ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಯುವತಿಯ ಗ್ಲಾಮರಸ್ ಫೋಟೋಶೂಟ್, ವಿಡಿಯೋ ವೈರಲ್!

ಯುವತಿಯೊರ್ವಳು ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಫೋಟೋಶೂಟ್ ಗೆ ಗ್ಲಾಮರಸ್ ಆಗಿ ಫೋಸ್ ಕೊಟ್ಟಿದ್ದು ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಯುವತಿಯ ವಿಶ್ವಾಸಕ್ಕೆ ಭೇಷ್ ಎಂದಿದ್ದಾರೆ.

Published: 22nd August 2019 12:30 PM  |   Last Updated: 22nd August 2019 12:30 PM   |  A+A-


Jessica

ಜೆಸ್ಸಿಕಾ

Posted By : Vishwanath S
Source : Online Desk

ವಾಷಿಂಗ್ಟನ್: ಯುವತಿಯೊರ್ವಳು ಚಲಿಸುತ್ತಿದ್ದ ಮೆಟ್ರೋ ರೈಲಿನಲ್ಲಿ ಫೋಟೋಶೂಟ್ ಗೆ ಗ್ಲಾಮರಸ್ ಆಗಿ ಫೋಸ್ ಕೊಟ್ಟಿದ್ದು ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಯುವತಿಯ ವಿಶ್ವಾಸಕ್ಕೆ ಭೇಷ್ ಎಂದಿದ್ದಾರೆ.

ನ್ಯೂಯಾರ್ಕ್ ನ ಜೆಸ್ಸಿಕಾ ಜಾರ್ಜ್ ಎಂಬುವರು ತನ್ನ ಮೊಬೈಲ್ ನಲ್ಲಿ ಟೈಮರ್ ಇಟ್ಟು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಳು. ಇದನ್ನು ಸಹ ಪ್ರಯಾಣಿಕನೊಬ್ಬ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ನೋಡಿದ ಅಭಿಮಾನಿಗಳು ಜೆಸ್ಸಿಕಾರ ವಿಶ್ವಾಸಕ್ಕೆ ಭೇಷ್ ಎಂದಿದ್ದಾರೆ. ಚಲಿಸುತ್ತಿದ್ದ ರೈಲಿನಲ್ಲಿ ಈ ಮಾಡುವುದಕ್ಕೆ ಧಮ್ ಬೇಕು ಎಂದಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ಈ ವಿಡಿಯೋ 90 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp