ಗಾಂಧಿ ಕೊನೆ ಕೈ ಬರಹದ ಹಸ್ತಪ್ರತಿ ಹರಾಜು

ಮಹಾತ್ಮಾ ಗಾಂಧೀಜಿಯ ಕೈಬರಹದ ಕೊನೆಯ ಹಸ್ತಪ್ರತಿಯನ್ನು ಹರಾಜಿಗೆ ಇಟ್ಟಿರುವುದಾಗಿ ಅಮೆರಿಕದ 'ರಾಬ್ ಕಲೆಕ್ಷನ್' ಪ್ರಕಟಿಸಿದೆ.

Published: 08th December 2019 02:43 PM  |   Last Updated: 08th December 2019 02:43 PM   |  A+A-


ಮಹಾತ್ಮಾ ಗಾಂಧಿ

Posted By : raghavendra
Source : UNI

ವಾಷಿಂಗ್ಟನ್: ಮಹಾತ್ಮಾ ಗಾಂಧೀಜಿಯ ಕೈಬರಹದ ಕೊನೆಯ ಹಸ್ತಪ್ರತಿಯನ್ನು ಹರಾಜಿಗೆ ಇಟ್ಟಿರುವುದಾಗಿ ಅಮೆರಿಕದ 'ರಾಬ್ ಕಲೆಕ್ಷನ್' ಪ್ರಕಟಿಸಿದೆ.

ಇದು ಸಾರ್ವಜನಿಕವಾಗಿ ಲಭ್ಯವಿರುವ ಗಾಂಧೀಜಿಯ ಕೈಬರಹದ ಕೊನೆಯ ಹಸ್ತಪ್ರತಿ ಎಂದೂ ಹೇಳಲಾಗಿದೆ.

ಇದು 1948 ಜನವರಿ 22ರಂದು ಪ್ರಾರ್ಥನಾ ಸಭೆಯೊಂದರಲ್ಲಿ ಅವರು ಮಾಡಿದ ಭಾಷಣದ ಹಸ್ತಪ್ರತಿಯಾಗಿದೆ ಎನ್ನಲಾಗಿದೆ. ವಿಭಜನೆಯ ನಂತರ ಮತ್ತು ಗಡಿಯ ಎರಡೂ ಬದಿಯಲ್ಲಿ ನಡೆದ ಗಲಭೆಗಳ ನಂತರ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಹುಟ್ಟು ಹಾಕಲು ಗಾಂಧೀಜಿ ಕೈಗೊಂಡಿದ್ದ ಉಪವಾಸ ಮುರಿದ ನಂತರ ಇದು ಅವರ ಮೊದಲ ಭಾಷಣದ ಹಸ್ತಪ್ರತಿ ಎನ್ನಲಾಗಿದೆ. ಇದಾಗಿ ಎಂಟು ದಿನಗಳ ತರುವಾಯ ಗಾಂಧೀಜಿ ಹತ್ಯೆ ಸಂಭವಿಸಿದೆ.

ದಾಖಲೆಯ ಹರಾಜಿನ ಮುಖಬೆಲೆ 110,000.ಯುಎಸ್ ಡಾಲರ್ ಆಗಿದೆ.

ಈ ಟಿಪ್ಪಣಿಯನ್ನು ಅವರ ಜನವರಿ 22 ರ ಭಾಷಣದ ಹಸ್ತಪ್ರತಿ ಎಂದು ವಿವರಿಸಲಾಗಿದೆ. ಆದಾಗ್ಯೂ, ಇದು ಇಡೀ ಭಾಷಣವಲ್ಲ, ಆದರೆ ಅದರ ಒಂದು ತುಣುಕು ಮತ್ತು ಅದನ್ನು “ಸ್ಕ್ರ್ಯಾಪ್ ಪೇಪರ್” ನಲ್ಲಿ ಬರೆಯಲಾಗಿ

ಇನ್ನು ಈ ಹಸ್ತಪ್ರತಿಯನ್ನು ರಾಬ್ ಕಲೆಕ್ಷನ್' ಎಲ್ಲಿಂದ ಸ್ವಾಧೀನಕ್ಕೆ ಪಡೆದಿತ್ತು ಎನ್ನುವುದನ್ನು ಇನ್ನೂ ಬಹಿರಂಗಪಡಿಸಿಲ್ಲ.

Stay up to date on all the latest ಅಂತಾರಾಷ್ಟ್ರೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp