ಭಾರತದ ವಿರುದ್ಧ ತೊಡೆ ತಟ್ಟಿದ್ದ ಪಾಕ್ ಅನ್ನು ಕಪ್ಪುಪಟ್ಟಿಗೆ ಸೇರಿಸಿದ ಜಾಗತಿಕ ಸರ್ವೇಕ್ಷಣಾ ಸಂಸ್ಥೆ

ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಸಮರ ಸಾರಿದ್ದ ಪಾಕಿಸ್ತಾನವನ್ನು ಜಾಗತಿಕ ಸರ್ವೇಕ್ಷಣಾ ಸಂಸ್ಥೆ ಫತ್ಫ್ (ಎಫ್ಎಟಿಹೆಚ್) ಕಪ್ಪುಪಟ್ಟಿಗೆ ಸೇರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉಗ್ರ ಪೋಷಣೆಗೆ ಆರ್ಥಿಕ ನೆರವು ಹಿನ್ನಲೆಯಲ್ಲಿ 'ವರ್ಧಿತ ಕಪ್ಪುಪಟ್ಟಿಗೆ ಸೇರಿಸಿದ ಎಫ್ಎಟಿಹೆಚ್

ವಾಷಿಂಗ್ಟನ್: ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಸಮರ ಸಾರಿದ್ದ ಪಾಕಿಸ್ತಾನವನ್ನು ಜಾಗತಿಕ ಸರ್ವೇಕ್ಷಣಾ ಸಂಸ್ಥೆ ಫತ್ಫ್ (ಎಫ್ಎಟಿಹೆಚ್) ಕಪ್ಪುಪಟ್ಟಿಗೆ ಸೇರಿಸಿದೆ.

ಕ್ಯಾನ್ ಬೆರ್ರಾದಲ್ಲಿ ನಡೆದ ಫತ್ಫ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದ್ದು, ಉಗ್ರ ಪೋಷಣೆಗೆ ಆರ್ಥಿಕ ನೆರವು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು 'ವರ್ಧಿತ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಈ ಕುರಿತಂತೆ ಜಾಗತಿಕ ಸರ್ವೇಕ್ಷಣಾ ಸಂಸ್ಥೆ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಫತ್ಫ್-FATF) ಈ ಕ್ರಮ ಕೈಗೊಂಡಿದ್ದು, ಪಾಕಿಸ್ತಾನವನ್ನು 'ವರ್ಧಿತ ಕಪ್ಪುಪಟ್ಟಿಗೆ ಸೇರಿಸಿದೆ.

ಈ ಕುರಿತಂತೆ ಈ ಹಿಂದೆ ನಡೆದ ಎಲ್ಲ ವಿಚಾರಣೆಗಳಲ್ಲೂ ಪಾಕಿಸ್ತಾನ ಉಗ್ರಗಾಮಿ ಸಂಘಟನೆಗಳ ವಿರುದ್ಧ ಕೈಗೊಂಡಿದ್ದ ಕ್ರಮಗಳು ಫತ್ಪ್ ನ ಮಾನದಂಡಕ್ಕೆ ಸಮವಾಗಿಲ್ಲ. ಪಾಕಿಸ್ತಾನದ ಮಂಡಿಸಿದ ಎಲ್ಲ ವಾದಗಳ ಹೊರತಾಗಿಯೂ ಫತ್ಫ್ ನಿಗದಿ ಪಡಿಸಿದ್ದ 40 ಮಾನದಂಡಗಳ ಪೈಕಿ 32 ಮಾನದಂಡಗಳಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಫತ್ಫ್ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಹೀಗಾಗಿ ಉಗ್ರರಿಗೆ ಹಣಕಾಸು ನೆರವು ನೀಡಿದ ಮತ್ತು ಉಗ್ರರಿಗೆ ಆರ್ಥಿಕ ನೆರವು ನೀಡುವ ಹವಾಲಾ ದಂಧೆಯ ಕುರಿತು ಸೂಕ್ತ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಫತ್ಫ್ ಪಾಕಿಸ್ತಾನವನ್ನು ವರ್ಧಿತ ಕಪ್ಪುಪಟ್ಟಿಗೆ ಸೇರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಆರ್ಥಿಕ ನೆರವೂ ಸ್ಥಗಿತ 
ಇನ್ನು ಇದೇ ವೇಳೆ ಪಾಕಿಸ್ತಾನಕ್ಕೆ ನೀಡುತ್ತಿದ್ದ ನೆರವಿನಲ್ಲಿ ಭಾರೀ ಕಡಿತ ಮಾಡುವ ಮೂಲಕ ಅಮೆರಿಕ ಆ ರಾಷ್ಟ್ರಕ್ಕೆ ಮತ್ತೊಂದು ಗುದ್ದು ನೀಡಿದೆ. ಪಾಕಿಸ್ತಾನಕ್ಕೆ ನೀಡುತ್ತಿದ್ದ ಆರ್ಥಿಕ ನೆರವಿನಲ್ಲಿ ಭಾರೀ ಕಡಿತ ಮಾಡಿರುವ ಅಮೆರಿಕ, ನಿರಂತರ ಆರ್ಥಿಕ ಸಹಾಯ ಸಾಧ್ಯವಿಲ್ಲ ಎಂದು ಕಠಿಣ ಸಂದೇಶ ರವಾನಿಸಿದೆ. ಅಲ್ಲದೆ ಬರೋಬ್ಬರಿ  440 ಮಿಲಿಯನ್ ಯುಎಸ್ ಡಾಲರ್ ಆರ್ಥಿಕ ನೆರವು ಸ್ಥಗಿತಗೊಳಿಸಿರುವ ಅಮೆರಿಕ, ಇದೀಗ ಪಾಕಿಸ್ತಾನಕ್ಕೆ ವಾರ್ಷಿಕ ಕೇವಲ 4.1 ಬಿಲಿಯನ್ ಯುಎಸ್ ಡಾಲರ್ ಮಾತ್ರ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ. 2010ರ ಪಾಕಿಸ್ತಾನ ವರ್ಧಿತ ಪಾಲುದಾರಿಕೆ ಒಪ್ಪಂದ(PEPA)ಒಪ್ಪಂದದಡಿ ನೀಡಲಾಗುತ್ತಿದ್ದ ಧನ ಸಹಾಯದಲ್ಲಿ ಭಾರೀ ಕಡಿತ ಮಾಡಿರುವುದಾಗಿ ಅಮೆರಿಕ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com