ಮೆಕ್ಸಿಕೊದಲ್ಲಿ ಭೀಕರ ಗುಂಡಿನ ಕಾಳಗ: 14 ಜನರ ಸಾವು

ಮೆಕ್ಸಿಕೊದ ಕೊಹಹುಲಾ ರಾಜ್ಯದ ಪಟ್ಟಣವೊಂದರ ಮೇಲೆ ಸಶಸ್ತ್ರದಾರಿಗಳು ಮತ್ತು ಮೆಕ್ಸಿಕನ್ ಭದ್ರತಾ ಪಡೆಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ.

Published: 01st December 2019 01:40 PM  |   Last Updated: 01st December 2019 01:40 PM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : UNI

ಮೆಕ್ಸಿಕೊ ಸಿಟಿ: ಮೆಕ್ಸಿಕೊದ ಕೊಹಹುಲಾ ರಾಜ್ಯದ ಪಟ್ಟಣವೊಂದರ ಮೇಲೆ ಸಶಸ್ತ್ರದಾರಿಗಳು ಮತ್ತು ಮೆಕ್ಸಿಕನ್ ಭದ್ರತಾ ಪಡೆಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ.

ಕೊವಾಹಿಲಾ ರಾಜ್ಯದಲ್ಲಿ ಭದ್ರತಾ ಪಡೆಗಳು ಶನಿವಾರ ನಡೆಸಿದ ಗಂಡಿನ ಕಾರ್ಯಚರಣೆಯಲ್ಲಿ ಕನಿಷ್ಠ 14 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದ್ದು ಹಲವು ಪುರಸಭೆಯ ಕಾರ್ಮಿಕರು ಕಾಣೆಯಾಗಿದ್ದಾರೆ ಎಂದು ಎಬಿಸಿ ಸುದ್ದಿ ವರದಿ ಮಾಡಿದೆ.
 

Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp