'ಅಣುಬಾಂಬ್' ಮೂಲಕ ಭಾರತವನ್ನು 'ಸ್ವಚ್ಛ' ಮಾಡಿ ಬಿಡುತ್ತೇವೆ: ಪಾಕ್ ಮಾಜಿ ಕ್ರಿಕೆಟಿಗ ಮಿಯಾಂದಾದ್ ಬೆದರಿಕೆ

ಪಾಕಿಸ್ತಾನದ ಬಳಿ ಇರುವ ಅಣುಬಾಂಬ್ ಗಳ ಮೂಲಕ ಭಾರತವನ್ನು ಸ್ವಚ್ಛ ಮಾಡಿ ಬಿಡುತ್ತೇವೆ ಎಂದು ಮಾಜಿ ಕ್ರಿಕೆಟಿಗ ಜಾವೆದ್ ಮಿಯಾಂದಾದ್ ನೇರವಾಗಿಯೇ ಅಣ್ವಸ್ತ್ರ ಬೆದರಿಕೆ ಹಾಕಿದ್ದಾರೆ.
ಜಾವೆದ್ ಮಿಯಾಂದಾದ್
ಜಾವೆದ್ ಮಿಯಾಂದಾದ್

ಕಾಶ್ಮೀರ ವಿಚಾರ: 'ನಿನ್ನನ್ನು ನೀನು ರಕ್ಷಣೆ ಮಾಡಿಕೊಳ್ಳಲು ಯಾರನ್ನು ಬೇಕಾದರೂ ಕೊಲ್ಲಬಹುದು ಎಂಬ ನಿಯಮವಿದೆ'

ಇಸ್ಲಾಮಾಬಾದ್: ಪಾಕಿಸ್ತಾನದ ಬಳಿ ಇರುವ ಅಣುಬಾಂಬ್ ಗಳ ಮೂಲಕ ಭಾರತವನ್ನು ಸ್ವಚ್ಛ ಮಾಡಿ ಬಿಡುತ್ತೇವೆ ಎಂದು ಮಾಜಿ ಕ್ರಿಕೆಟಿಗ ಜಾವೆದ್ ಮಿಯಾಂದಾದ್ ನೇರವಾಗಿಯೇ ಅಣ್ವಸ್ತ್ರ ಬೆದರಿಕೆ ಹಾಕಿದ್ದಾರೆ.

ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ ವಿಧಿ 370ನ್ನು ರದ್ದುಗೊಳಿಸಿದ ಭಾರತ ಸರ್ಕಾರದ ನಿರ್ಣಯವನ್ನು ಖಂಡಿಸಿ ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೆದ್ ಮಿಯಾಂದಾದ್, ಭಾರತದದ ಕ್ರಮವನ್ನು ಖಂಡಿಸಿದ್ದಾರೆ. ಅಲ್ಲದೆ ಪಾಕಿಸ್ತಾನ ಪರವಾನಗಿ ಇರುವ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಹೀಗಿರುವಾಗ ನೀವು ಮೊದಲು ದಾಳಿ ಮಾಡಬೇಕು. ನಿನ್ನನ್ನು ನೀನು ರಕ್ಷಣೆ ಮಾಡಿಕೊಳ್ಳಲು ಯಾರನ್ನು ಬೇಕಾದರೂ ಕೊಲ್ಲಬಹುದು ಎಂಬ ನಿಯಮ ವಿಶ್ವಾದ್ಯಂತ ಇದೆ. ಹೀಗಾಗಿ ಮೊದಲು ಪಾಕಿಸ್ತಾನವೇ ದಾಳಿ ಮಾಡಬೇಕು. ಆಗ ಭಾರತಕ್ಕೆ ತನ್ನ ತಪ್ಪಿನ ಅರಿವು ಮತ್ತು ನೋವಾಗುತ್ತದೆ ಎಂದು ವಿಕೃತ ಹೇಳಿಕೆ ನೀಡಿದ್ದಾಕೆ.

ಇದೇ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮೋದಿ ಅವರಿಗೆ ಏನು ಹೇಳಲು ಬಯಸುತ್ತೀರಾ ಎಂದು ಸುದ್ದಿಗಾರ ಕೇಳಿದ ಪ್ರಶ್ನೆಗೆ ಉತ್ತರಿಸಿದೆ ಮಿಯಾಂದಾದ್, ನಾನು ಮೊದಲೇ ಹೇಳಿದ್ದೆ. ಭಾರತ ಕುತಂತ್ರಿ ದೇಶ. ನಾವು ಅಣುಬಾಂಬ್ ಗಳನ್ನು ಕೇವಲ ಪ್ರದರ್ಶನಕ್ಕೆ ಮಾತ್ರ ಇಡಬಾರದು. ಅವಗಳ ಬಳಕೆ ಕೂಡ ಮಾಡಬೇಕು. ಒಂದೇ ಒಂದು ಅಣುಬಾಂಬ್ ಮೂಲಕ ಭಾರತವನ್ನು ಸ್ವಚ್ಛ ಮಾಡಿಬಿಡುತ್ತೇವೆ ಎಂದು ಮಿಯಾಂದಾದ್ ಹೇಳಿದ್ದಾರೆ.

ಇನ್ನು ಕಾಶ್ಮೀರಕ್ಕೆ ಇದ್ದ ವಿಧಿ 370ರ ರದ್ಧತಿ ಮತ್ತು ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿದ್ದು ಪಾಕಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಈ ಹಿಂದೆ ಇದೇ ವಿಚಾರವಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದರು. ಕರಾಚಿಯಲ್ಲಿ ಬಕ್ರೀದ್ ನಿಮಿತ್ತ ಪ್ರಾರ್ಥನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸರ್ಫರಾಜ್, 'ಕಾಶ್ಮೀರ ಸಹೋದರರೊಂದಿಗೆ ಇಡೀ ಪಾಕಿಸ್ತಾನ ನಿಲ್ಲುತ್ತದೆ. ಈ ಕಠಿಣ ಸಂದರ್ಭದಲ್ಲಿ ಕಾಶ್ಮೀರಿ ಪ್ರಜೆಗಳನ್ನು ಕಾಪಾಡುವಂತೆ ಅಲ್ಲಾನನ್ನು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದರು.

ಅಂತೆಯೇ ಇದಕ್ಕೂ ಮೊದಲು ಇದೇ ವಿಚಾರವಾಗಿ ಮಾತನಾಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕೂಡ ಈ ಕುರಿತು ಟ್ವೀಟ್ ಮಾಡಿ, ಕಾಶ್ಮೀರಿ ನಿವಾಸಿಗಳಿಗೆ ಅವರ ಹಕ್ಕು ನೀಡಬೇಕು. ಈ ಕುರಿತಂತೆ ಕೂಡಲೇ ವಿಶ್ವಸಂಸ್ಥೆ ಮತ್ತು ವಿಶ್ವಸಮುದಾಯ ಮಧ್ಯ ಪ್ರವೇಶ ಮಾಡಬೇಕು. ಸ್ವಾತಂತ್ರ್ಯದ ಹಕ್ಕು ಎಲ್ಲರಿಗೂ ಇದೆ. ವಿಶ್ವಸಂಸ್ಥೆ ಮತ್ತು ಜಾಗತಿಕ ಒಕ್ಕೂಟ ರಚನೆಯಾಗಿದ್ದೇಕೆ... ಅವು ನಿದ್ರಿಸುತ್ತಿವೆಯೇ ಎಂದು ಕಿಡಿಕಾರಿದ್ದರು. ಶೊಯೆಬ್ ಅಖ್ತರ್ ಕೂಡ ಟ್ವೀಟ್ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಸ್ವಾತಂತ್ರ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಟ್ವೀಟ್ ಮಾಡಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com