ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಯೂಟ್ಯೂಬ್ ಮೂಲಕ ವರ್ಷಕ್ಕೆ 2.6 ಕೋಟಿ ರೂ. ಸಂಪಾದಿಸಿದ 8ರ ಪುಟ್ಟ ಪೋರ

ಕೇವಲ 8 ವರ್ಷದ ಪುಟ್ಟ ಬಾಲಕನೊಬ್ಬ ಬರೊಬ್ಬರಿ 2.6 ಕೋಟಿ ರೂ ಸಂಪಾದನೆ ಮಾಡಿ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾನೆ.

ನ್ಯೂಯಾರ್ಕ್​: ಕೇವಲ 8 ವರ್ಷದ ಪುಟ್ಟ ಬಾಲಕನೊಬ್ಬ ಬರೊಬ್ಬರಿ 2.6 ಕೋಟಿ ರೂ ಸಂಪಾದನೆ ಮಾಡಿ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾನೆ.

ಹೌದು.. 2019ನೇ ಸಾಲಿನಲ್ಲಿ ಯೂಟ್ಯೂಬ್​ ಚಾನಲ್​ ಮೂಲಕ ಅತಿ ಹೆಚ್ಚು ಹಣ ಸಂಪಾದಿಸಿದ 8 ವರ್ಷದ ಬಾಲಕ ರಿಯಾನ್​ ಕಾಜಿ ಪೋರ್ಬ್ಸ್​ ಪಟ್ಟಿಯಲ್ಲಿ ವರ್ಷದ ಅತಿ ಹೆಚ್ಚು ಸಂಪಾದಿಸಿದ ಯೂಟ್ಯೂಬರ್​ ಎನಿಸಿಕೊಂಡಿದ್ದಾನೆ. ರಯಾನ್​ ಗೌನ್​  ಯೂಟ್ಯೂಬ್​ ಚಾನಲ್​ ಮೂಲಕ ಈ ವರ್ಷ 26 ಮಿಲಿಯನ್​ ಡಾಲರ್​ ಅಂದರೆ 2.6 ಕೋಟಿ ರೂ. ಸಂಪಾದನೆ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾನೆ. 

ರಿಯಾನ್​ ಕಾಜಿ ಯೂಟ್ಯೂಬ್ ನಲ್ಲಿ ರ್ಯಾನ್ಸ್​ ವರ್ಲ್ಡ್​(Ryan’s World)​ ಚಾನಲ್​ ಹೊಂದಿದ್ದು, 2015ರಲ್ಲಿ ಅಂದರೆ ಕಾಜಿ ಮೂರು ವರ್ಷದವನಾಗಿದ್ದಾಗ ಆತನ ಪೋಷಕರು ಈ ಚಾನಲ್​ ಅನ್ನು ತೆರೆದಿದ್ದರು. ಇದೀಗ ರ್ಯಾನ್  ಚಾನಲ್​ಗೆ 22.9 ಮಿಲಿಯನ್​ ಚಂದಾದಾರರಿದ್ದಾರೆ. ಮೊದಲಿಗೆ ರಯಾನ್​ ಟಾಯ್ಸ್​ ರೀವ್ಯೂ​ ಎಂದು ಕರೆಯಲಾಗುತ್ತಿತ್ತು. ಮುಚ್ಚಿದ ಬಾಕ್ಸ್​ಗಳನ್ನು ತೆರೆದು ಅದರಲ್ಲಿರುವ ಆಟಿಕೆಗಳನ್ನು ತೆಗೆದು ಅದರೊಂದಿಗೆ ಆಡುವ ವಿಡಿಯೋಗಳು ಚಾನಲ್​ನಲ್ಲಿ ಅಪ್​ಲೋಡ್​ ಮಾಡಲಾಗುತ್ತಿತ್ತು. ಅದರಲ್ಲಿ ಅನೇಕ ವಿಡಿಯೋಗಳು ಬಿಲಿಯನ್ಸ್​ಗಟ್ಟಲೇ ವೀಕ್ಷಣೆ ಪಡೆದುಕೊಂಡಿವೆ. 

ಅಮೆರಿಕಾದ ವಕಾಲತು ಸಂಸ್ಥೆಯು ವಿಡಿಯೋದಲ್ಲಿನ ಜಾಹಿರಾತು ಸತ್ಯವನ್ನು ಪ್ರಶ್ನಿಸಿ ಯುಎಸ್​ ಫೆಡೆರಲ್​ ಟ್ರೇಡ್​ ಕಮಿಷನ್​ನಲ್ಲಿ ದೂರು ನೀಡಲಾಗಿತ್ತು. ಉತ್ಪನ್ನಗಳನ್ನು ಪರಿಚಯಿಸಲು ಕೆಲವು ಬ್ರ್ಯಾಂಡ್​ಗಳು ಪ್ರಾಯೋಜಕತ್ವವನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಸೂಚಿಸಿಲ್ಲ ಎಂದು ದೂರಲಾಗಿತ್ತು. ಇದೇ ಕಾರಣಕ್ಕೆ ಇತ್ತೀಚೆಗಷ್ಟೇ ಕಾಜಿ ಚಾನಲ್​ ಹೆಸರನ್ನು ರಯಾನ್ಸ್​ ವರ್ಲ್ಡ್​ ಎಂದು ಬದಲಾಯಿಸಿಕೊಂಡಿದ್ದ. ಇತ್ತೀಚೆಗೆ ಆಟಿಕೆಗಳಿಗೆ ಹೆಚ್ಚುವರಿಯಾಗಿ ಕಲಿಕಾ ಸಂಬಂಧದ ವಿಡಿಯೋಗಳನ್ನು ರಯಾನ್​ ಯುಟ್ಯೂಬ್​ನಲ್ಲಿ ಹರಿಬಿಡುತ್ತಿದ್ದು ಬಾಲ್ಯಾವಧಿಯಲ್ಲಿಯೇ ಕೋಟಿ ರೂ. ಸಂಪಾದನೆ ಮಾಡುವ ಮೂಲಕ ಕೋಟ್ಯಧಿಪತಿಯಾಗಿದ್ದಾನೆ. 

ವಿಶೇಷವೆಂದರೆ 2018ರಲ್ಲೂ 22 ಮಿಲಿಯನ್​ ಡಾಲರ್​(2.2 ಕೋಟಿ ರೂ.) ಮೂಲಕ ಪೋರ್ಬ್ಸ್​ ಪಟ್ಟಿಯಲ್ಲಿ ಕಾಜಿ ಸ್ಥಾನ ಪಡೆದಿದ್ದನು.

Related Stories

No stories found.

Advertisement

X
Kannada Prabha
www.kannadaprabha.com