ಅಮೆರಿಕಾದಲ್ಲಿ ವ್ಯಾಸಂಗ ಮಾಡುವುದಕ್ಕೆ ತೆರಳುವ ವಲಸಿಗರಲ್ಲದ ವಿದೇಶಿ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದಿಂದ ಅನುಮತಿ ಪಡೆದ ನಂತರ ಎಫ್-1, ಎಂ-1 ಜೆ-1 ವೀಸಾಗಳನ್ನು ಪಡೆಯಬೇಕಾಗುತ್ತದೆ. ಹೀಗೆ ಎಫ್-1 ವೀಸಾ ಪಡೆದ ವಿದ್ಯಾರ್ಥಿಗಳು ನಿಗದಿಯಾದ ಮಾನ್ಯತೆ ಪಡೆದ ಕೋರ್ಸ್ ಗಳಿಗೆ ಹಾಜರಾಗಬೇಕಾಗುತ್ತದೆ. ಕೋರ್ಸ್ ಮುಕ್ತಾಯಗೊಂಡ 60 ದಿನಗಳಲ್ಲಿ ಆ ವಿದ್ಯಾರ್ಥಿಗೆ ಉದ್ಯೋಗ ದೊರೆತರೆ ವರ್ಕ್ ವೀಸಾ ಪಡೆದು ಅಮೆರಿಕಾದಲ್ಲೇ ಉಳಿಯುವುದಕ್ಕೆ ಅವಕಾಶ ಇರುತ್ತದೆ. ಒಂದು ವೇಳೆ ಉದ್ಯೋಗ ಸಿಗದೇ ಇದ್ದಲ್ಲಿ ಆತ ಕೋರ್ಸ್ ಮುಕ್ತಾಯಗೊಂಡ 2 ತಿಂಗಳಲ್ಲಿ ದೇಶ ಬಿಡಬೇಕಾಗುತ್ತದೆ. ಇದು ನಿಯಮ.