ಸಿಂಗಾಪುರ ಜಲಸಂಧಿಯಲ್ಲಿ ಕಡಲ್ಗಳ್ಳರ ಅಟ್ಟಹಾಸ; 4 ದಿನಗಳಲ್ಲಿ ಐದು ನೌಕೆಗಳ ಮೇಲೆ ದಾಳಿ

ವಿಶ್ವದಲ್ಲೇ ಅತಿ ಹೆಚ್ಚು ನೌಕಾ ಸಂಚಾರವಿರುವ ಸಿಂಗಾಪುರ ಜಲಸಂಧಿಯಲ್ಲಿ ಮತ್ತೆ ಕಡಲ್ಗಳ್ಳರು ಅಟ್ಟಹಾಸ ಮುಂದುವರೆದಿದ್ದು, ಕೇವಲ ನಾಲ್ಕು ದಿನಗಳಲ್ಲಿ ಐದು ನೌಕೆಗಳ ಮೇಲೆ ದಾಳಿ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಸಿಂಗಾಪುರ: ವಿಶ್ವದಲ್ಲೇ ಅತಿ ಹೆಚ್ಚು ನೌಕಾ ಸಂಚಾರವಿರುವ ಸಿಂಗಾಪುರ ಜಲಸಂಧಿಯಲ್ಲಿ ಮತ್ತೆ ಕಡಲ್ಗಳ್ಳರು ಅಟ್ಟಹಾಸ ಮುಂದುವರೆದಿದ್ದು, ಕೇವಲ ನಾಲ್ಕು ದಿನಗಳಲ್ಲಿ ಐದು ನೌಕೆಗಳ ಮೇಲೆ ದಾಳಿ ನಡೆಸಿದ್ದಾರೆ.

ಕಳೆದ ಸೋಮವಾರಯಷ್ಟೇ ಕಚ್ಚಾ ತೈಲ ಟ್ಯಾಂಕರ್‌ ವೊಂದರ ಮೇಲೆ ಕಡಲ್ಗಳ್ಳರು ದಾಳಿ ನಡೆಸಿದ್ದರು. ಈ ವೇಳೆ ಟ್ಯಾಂಕರ್ ನಲ್ಲಿ 105,000 ಟನ್ ಕಚ್ಛಾತೈಲವಿತ್ತು. ಇರಾಕ್ ನ ಬಸ್ರಾಹ್ ನಿಂದ ಕಚ್ಛಾ ತೈಲ ತುಂಬಿದ್ದ ಬಮ್ಜಿ ಎಂಬ ನೌಕೆ ಸಿಂಗಾಪುರ ಜಲಸಂಧಿ ಮಾರ್ಗವಾಗಿ ಚೀನಾ ಕಿಂಗ್ ಡಾವೋನತ್ತ ಚಲಿಸುತ್ತಿತ್ತು, ಈ ವೇಳೆ ಕಡಲ್ಗಳ್ಳರು ದಾಳಿ ನಡೆಸಿದ್ದಾರೆ.

ಇದಾದ ಎರಡೇ ಗಂಟೆಯಲ್ಲಿ ಮತ್ತೂಂದು ನೌಕೆಯ ಮೇಲೆ ದಾಳಿ ನಡೆದಿದೆ. ಎರಡೂ ನೌಕೆಯಲ್ಲಿದ್ದ ಸಿಬಂದಿಯನ್ನು ಕಟ್ಟಿಹಾಕಿದ್ದ ಕಡಲ್ಗಳ್ಳರು, ದರೋಡೆಗೆ ಯತ್ನಿಸಿದ್ದರು. ಆದರೆ, ಹಡಗಿನಲ್ಲಿದ್ದ ಎಚ್ಚರಿಕೆಯ ಗಂಟೆ ಮೊಳಗಿದ ಕಾರಣ ಅವರ ಯತ್ನ ವಿಫ‌ಲವಾಗಿತ್ತು. 

ಡಿ.20ರಂದು 3 ಕಡಲ್ಗಳ್ಳತನ ಘಟನೆ ನಡೆದಿತ್ತು. 2019ರಲ್ಲಿ ಸಿಂಗಾಪುರ ಜಲಸಂಧಿಯಲ್ಲಿ ಒಟ್ಟಾರೆ ಇಂತಹ 29 ಪ್ರಕರಣಗಳು ವರದಿಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com