ಎಲ್ಲಾ ರಾಜಕಾರಣಿಗಳೂ ಫೇಸ್ ಬುಕ್ ಖಾತೆ ತೆರೆಯುತ್ತಿದ್ದರೆ ಈ ಖ್ಯಾತ ರಾಜಕಾರಣಿ ಫೇಸ್ ಬುಕ್ ಗೆ ಗುಡ್ ಬೈ ಹೇಳಿದ್ದಾರೆ!

ರಾಜಕಾರಣಿಗಳು ಫೇಸ್ ಬುಕ್, ಟ್ವಿಟರ್ ನಲ್ಲಿ ಖಾತೆ ತೆರೆಯುತ್ತಿದ್ದರೆ ಇದಕ್ಕೆ ತದ್ವಿರುದ್ಧವೆಂಬಂತೆ.....

Published: 02nd February 2019 12:00 PM  |   Last Updated: 02nd February 2019 12:05 PM   |  A+A-


Angela Merkel shutting down her Facebook page

ಎಲ್ಲಾ ರಾಜಕಾರಣಿಗಳೂ ಫೇಸ್ ಬುಕ್ ಖಾತೆ ತೆರೆಯುತ್ತಿದ್ದರೆ ಈ ಖ್ಯಾತ ರಾಜಕಾರಣಿ ಫೇಸ್ ಬುಕ್ ಗೆ ಗುಡ್ ಬೈ ಹೇಳಿದ್ದಾರೆ!

Posted By : SBV SBV
Source : Online Desk
ಲಂಡನ್: ಸಾಮಾಜಿಕ ಜಾಲತಾಣಗಳ ಮೂಲಕ ಬೆಂಬಲಿಗರೊಂದಿಗೆ ನಿರಂತರವಾಗಿ ಕನೆಕ್ಟ್ ಆಗಿರುವುದು ಇತ್ತೀಚಿನ ರಾಜಕಾರಣಿಗಳ ಟ್ರೆಂಡ್. ರಾಜಕಾರಣಿಗಳು ಫೇಸ್ ಬುಕ್, ಟ್ವಿಟರ್ ನಲ್ಲಿ ಖಾತೆ ತೆರೆಯುತ್ತಿದ್ದರೆ ಇದಕ್ಕೆ ತದ್ವಿರುದ್ಧವೆಂಬಂತೆ ಜರ್ಮನಿಯ ಚಾನ್ಸಲರ್​ ಏಂಜಲ್​ ಮಾರ್ಕೆಲ್ ತಮ್ಮ ಫೇಸ್ ಬುಕ್ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತಿರುವುದಾಗಿ ಘೋಷಿಸಿದ್ದಾರೆ. 

ಚಾನ್ಸಲರ್​ ಏಂಜಲ್​ ಮಾರ್ಕೆಲ್ ಅವರ ಈ ಘೋಷಣೆ, ಅವರ ರಾಜಕೀಯ ಜೀವನದ ಅಂತಿಮ ಹಂತದಲ್ಲಿರುವ ಸುಳಿವು ಎಂದೇ ವಿಶ್ಲೇಷಿಸಲಾಗುತ್ತಿದೆ. 

ಕಳೆದ ಡಿಸೆಂಬರ್ ನಲ್ಲಿ ಮಾರ್ಕೆಲ್, ಜರ್ಮನಿಯ ಸೆಂಟರ್-ರೈಟ್ ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಯೂನಿಯನ್ ನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈಗ  ಫೇಸ್ ಬುಕ್ ನಲ್ಲಿರುವ ತಮ್ಮ ಅಧಿಕೃತ ಖಾತೆ ಮೂಲಕ ವಿಡಿಯೋ ಪೋಸ್ಟ್ ಮಾಡಿದ್ದು, ತಾವು ಫೇಸ್ ಬುಕ್ ನಿಂದ ಹೊರಬರುತ್ತಿರುವುದಾಗಿ ತಿಳಿಸಿದ್ದಾರೆ. 

ಆದರೆ ಫೇಸ್ ಬುಕ್ ನ ಸಹ ಸಂಸ್ಥೆಯಾಗಿರುವ ಮತ್ತೊಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಮಾರ್ಕೆಲ್ ಎಂದಿನಂತೆ ಸಕ್ರಿಯರಾಗಿರಲಿದ್ದಾರೆ. 

ಜರ್ಮನಿಯ ಸರ್ಕಾರದ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಮಾರ್ಕೆಲ್ ಅವರಿಗೆ ಸಂಬಂಧಪಟ್ಟ ಅಪ್ಡೇಟ್ ಗಳು ದೊರೆಯುತ್ತವೆ. ಇನ್ನು ರಾಜಕಾರಣಿಗಳು ಬಳಸುವ ಮತ್ತೊಂದು ಸಾಮಾಜಿಕ ಜಾಲತಾಣವಾದ ಟ್ವಿಟರ್ ನಲ್ಲಿ ಏಂಜೆಲಾ ಮಾರ್ಕೆಲ್ ಸಕ್ರಿಯರಾಗಿರಲಿಲ್ಲ. 
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp