ಪಾಕ್ ನಲ್ಲಿ ಭೀಕರ ಉಗ್ರ ದಾಳಿ, ಬಾಂಬ್ ಸ್ಫೋಟಕ್ಕೆ 5 ಸಾವು

ಪಾಕಿಸ್ತಾನದಲ್ಲಿ ಭೀಕರ ಉಗ್ರ ದಾಳಿ ನಡೆದಿದ್ದು, ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮಸೀದಿಯಲ್ಲಿ ಸ್ಫೋಟ
ಮಸೀದಿಯಲ್ಲಿ ಸ್ಫೋಟ

ಬಲೂಚಿಸ್ತಾನ ಪ್ರಾಂತ್ಯದ ಖ್ಯಾತ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ದುರ್ಘಟನೆ

ಕರಾಚಿ: ಪಾಕಿಸ್ತಾನದಲ್ಲಿ ಭೀಕರ ಉಗ್ರ ದಾಳಿ ನಡೆದಿದ್ದು, ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಬಲೂಚಿಸ್ತಾನದ ಕ್ವೆಟ್ಟಾ ಕುಲ್ಚಕ್‌ ನಲ್ಲಿ ಶುಕ್ರವಾರ ಮಸೀದಿಯೊಳಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಪ್ರಬಲ ಬಾಂಬ್ ಸ್ಫೋಟಗೊಂಡು ಐದು ಮಂದಿ ಸಾವಿಗೀಡಾಗಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ ಸುಮಾರು 8ರಿಂದ 10 ಕೆಜಿ ಸಾಮರ್ಥ್ಯದ ಸ್ಫೋಟಕ ವಸ್ತುಗಳನ್ನು ಇಟ್ಟು ಈ ಸ್ಫೋಟ ನಡೆಸಲಾಗಿದ್ದು, ಬಾಂಬ್ ಅನ್ನು ಮಸೀದಿಯ ಒಳಗೆ ಉಗ್ರರು ಅಡಗಿಸಿಟ್ಟಿದ್ದರು ಎನ್ನಲಾಗಿದೆ. ಬಾಂಬ್ ಗೆ ಟೈಮರ್ ಅಳವಡಿಸಿ ಪ್ರಾರ್ಥನೆ ಮುಕ್ತಾಯದ ಸಂದರ್ಭದಲ್ಲಿ ಬಾಂಬ್ ಸ್ಫೋಟಗೊಂಡಿದೆ.

ಸ್ಫೋಟದ ಹೊಣೆಯನ್ನು ಇದುವರೆಗೂ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ. ಆದರೆ ಇಸಿಸ್ ಉಗ್ರ ಸಂಘಟನೆ ಸ್ಥಳೀಯ ತಾಲಿಬಾನ್ ಉಗ್ರರೊಂದಿಗೆ ಸೇರಿ ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ.

ಕುಲ್ಚಕ್‌ನಲ್ಲಿ ತಿಂಗಳೊಪ್ಪತ್ತಿನಲ್ಲಿ ಇದು ನಾಲ್ಕನೇ ಬಾಂಬ್ ಸ್ಫೋಟವಾಗಿದೆ. ಹದಿನೈದು ದಿನಗಳ ಹಿಂದೆಯಷ್ಟೇ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com