ಭಾರತದ ಎಮ್ಮೆಯಿಂದಲೂ ಸೋಲು ಕಂಡ ಪಾಕಿಸ್ತಾನ?

ಭಾರತದ ಸಾಂಪ್ರದಾಯಿತ ಎದುರಾಳಿ ಪಾಕಿಸ್ತಾನ ಇದೀಗ ಸ್ವದೇಶಿ ಎಮ್ಮೆಯಿಂದಲೂ ಸೋಲು ಕಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದ ಸಾಂಪ್ರದಾಯಿತ ಎದುರಾಳಿ ಪಾಕಿಸ್ತಾನ ಇದೀಗ ಸ್ವದೇಶಿ ಎಮ್ಮೆಯಿಂದಲೂ ಸೋಲು ಕಂಡಿದೆ.

ಅರೆ ಇದೇನಿದು.. ಭಾರತದ ಎಮ್ಮೆ ಪಾಕಿಸ್ತಾನದ ಮೇಲೆ ಯುದ್ಧ ಮಾಡಿತೇ ಅಥವಾ ಕ್ರಿಕೆಟ್ ಆಡಿತೇ ಎಂದು ಪ್ರಶ್ನಿಸಬೇಡಿ.. ಪಾಕಿಸ್ತಾನದ ಮೇಲೆ ಭಾರತದ ಎಮ್ಮೆ ಗೆದ್ದಿರುವುದು ನಿಜ. ಆದರೆ ಯುದ್ಧ ಮಾಡಿಯೋ ಅಥವಾ ಕ್ರಿಕೆಟ್ ಆಡಿಯೋ ಅಲ್ಲ. ಎಮ್ಮೆ ಗೆದ್ದಿರುವುದು ಹಾಲು ಕರೆಯುವ ಸ್ಪರ್ಧೆಯಲ್ಲಿ. ಹೌದು.. ಭಾರತ ಮತ್ತು ಪಾಕಿಸ್ತಾನದ ವಿವಿಧ ಪ್ರದೇಶಗಳ ಎಮ್ಮೆಗಳು ಪಾಲ್ಗೊಂಡಿದ್ದ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾರತದ ಎಮ್ಮೆಯೊಂದು ಅತೀ ಹೆಚ್ಚು ಹಾಲು ನೀಡುವ ಮೂಲಕ ಪಾಕಿಸ್ತಾನದ ಎಮ್ಮೆಯನ್ನು ಸೋಲಿಸಿದೆ.

ಪಂಜಾಬ್‌ನಲ್ಲಿ ಆಯೋಜಿಸಿದ್ದ ಹಾಲಿನ ಸ್ಪರ್ಧೆಯಲ್ಲಿ ಹರಿಯಾಣದ ಹಿಸಾರ್ ಜಿಲ್ಲೆಯ ಲಿಟಾನಿ ಗ್ರಾಮದ ರೈತ ಸುಖ್ಬೀರ್ ಧಂಡಾ ಅವರ 'ಎಮ್ಮೆ' 33.131 ಲೀಟರ್ ಹಾಲು ನೀಡಿ ದಾಖಲೆ ನಿರ್ಮಿಸಿದೆ. ಇದಕ್ಕೂ ಮೊದಲು ಪಾಕಿಸ್ತಾನದ ಎಮ್ಮೆ 32.50 ಲೀಟರ್ ಹಾಲು ನೀಡಿ ದಾಖಲೆ ನಿರ್ಮಿಸಿತ್ತು. ಇದೀಗ ಭಾರತದ ಎಮ್ಮೆ ಆ ದಾಖಲೆಯನ್ನು ಮುರಿದಿದ್ದು, ಪಾಕಿಸ್ತಾನದ ಎಮ್ಮೆ ಸೋಲು ಅನುಭವಿಸಿದೆ.

ಪಂಜಾಬ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ರೈತ ಸುಖ್‌ಬೀರ್ ಧಂಡಾ ಅವರ ಮುರ್ರಾ ಎಮ್ಮೆ 33.131 ಹಾಲು ನೀಡಿತು. ಈ ಕುರಿತಂತೆ ಮಾತನಾಡಿರುವ ರೈತ ಸುಖ್ ಬೀರ್ ಅವರು, 'ಸರಸ್ವತಿ ಎಂಬ ಹೆಸರಿನ ಎಮ್ಮೆಯ ಜೊತೆಗೆ ಈ ತಿಂಗಳು ಪಂಜಾಬ್‌ನ ಲುಧಿಯಾನಾದ ಜಾಗ್ರಾವ್ ಗ್ರಾಮದಲ್ಲಿ ನಡೆದ ಡೈರಿ ಮತ್ತು ಅಗ್ರಿ ಎಕ್ಸ್‌ಪೋದಲ್ಲಿ ಭಾಗವಹಿಸಲು  ತೆರಳಿದ್ದೆ, ಅಲ್ಲಿ ಎಮ್ಮೆ 33.131 ಲೀಟರ್ ಹಾಲು ನೀಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ. ಇದಕ್ಕಾಗಿ ಸ್ಪರ್ಧೆಯಲ್ಲಿ ನನಗೆ ಎರಡು ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ ಎಂದು ರೈತ ಧಂಡಾ ಮಾಹಿತಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com