವಿಚಾರಣೆ ನಡೆಸಲಿರುವ ಮಲೇಷ್ಯಾ

ಕೌಲಾಲಂಪುರ: ಜನಾಂಗೀಯ ಮತ್ತು ಪ್ರಚೋದನಾತ್ಮಕ ಭಾಷಣ ಮಾಡಿದ ಗಂಭೀರ ಆರೋಪ ಎದುರಿಸುತ್ತಿರುವ ವಿವಾದಿತ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ರ ಮಲ್ಯೇಷ್ಯಾ ನಾಗರೀಕತ್ವ ಹಕ್ಕು ಹಿಂಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಝಾಕಿರ್ ನಾಯ್ಕ್ ಜನಾಂಗೀಯ ಮತ್ತು ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಲೇಷ್ಯಾದ ಹಿಂದುಗಳಿಗೆ ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರಿಗೆ ಇರುವುದಕ್ಕಿಂತ ‘100 ಪಟ್ಟು ಹೆಚ್ಚು ಹಕ್ಕುಗಳಿವೆ’ ಎಂದು ಹೇಳಿದ್ದರು ಎಂದು ಆರೋಪಿಸಲಾಗಿದೆ. ಈ ಕುರಿತಂತೆ ಹೇಳಿಕೆ ನೀಡಿರುವ ಮಲೇಷ್ಯಾ ಸರ್ಕಾರ ಧಾರ್ಮಿಕ ಪ್ರಚಾರಕ ಝಾಕಿರ್ ನಾಯ್ಕ್ ರನ್ನು ವಿಚಾರಣೆಗಾಗಿ ಕರೆಸಲಾಗುವುದು ಎಂದು ಹೇಳಿದ್ದಾರೆ.

ಝಾಕಿರ್ ಅವರನ್ನು ಗಡೀಪಾರು ಮಾಡಬೇಕೆಂದು ದೇಶದ ಸಚಿವರು ಆಗ್ರಹಿಸಿದ ನಂತರ ಅವರ ವಿಚಾರಣೆ ನಡೆಸಲು ಮಲೇಷ್ಯಾ ಸರ್ಕಾರ ನಿರ್ಧರಿಸಿದೆ. ಜನಾಂಗೀಯ ದ್ವೇಷ  ಉಂಟು ಮಾಡುವ ಸುಳ್ಳು ಸುದ್ದಿಗಳನ್ನು ಹರಡಿದ್ದಕ್ಕಾಗಿ ಝಾಕಿರ್ ನಾಯ್ಕ್ ಹಾಗೂ ಇತರ ವ್ಯಕ್ತಿಗಳ ಹಾಗೂ ಸಂಘಟನೆಗಳ ವಿಚಾರಣೆ ನಡೆಸಲಾಗುವುದು' ಎಂದು ಮಲೇಷ್ಯಾದ ಗೃಹ ಸಚಿವ ಮುಹಿಯುದ್ದೀನ್ ಯಾಸಿನ್ ಹೇಳಿದ್ದಾರೆ.

ಭಾರತದಲ್ಲಿ ದ್ವೇಷ ಭಾಷಣ ಹಾಗೂ ಅಕ್ರಮ ಹಣ ವಹಿವಾಟು ನಡೆಸಿದ ಆರೋಪ ಎದುರಿಸುತ್ತಿರುವ ಝಾಕಿರ್ ನಾಯ್ಕ್ ಮಲೇಷ್ಯಾದಲ್ಲಿ ಮೂರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಅಲ್ಲದೆ ಈ ಹಿಂದೆ ಢಾಕಾ ಉಗ್ರ ದಾಳಿ ಸಂದರ್ಭದಲ್ಲಿಯೂ ಝಾಕಿರ್ ನಾಯ್ಕ್ ಹೆಸರು ಪ್ರಸ್ತಾಪವಾಗಿತ್ತು. ಅಂದು ದಾಳಿ ನಡೆಸಿದ್ದ ಉಗ್ರರು ಝಾಕಿರ್ ನಾಯ್ಕ್ ಅವರ ಭಾಷಣಗಳಿಂದ ಸ್ಪೂರ್ತಿಗೊಂಡಿದ್ದರು ಎಂದು ಢಾಕಾ ಪೊಲೀಸರು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com