ಸ್ಮಾರ್ಟ್ಫೋನ್ ಉತ್ಪಾದನಾ ದೈತ್ಯ  ಸ್ಯಾಮ್ಸಂಗ್ ಅಧ್ಯಕ್ಷರಿಗೆ 18 ತಿಂಗಳ ಜೈಲು ಶಿಕ್ಷೆ

ಕಾರ್ಮಿಕ ಚಟುವಟಿಕೆ ಹತ್ತಿಕ್ಕಿದ ಕಾರಣಕ್ಕಾಗಿ ಜಗತ್ತಿನ ಅತಿ ದೊಡ್ಡ ಸ್ಮಾರ್ಟ್ಫೋನ್ ಮತ್ತು ಚಿಪ್ ತಯಾರಕ ಕಂಪೆನಿ ಸ್ಯಾಮ್ಸಂಗ್ ಇಲೆಕ್ಟ್ರಾನಿಕ್ಸ್ನ ಅಧ್ಯಕ್ಷರಿಗೆ ಇಲ್ಲಿನ ನ್ಯಾಯಾಲಯ 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿಯೋಲ್: ಕಾರ್ಮಿಕ ಚಟುವಟಿಕೆ ಹತ್ತಿಕ್ಕಿದ ಕಾರಣಕ್ಕಾಗಿ ಜಗತ್ತಿನ ಅತಿ ದೊಡ್ಡ ಸ್ಮಾರ್ಟ್ಫೋನ್ ಮತ್ತು ಚಿಪ್ ತಯಾರಕ ಕಂಪೆನಿ ಸ್ಯಾಮ್ಸಂಗ್ ಇಲೆಕ್ಟ್ರಾನಿಕ್ಸ್ನ ಅಧ್ಯಕ್ಷರಿಗೆ ಇಲ್ಲಿನ ನ್ಯಾಯಾಲಯ 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಸ್ಯಾಮ್ಸಂಗ್ ಸಿಬ್ಬಂದಿ ಕಾರ್ಮಿಕ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಯಲು ರೂಪಿಸಿದ ಕಾರ್ಯಾಚರಣೆಗಾಗಿ ಅಧ್ಯಕ್ಷ ಲೀ ಸಾಂಗ್-ಹೂನ್ ಮತ್ತು ಕಾರ್ಯಕಾರಿ ಉಪಾಧ್ಯಕ್ಷ ಕಾಂಗ್ ಕ್ಯುಂಗ್-ಹೂನ್ ಇಬ್ಬರಿಗೂ ತಲಾ 18 ತಿಂಗಳ ಶಿಕ್ಷೆ ವಿಧಿಸಲಾಗಿದೆ. ಇದರ ಬೆನ್ನಿಗೇ ಕಂಪೆನಿಯು ತನ್ನ ತಪ್ಪಿಗಾಗಿ ಕ್ಷಮೆಯಾಚಿಸಿದೆ. 

ಸ್ಯಾಮ್ಸಂಗ್  ಗ್ರಾಹಕ ಸೇವಾ ಘಟಕದ ಸಿಬ್ಬಂದಿಯನ್ನು ಸಂಘಟನೆ ಕಟ್ಟದಂತೆ ತಡೆಯಲು ಈ ಇಬ್ಬರೂ  ವ್ಯಾಪಕ ಕಾರ್ಯಾಚರಣೆಯನ್ನು ನಡೆಸಿದರು.

ಸ್ಯಾಮ್ಸಂಗ್  ಎಲೆಕ್ಟ್ರಾನಿಕ್ಸ್ ಸ್ಯಾಮ್ಸಂಗ್  ಸಮೂಹದ ಪ್ರಮುಖ ಅಂಗಸಂಸ್ಥೆಯಾಗಿದೆ, ಇದು ಚೇಬೋಲ್ ಎಂದು ಕರೆಯಲ್ಪಡುವ ಕುಟುಂಬ-ನಿಯಂತ್ರಿತ ಸಂಘಟನೆಗಳಲ್ಲಿ ಅತಿದೊಡ್ಡದಾಗಿದೆ, ಇದು ದಕ್ಷಿಣ ಕೊರಿಯಾ ಮೂಲದ್ದಾಗಿ ಆ ರಾಷ್ಟ್ರವನ್ನು ಜಗತ್ತಿನ  11 ನೇ ಅತಿದೊಡ್ಡ ಆರ್ಥಿಕತೆಯನ್ನಾಗಿಸಲು ಬಹುದೊಡ್ಡ ನೆರವು ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com