ದಕ್ಷಿಣ ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ, 10 ಸೈನಿಕರು ಹುತಾತ್ಮ

ದಕ್ಷಿಣ ಆಫ್ಘಾನಿಸ್ತಾನದ ದಕ್ಷಿಣ ಹೆಲ್ಮಾಂಡ್ ಪ್ರಾಂತ್ಯದ ಸಾಂಗಿನ್ ಜಿಲ್ಲೆಯ ಸೇನಾ ಚೆಕ್ ಪಾಯಿಂಟ್ ಬಳಿ ಶನಿವಾರ ಬಾಂಬ್ ಸ್ಫೋಟಗೊಂಡು ಹತ್ತು ಸೈನಿಕರು ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಸೈನ್ಯ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಷ್ಕರ್ ಗಾಹ್: ದಕ್ಷಿಣ ಆಫ್ಘಾನಿಸ್ತಾನದ ದಕ್ಷಿಣ ಹೆಲ್ಮಾಂಡ್ ಪ್ರಾಂತ್ಯದ ಸಾಂಗಿನ್ ಜಿಲ್ಲೆಯ ಸೇನಾ ಚೆಕ್ ಪಾಯಿಂಟ್ ಬಳಿ ಶನಿವಾರ ಬಾಂಬ್ ಸ್ಫೋಟಗೊಂಡು ಹತ್ತು ಸೈನಿಕರು ಹುತಾತ್ಮರಾಗಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ಸೈನ್ಯ ಪ್ರಕಟಣೆಯಲ್ಲಿ ತಿಳಿಸಿದೆ.

ಚೆಕ್‌ಪಾಯಿಂಟ್ ಬಳಿ ಭಯೋತ್ಪಾದಕರು ನಡೆಸಿದ ಬಾಂಬ್ ದಾಳಿಗೆ ಸೌನಿಕರು ಹುತಾತ್ಮರಾಗಿದ್ದಾರೆ. ಇತ್ತೀಚೆಗೆ ನಡೆದ ಬಾಂಬ್ ಸ್ಫೋಟದಲ್ಲಿ 26 ಸೈನಿಕರು ಸಾವನ್ನಪ್ಪಿದ್ದು, ಸ್ಪೋಟದ ಹೊಣೆಯನ್ನು ತಾಲಿಬಾನ್ ಸಂಘಟನೆಯು ಹೊತ್ತಿದೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.

ಹೆಲ್ಮಂಡ್ ಪ್ರಾಂತ್ಯವು, ಕಾಶ್ಬುಲ್‌ನಿಂದ ದಕ್ಷಿಣಕ್ಕೆ 555 ಕಿ.ಮೀ ದೂರದಲ್ಲಿರುವ ಲಷ್ಕರ್ ಗಾಹ್ ಅನ್ನು ರಾಜಧಾನಿಯಾಗಿ ಹೊಂದಿದ್ದು, ಸಂಘರ್ಷ ಪೀಡಿತ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇಂದ್ರವಾಗಿ ಪರಿಗಣಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com