ಕಾಶ್ಮೀರದ ವಿಧಿ 370 ರದ್ದತಿ ವಿಚಾರ ಭಾರತದ ಆಂತರಿಕ ವಿಚಾರ: ಬಾಂಗ್ಲಾದೇಶ

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ವಿಧಿ 370 ರದ್ಧತಿ ಭಾರತ ದೇಶದ ಆಂತರಿಕ ವಿಚಾರ ಎಂದು ಬಾಂಗ್ಲಾದೇಶ ಅಭಿಪ್ರಾಯಪಟ್ಟಿದೆ.
ಜೈಶಂಕರ್-ಬಾಂಗ್ಲಾದೇಶ
ಜೈಶಂಕರ್-ಬಾಂಗ್ಲಾದೇಶ

ಭಾರತಕ್ಕೆ ಬೆಂಬಲ ನೀಡಿ ಪರೋಕ್ಷವಾಗಿ ಪಾಕಿಸ್ತಾನಕ್ಕೆ ತಿವಿದ ಬಾಂಗ್ಲಾದೇಶ

ಢಾಕಾ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ವಿಧಿ 370 ರದ್ಧತಿ ಭಾರತ ದೇಶದ ಆಂತರಿಕ ವಿಚಾರ ಎಂದು ಬಾಂಗ್ಲಾದೇಶ ಅಭಿಪ್ರಾಯಪಟ್ಟಿದೆ.

ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಅವರು ಬಾಂಗ್ಲಾದೇಶ ಪ್ರವಾಸದಲ್ಲಿರುವ ಹೊತ್ತಿನಲ್ಲೇ ಬಾಂಗ್ಲಾದೇಶ ಈ ಹೇಳಿಕೆ ನೀಡಿರುವುದು ಪ್ರಮುಖವಾಗಿದೆ. ಈ ಕುರಿತಂತೆ ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ವಿಧಿ 370 ರದ್ಧತಿ ವಿಚಾರ ಸಂಪೂರ್ಣ ಭಾರತದ ಆಂತರಿಕ ವಿಚಾರ. ಕಣಿವೆ ರಾಜ್ಯದಲ್ಲಿ ಶಾಂತಿಸ್ಥಾಪನೆಗೆ ಬೇಕಾದ ಎಲ್ಲ ಯಾವುದೇ ನಿರ್ಣಯ ಕೈಗೊಳ್ಳುವ ಹಕ್ಕು ಭಾರತಕ್ಕಿದೆ. ನಾವೂ ಕೂಡ ಕಣಿವೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಯಾವುದೇ ನಿರ್ಣಯಕ್ಕೂ ನಮ್ಮ ಬೆಂಬಲವಿರುತ್ತದೆ ಎಂದು ಹೇಳಿದೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂಗೆ ಭೂತಾನ್, ಮಾಲ್ಡೀವ್ಸ್ ದೇಶಗಳು ಭಾರತಕ್ಕೆ ಬೆಂಬಲ ನೀಡಿದ್ದು, ನಾಪಾಳ ಮತ್ತು ಆಫ್ಘಾನಿಸ್ತಾನ ಈ ವಿಚಾರವನ್ನು ಇದು ದ್ವಿಪಕ್ಷೀಯ ವಿಚಾರ ಎಂದು ಹೇಳಿ ಅಡ್ಡಗೋಡೆಯ ದೀಪ ಇಡುವ ಕಾರ್ಯ ಮಾಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com