ಪಿಎನ್‌ಬಿ ಹಗರಣ: ಜ.2ಕ್ಕೆ ನ್ಯಾಯಾಲಯಕ್ಕೆ ಹಾಜರಾಗಿ- ನೀರವ್ ಮೋದಿಗೆ ಯುಕೆ ಕೋರ್ಟ್ ನಿರ್ದೇಶನ

ಸುಮಾರು 2 ಬಿಲಿಯನ್ ಯುಎಸ್ಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣದ ಆರೋಪ ಹೊತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರಿಗೆ ಜನವರಿ 2 ರಂದು ವಿಡಿಯೋಲಿಂಕ್ ಮೂಲಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.  
ನೀರವ್ ಮೋದಿ
ನೀರವ್ ಮೋದಿ

ಲಂಡನ್: ಸುಮಾರು 2 ಬಿಲಿಯನ್ ಯುಎಸ್ಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣದ ಆರೋಪ ಹೊತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರಿಗೆ ಜನವರಿ 2 ರಂದು ವಿಡಿಯೋಲಿಂಕ್ ಮೂಲಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. 

ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಲಂಡನ್ನಿನ ವಾಂಡ್ಸ್ವರ್ತ್ ಜೈಲಿನಿಂದ 28 ದಿನಗಳ ನಿಯಮಿತ "ಕಾಲ್-ಓವರ್" ಅಪಿಯರೆನ್ಸ್ ಗಾಗಿ ನೀರವ್ ಮೋದಿ ಇಂದು ಹಾಜರಾಗಿದ್ದರು. ಆ ವೇಳೆ ನ್ಯಾಯಾಧೀಶ ಗರೆಥ್ ಬ್ರಾನ್ಸ್ಟನ್ ನೀರವ್ ಮೋದಿ ಹಸ್ತಾಂತರವು ಬರುವ ವರ್ಷ ಮೇ ಮೇ 11 ರಂದು ಪ್ರಾರಂಭವಾಗಲಿದೆ ಮತ್ತು ಐದು ದಿನಗಳಲ್ಲಿ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಪುನರುಚ್ಚರಿಸಿದರು.

2020 ರ ಜನವರಿ 2 ರಂದು ಮೋದಿ ವಿಡಿಯೋಲಿಂಕ್ ಮೂಲಕ ನ್ಯಾಯಾಲಯದಲ್ಲಿ ಹಾಜರಾಗಬೇಕೆಂದು ನ್ಯಾಯಾಧೀಶರು ನಿರ್ದೇಶಿಸಿದ್ದಾರೆ.ಏತನ್ಮಧ್ಯೆ, ಅವರು ಪ್ರತಿ 28 ದಿನಗಳಿಗೊಮ್ಮೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

48 ವರ್ಷದ ನೀರವ್ ಮೋದಿ  ಕಳೆದ ತಿಂಗಳು ಮತ್ತೊಂದು ಜಾಮೀನು ಅರ್ಜಿ ಸಲ್ಲಿಸಿದ್ದು ಅದೂ ಸಹ ನ್ಯಾಯಾಲಯದಲ್ಲಿ ತಿರಸ್ಕೃತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com