ಆಫ್ಘಾನಿಸ್ತಾನದಲ್ಲಿ ಭೀಕರ ಉಗ್ರ ದಾಳಿ, ಬಾಂಬ್ ಸ್ಫೋಟಕ್ಕೆ 63 ಬಲಿ, 180 ಮಂದಿಗೆ ಗಾಯ

ಆಫ್ಘಾನಿಸ್ತಾನದಲ್ಲಿ ಮತ್ತೆ ಉಗ್ರರು ತಮ್ಮ ಪೈಶಾಚಿಕ ದಾಳಿ ಮುಂದುವರೆಸಿದ್ದು, ವಿವಾಹ ನಡೆಯುತ್ತಿರುವಾಗಲೇ ವೆಡ್ಡಿಂಗ್ ಹಾಲ್ ನಲ್ಲಿ ಬಾಂಬ್ ಸ್ಫೋಟ ನಡೆಸಿ ಕನಿಷ್ಛ 63 ಮಂದಿಯ ಸಾವಿಗೆ ಕಾರಣರಾಗಿದ್ದಾರೆ.

Published: 18th August 2019 11:54 AM  |   Last Updated: 18th August 2019 11:54 AM   |  A+A-


63 dead in Kabul blast, over 180 injured

ಸಂಗ್ರಹ ಚಿತ್ರ

Posted By : Srinivasamurthy VN
Source : ANI

ಕಾಬೂಲ್: ಆಫ್ಘಾನಿಸ್ತಾನದಲ್ಲಿ ಮತ್ತೆ ಉಗ್ರರು ತಮ್ಮ ಪೈಶಾಚಿಕ ದಾಳಿ ಮುಂದುವರೆಸಿದ್ದು, ವಿವಾಹ ನಡೆಯುತ್ತಿರುವಾಗಲೇ ವೆಡ್ಡಿಂಗ್ ಹಾಲ್ ನಲ್ಲಿ ಬಾಂಬ್ ಸ್ಫೋಟ ನಡೆಸಿ ಕನಿಷ್ಛ 63 ಮಂದಿಯ ಸಾವಿಗೆ ಕಾರಣರಾಗಿದ್ದಾರೆ.

ಆಫ್ಘಾನಿಸ್ತಾನದ ಕಾಬೂಲ್ ನ ಪೊಲೀಸ್ ಡಿಸ್ಟ್ರಿಕ್ಟ್ 6ನಲ್ಲಿ ಈ ಭೀಕರ ದಾಳಿ ನಡೆದಿದ್ದು, ಸ್ಥಳೀಯ ಕಾಲಮಾನ ರಾತ್ರಿ 10.40ರ ಸುಮಾರಿನಲ್ಲಿ ಇಲ್ಲಿ ನಡೆಯುತ್ತಿದ್ದ ವಿವಾಹ ಸಂದರ್ಭದಲ್ಲಿ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದಾರೆ. ಪರಿಣಾಮ ಸ್ಥಳದಲ್ಲೇ 63 ಮಂದಿ ಸಾವನ್ನಪ್ಪಿದ್ದು, 180ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇನ್ನು ಈ ಕುರಿತಂತೆ ಆಫ್ಘನ್ ಸರ್ಕಾರ ಕೂಡ ಮಾಹಿತಿ ನೀಡಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಆಫ್ಗಾನಿಸ್ತಾನದ ಆಂತರಿಕ ಸಚಿವಾಲಯದ ವಕ್ತಾರ ನುಸ್ರತ್ ರಹಿಮಿ ಹೇಳಿದ್ದಾರೆ.


ಪಶ್ಚಿಮ ಅಪ್ಘಾನಿಸ್ತಾನದ ರಾಜಧಾನಿಯಲ್ಲಿ ಮದುವೆ ರಿಸಪ್ಶನ್ ವೇಳೆ ಬಾಂಬ್ ಸ್ಫೋಟ ನಡೆದಿರುವುದನ್ನು ಅಫ್ಘಾನ್ ಆಂತರಿಕ ಸಚಿವಾಲಯ ದೃಢಪಡಿಸಿದೆ. ಆದರೆ ಗಾಯಗೊಂಡವರ ನಿಖರವಾದ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ.
ಕಳೆದ ರಾತ್ರಿ 10.40ರ ವೇಳೆಗೆ ಕಾಬೂಲ್‌ನ ಪಿಡಿ 6ನಲ್ಲಿರುವ ಶಹರ್ರ್-ಇ- ದುಬೈಲ್ ಮದುವೆ ಹಾಲ್‌ನಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ನರ್ಸತ್ ರಹ್ಮಾನಿ ಅವರು ಟೊಲೊನ್ಯೂಸ್‌ಗೆ ತಿಳಿಸಿದ್ದಾರೆ.
 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp