ಕಪ್ಪು ಖಂಡದಲ್ಲಿ ಕೇಸರಿ! ದಕ್ಷಿಣ ಆಫ್ರಿಕಾದಲ್ಲಿ ಹಿಂದೂ ರಾಜಕೀಯ ಪಕ್ಷದ ಉದಯ

ದಕ್ಷಿಣ ಆಫ್ರಿಕಾದ ಅಲ್ಪಸಂಖ್ಯಾತ ಸಮುದಾಯಕ್ಕೆ ಧ್ವನಿ ನೀಡುವ ಗುರಿಯೊಡನೆ ಹಿಂದೂ ರಾಜಕೀಯ ಪಕ್ಷವೊಂದನ್ನು ಅಲ್ಲಿನ ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾಗಿದೆ. 
ದಕ್ಷಿಣ ಆಫ್ರಿಕಾ ಧ್ವಜ
ದಕ್ಷಿಣ ಆಫ್ರಿಕಾ ಧ್ವಜ

ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದ ಅಲ್ಪಸಂಖ್ಯಾತ ಸಮುದಾಯಕ್ಕೆ ಧ್ವನಿ ನೀಡುವ ಗುರಿಯೊಡನೆ ಹಿಂದೂ ರಾಜಕೀಯ ಪಕ್ಷವೊಂದನ್ನು ಅಲ್ಲಿನ ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾಗಿದೆ.

ಹಿಂದೂ ಯುನಿಟಿ ಮೂಮೆಂಟ್  (ಎಚ್‌ಯುಎಂ) ಸಮುದಾಯದ ಸದಸ್ಯರನ್ನು ಎತ್ತರದ ಮಟ್ಟಕ್ಕೇರಿದಲು ಹಾಗೂ  ಅವರಿಗೆ ಸರ್ಕಾರದಲ್ಲಿ ಸ್ಥಾನಮಾನ ಕಲ್ಪಿಸಲು ಶ್ರಮಿಸುತ್ತದೆ

ಡರ್ಬನ್ ನಿವಾಸಿ ಜಯರಾಜ್ ಬಚು ಅವರು ಎಚ್‌ಯುಎಂನ ನೂತನ ರಾಷ್ಟ್ರೀಯ ನಾಯಕರಾಗಿದ್ದರೆ, ಹಿಂದೂ ಧಾರ್ಮಿಕ ಮುಖಂಡ ದಕ್ಷಿಣ ಆಫ್ರಿಕಾದ ಹಿಂದೂ ಧರ್ಮಸಭೆಯ ಅಧ್ಯಕ್ಷರಾಮ್ ಮಹಾರಾಜ್ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಹಿಂದೂಗಳ ಅಗತ್ಯತೆಗಳನ್ನು ಪೂರೈಸುವ ಪ್ರಾಂತೀಯ, ರಾಷ್ಟ್ರೀಯ ಅಥವಾ ಸ್ಥಳೀಯ ಸರ್ಕಾರಗಳಲ್ಲಿ ಸಮುದಾಯದ ಆದ್ಯತೆ, ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಈ ಪಕ್ಷದ ಸ್ಥಾಪನೆಯಾಗಿದೆ.

12 ವರ್ಷಗಳ ಪ್ರಯತ್ನದ ನಂತರ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಸಂಸತ್ತಿನಲ್ಲಿ ತನ್ನ ಏಕೈಕ ಸ್ಥಾನವನ್ನು ಗಳಿಸಿದ ಅಲ್ ಜಮಾ-ಆಹ್ ಪಕ್ಷ ಆಫ್ರಿಕಾದಲ್ಲಿ ಹ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳನ್ನು ಪ್ರತಿನಿಧಿಸುತ್ತಿದೆ.

"ಅಸ್ತಿತ್ವದಲ್ಲಿರುವ ಹಿಂದೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಸಮುದಾಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು  ಸರ್ಕಾರದ ಹೊರಗಿಇನಿಂದ ಕೆಲಸ ಮಾಡುತ್ತ್೮ಇದೆ.ಆದರೆ ಈ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ನಮಗೆ ಯಾರಾದರೂ ಬೇಕು" ಎಂದು ಬಾಚು ಹೇಳಿದರು.

ಭಾರತೀಯ ಭಾಷೆಗಳನ್ನು ಸರ್ಕಾರಿ ಶಾಲೆಗಳಲ್ಲಿ ಪುನಃ ಪರಿಚಯಿಸುವುದುದಕ್ಷಿಣ ಆಫ್ರಿಕಾದಲ್ಲಿ ದೀಪಾವಳಿಯನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಚು 2021 ರ ಪುರಸಭೆ ಚುನಾವಣೆಗೆ ತಯಾರಾಗುವುದರೊಡನೆ ಎಚ್‌ಯುಎಂ ಪಕ್ಷದ ಶಕ್ತಿವರ್ಧನೆಗೆ ಶ್ರಮಿಸುತ್ತಿದ್ದಾರೆ.

"ಆಫ್ರಿಕಾದಲ್ಲಿ "ಕ್ರಿಶ್ಚಿಯನ್ ಹಬ್ಬಗಳಾದ ಈಸ್ಟರ್ ಮತ್ತು ಕ್ರಿಸ್‌ಮಸ್ ಸಾರ್ವಜನಿಕ ರಜಾದಿನಗಳು ಆದರೆ ದೀಪಾವಳಿಗೆ, ಹಿಂದೂಗಳು ಉದ್ಯೋಗದಾತರಿಗೆ ರಜೆಗಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಏಕೆಂದರೆ ಇದು ಸಾಮಾನ್ಯ ಕೆಲಸದ ದಿನವಾಗಿದೆ.

"ಅದೇ ರೀತಿ, ಶಾಲೆಗಳು ತಮ್ಮ ಹಿಂದೂ ವಿದ್ಯಾರ್ಥಿಗಳಿಗೆ ದೀಪಾವಳಿ ಆಚರಿಸಲು ರಜೆ ನೀಡುವುದಿಲ್ಲ. ಹಬ್ಬದ ಆಚರ್ಣೆಗಾಗಿ ಅವರು ವಿಶೇಷ ಅನುಮತಿಯನ್ನು ಕೋರಬೇಕಾಗಿದೆ.

"ನಮ್ಮ ಭಾಷೆಗಳಾದ ತಮಿಳು ಮತ್ತು ಹಿಂದಿ  ಸಹ ಕ್ಷೀಣಿಸುತ್ತಿದ್ದು ರ್ಕಾರದ ಭಾಗವಾಗುವುದರ ಮೂಲಕ ಮಾತ್ರ ನಾವು ಈ ಬಗ್ಗೆ ಕೆಲಸ ಮಾಡಬಹುದು" ಎಂದು ಬಚು ಹೇಳಿದರು.

ಆದರೆ 1994 ರಲ್ಲಿ ಮೊದಲ ಪ್ರಜಾಪ್ರಭುತ್ವ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪರಿಣಾಮಕಾರಿ ಬದಲಾವಣೆಯನ್ನು ಜಾರಿಗೆ ತರಲು ಧಾರ್ಮಿಕ ತತ್ವಗಳ ಆಧಾರದ ಮೇಲೆ ಪಕ್ಷಗಳು ವಿಫಲವಾಗಿದ್ದನ್ನು ಉಲ್ಲೇಖಿಸಿ ವಿಶ್ಲೇಷಕರು ಪಕ್ಷದ ಸಂಭವನೀಯ ಯಶಸ್ಸಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com