ಯಮನ್: ಹೌತಿ ಬಂಡುಕೋರರ ದಾಳಿ, 25 ಯೋಧರ ಹತ್ಯೆ

ಹೌತಿ ಬಂಡುಕೋರರು, ಸೌದಿ ಅರೇಬಿಯಾ ಬೆಂಬಲಿತ ಯಮನ್ ಸೇನೆಯ ಮೇಲೆ ದಾಳಿ ನಡೆಸಿ 25 ಯೋಧರನ್ನು  ಹತ್ಯೆ ಮಾಡಿರುವ ಘಟನೆ ಯಮನ್ ನ ಸಾಡಾದಲ್ಲಿ ಮಂಗಳವಾರ ನಡೆದಿದೆ.
ಯಮನ್: ಹೌತಿ ಬಂಡುಕೋರರ ದಾಳಿ, 25 ಯೋಧರ ಹತ್ಯೆ
ಯಮನ್: ಹೌತಿ ಬಂಡುಕೋರರ ದಾಳಿ, 25 ಯೋಧರ ಹತ್ಯೆ

ಕ್ಷಿನುಹಾ: ಹೌತಿ ಬಂಡುಕೋರರು, ಸೌದಿ ಅರೇಬಿಯಾ ಬೆಂಬಲಿತ ಯಮನ್ ಸೇನೆಯ ಮೇಲೆ ದಾಳಿ ನಡೆಸಿ 25 ಯೋಧರನ್ನು  ಹತ್ಯೆ ಮಾಡಿರುವ ಘಟನೆ ಯಮನ್ ನ ಸಾಡಾದಲ್ಲಿ ಮಂಗಳವಾರ ನಡೆದಿದೆ.

ಮಿಲಿಟರಿ ಅಧಿಕಾರಿಯೊಬ್ಬರು ಸುದ್ದಿಗಾರರೊಂದಿಗೆ ಮಾತನಾಡಿ "ಹೌತಿ ಬಂಡುಕೋರರು ಸಾಡಾ ಪ್ರಾಂತ್ಯದ ಪೂರ್ವ ಪ್ರದೇಶ ಕತಾಫ್‌ನಲ್ಲಿ ಸೈನ್ಯದ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ 25 ಸೈನಿಕರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಅಲ್ಲದೇ, ಹೌತಿ ಬಂಡುಕೋರರು ಅನೇಕ ಸೈನಿಕರನ್ನು ಬಂಧಿಸಿದ್ದಾರೆ'' ಎಂದು ತಿಳಿಸಿದರು. ಸಾಡಾ ಪ್ರಾಂತೀಯ ಗವರ್ನರ್ ಹಾದಿ ತಾರ್ಶನ್ ಈ ವಿಷಯವನ್ನು ದೃಢಪಡಿಸಿದ್ದು, ಕತಾಫ್‌ನಲ್ಲಿ ಕಳೆದ ಮೂರು ದಿನಗಳಿನಿಂದ ಹೌತಿ ಬಂಡುಕೋರರು ಮತ್ತು ಸೈನಿಕರ ನಡುವೆ ದಾಳಿ ನಡೆಯುತ್ತಲೇ ಇದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com