ನೊಬೆಲ್ ಪ್ರಶಸ್ತಿ ಪ್ರದಾನ: ಭಾರತೀಯ ಸಂಪ್ರದಾಯ ಅನಾವರಣಗೊಳಿಸಿದ ಅಭಿಜಿತ್ ಬ್ಯಾನರ್ಜಿ ದಂಪತಿ..! ನೆಟಿಗರಿಂದ ಪ್ರಶಂಸೆ

ಅರ್ಥಶಾಸ್ತ್ರದಲ್ಲಿ ಈ ಬಾರಿಯ ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಮೂಲದ  ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸ್ಟಾಕ್ ಹೋಂ ನಲ್ಲಿ ಪುರಸ್ಕಾರ ಸ್ವೀಕಾರ ಸಮಾರಂಭದಲ್ಲಿ ಭಾರತೀಯ ಸಂಪ್ರದಾಯವನ್ನ ಅನಾವರಣಗೊಳಿಸಿ ವೈಶಿಷ್ಟ್ಯ ಮೆರೆದರು.
ಅಭಿಜಿತ್ ಬ್ಯಾನರ್ಜಿ-ಎಸ್ತರ್
ಅಭಿಜಿತ್ ಬ್ಯಾನರ್ಜಿ-ಎಸ್ತರ್

ಸ್ಟಾಕ್ ಹೋಂ: ಅರ್ಥಶಾಸ್ತ್ರದಲ್ಲಿ ಈ ಬಾರಿಯ ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಮೂಲದ  ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಸ್ಟಾಕ್ ಹೋಂ ನಲ್ಲಿ ಪುರಸ್ಕಾರ ಸ್ವೀಕಾರ ಸಮಾರಂಭದಲ್ಲಿ ಭಾರತೀಯ ಸಂಪ್ರದಾಯವನ್ನ ಅನಾವರಣಗೊಳಿಸಿ ವೈಶಿಷ್ಟ್ಯ ಮೆರೆದರು.

ಬಂಗಾಳ ಶೈಲಿಯಲ್ಲಿ ದೋತಿ, ಕೋಟು ಧರಿಸಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಅಭಿಜಿತ್ ಪಾತ್ರರಾಗಿದ್ದಾರೆ. ಅವರ ಪತ್ನಿ ಎಸ್ತರ್ ಡುಫ್ಲೋ ಕೂಡ ನೀಲಿ ಹಸಿರು ಮಿಶ್ರಿತ ಸೀರೆ ಧರಿಸಿ ನೊಬೆಲ್ ಸ್ವೀಕರಿಸಿದರು. ಇನ್ನು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸಿದ್ದು ನೆಟಿಗರು ಪ್ರಶ್ನಿಸಿದ್ದಾರೆ.

ಅಭಿಜಿತ್ ಜೊತೆಗೆ ಅವರ ಪತ್ನಿ ಕೂಡಾ ನೊಬೆಲ್ ಪುರಸ್ಕಾರ  ಪಡೆದುಕೊಂಡಿದ್ದಾರೆ ಇವರಿಬ್ಬರು ಈ ವರ್ಷ ಆರ್ಥಶಾಸ್ತ್ರದ ನೊಬೆಲ್ ಪುರಸ್ಕಾರವನ್ನು ಪ್ರಾಧ್ಯಾಪಕ  ಮೈಕೆಲ್ ಕ್ರೆಮರ್ ಜೊತೆ ಹಂಚಿಕೊಂಡಿದ್ದಾರೆ.
 
ಈ  ಮೂವರಿಗೂ ಇಂದು ನೊಬೆಲ್ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಅಭಿಜಿತ್ ಬ್ಯಾನರ್ಜಿ ಮತ್ತು ಅವರ ಪತ್ನಿ ಎಸ್ತರ್ ಡುಫ್ಲೋ ಭಾರತೀಯ ಸಂಪ್ರದಾಯದ ಉಡುಗೆಯಲ್ಲಿ ಕಾಣಿಸಿಕೊಂಡು ಎಲ್ಲರನ್ನೂಆಕರ್ಷಿಸಿದರು. ಅಭಿಜಿತ್ ಬಿಳಿ ಪಂಚೆ ಮತ್ತು ಕಪ್ಪು ಕೋಟಿನಲ್ಲಿ ಕಾಣಿಸಿಕೊಂಡರು. ಎಸ್ತರ್ ಹಸಿರು ಮತ್ತು ನೀಲಿ ಮಿಶ್ರಿತ ಬಣ್ಣದ ಸೀರೆ ಧರಿಸಿದ್ದರು ಉಳಿದಂತೆ ಪ್ರಾಧ್ಯಾಪಕ  ಮೈಕೆಲ್ ಕ್ರೆಮರ್ ಸೂಟ್ ಧರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com