ಎಸ್-400 ಕ್ಷಿಪಣಿಗಳ ಪೂರೈಕೆಗಾಗಿ ರಷ್ಯಾಕ್ಕೆ ಮುಂಗಡ ಪಾವತಿ, 2023ಕ್ಕೆ ಭಾರತಕ್ಕೆ ಹಸ್ತಾಂತರ, ಪಾಕ್ ಗಡಗಡ!

ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳಿಗಾಗಿ ಭಾರತದಿಂದ ಮುಂಗಡ ಪಾವತಿಯನ್ನು ರಷ್ಯಾ ಸ್ವೀಕರಿಸಿದೆ ಎಂದು ರಷ್ಯಾದ ಸೇನಾ ತಾಂತ್ರಿಕ ಸಹಕಾರ ಕುರಿತ ಫೆಡರಲ್‍ ಸರ್ವೀಸ್‍ ಗುರುವಾರ ತಿಳಿಸಿದೆ.
ಎಸ್-400
ಎಸ್-400

ಮಾಸ್ಕೋ: ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳಿಗಾಗಿ ಭಾರತದಿಂದ ಮುಂಗಡ ಪಾವತಿಯನ್ನು ರಷ್ಯಾ ಸ್ವೀಕರಿಸಿದೆ ಎಂದು ರಷ್ಯಾದ ಸೇನಾ ತಾಂತ್ರಿಕ ಸಹಕಾರ ಕುರಿತ ಫೆಡರಲ್‍ ಸರ್ವೀಸ್‍ ಗುರುವಾರ ತಿಳಿಸಿದೆ.

ಎಸ್ -400 ಕ್ಷಿಪಣಿಗಳಿಗೆ ಭಾರತ ಮುಂಗಡ ಪಾವತಿಸುವುದರೊಂದಿಗೆ ಈ ವಿಷಯ ಇತ್ಯರ್ಥವಾಗಿದೆ ಎಂದು ರಕ್ಷಣಾ ಸಹಕಾರ ಸಂಸ್ಥೆ ಸ್ಪುಟ್ನಿಕ್‍ ತಿಳಿಸಿದೆ. ಕೆಲ ಕಾರಣಗಳಿಂದಾಗಿ, ನಾವು ತಾಂತ್ರಿಕ ವಿವರಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರಸ್ತುತ ಮಾಸ್ಕೋ ಪ್ರದೇಶದ ಜುಕೋವ್ ಸ್ಕಿಯಲ್ಲಿ ನಡೆಯುತ್ತಿರುವ ಎಂಎಕೆಎಸ್‍-2019 ವೈಮಾನಿಕ ಪ್ರದರ್ಶನದ ವೇಳೆ ರಷ್ಯನ್‍ ಫೆಡರಲ್ ತಿಳಿಸಿದೆ.

2019ರ ಅಂತ್ಯದ ವೇಳೆಗೆ ಭಾರತದಿಂದ ಮುಂಗಡ ಪಾವತಿ ಪಡೆಯಲು ರಷ್ಯಾ ಆಶಿಸುತ್ತಿದೆ. ಇದರಿಂದಾಗಿ ಪೂರೈಕೆ 2020ರಲ್ಲಿ ಆರಂಭವಾಗಿ, 2025ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಜುಲೈ 9 ರಂದು ಸಂಸ್ಥೆಯ ಉಪನಿರ್ದೇಶಕ ವ್ಲಾಡಿಮಿರ್ ಡ್ರೋಜೋವ್ ಹೇಳಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತ ಮತ್ತು ರಷ್ಯಾ 5 ಶತಕೋಟಿ ಡಾಲರ್ ಮೊತ್ತದ ಎಸ್-400 ಕ್ಷಿಪಣಿ ವ್ಯವಸ್ಥೆಗಳ ಪೂರೈಕೆ ಒಪ್ಪಂದವನ್ನು ಮಾಡಿಕೊಂಡಿದ್ದವು.

ಈ ಒಪ್ಪಂದವನ್ನು ಅಮೆರಿಕ ವಿರೋಧಿಸಿದೆ. ಕಳೆದ ವರ್ಷ ಎಸ್ -400 ಕ್ಷಿಪಣಿಗಳನ್ನು ಖರೀದಿಸುವ ಬಗ್ಗೆ ಭಾರತ, ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಳ್ಳುವುದನ್ನು ತಡೆಯುವ ಪ್ರಯತ್ನವನ್ನು ಅಮೆರಿಕ ಮಾಡಿತ್ತು. ಜುಕೋವ್ ಸ್ಕಿಯಲ್ಲಿ ಅಂತಾರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಪ್ರದರ್ಶನ ಆಗಸ್ಟ್ 27ರಿಂದ ಆರಂಭವಾಗಿದ್ದು ಸೆಪ್ಟೆಂಬರ್ 1ರವರೆಗೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com