ಅಮೆರಿಕದಲ್ಲಿ ಗನ್ ಮಕ್ಕಳಾಟಿಕೆ: ತುಂಬು ಗರ್ಭಿಣಿ ತಾಯಿಯನ್ನೇ ಶೂಟ್ ಮಾಡಿದ 4 ವರ್ಷದ ಮಗು!

ಲೋಡೆಡ್ ಗನ್ ಕೈಗೆ ಸಿಕ್ಕಿದ್ದರ ಪರಿಣಾಮ 4 ವರ್ಷದ ಬಾಲಕನೋರ್ವ ತಮಾಷೆ ಮಾಡಲು ಹೋಗಿ ಗರ್ಭಿಣಿ ತಾಯಿಯ ಹಣೆಗೆ ಗುಂಡಿಟ್ಟು ಶೂಟ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಲೋಡೆಡ್ ಗನ್ ಕೈಗೆ ಸಿಕ್ಕಿದ್ದರ ಪರಿಣಾಮ 4 ವರ್ಷದ ಬಾಲಕನೋರ್ವ ತಮಾಷೆ ಮಾಡಲು ಹೋಗಿ ಗರ್ಭಿಣಿ ತಾಯಿಯ ಹಣೆಗೆ ಗುಂಡಿಟ್ಟು ಶೂಟ್ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 
27 ವರ್ಷದ ಮಹಿಳೆ ಮತ್ತು ಆಕೆಯ ಬಾಯ್ ಫ್ರೆಂಡ್ ಟಿವಿ ನೋಡುತ್ತಿದ್ದಾಗ ಅಲ್ಲೇ ಆಡುತ್ತಿದ್ದ ನಾಲ್ಕು ವರ್ಷದ ಮಗುವಿಗೆ ಗನ್ ಸಿಕ್ಕಿದೆ. ಅಚಾನಕ್ ಆಗಿ ಮಗು ತಾಯಿಯ ಹಣೆಗೆ ಗನ್ ಹಿಟ್ಟು ಟ್ರಿಗರ್ ಎಳೆದಿದೆ. 
ಮಹಿಳೆ ಎಂಟು ತಿಂಗಳ ತುಂಬು ಗರ್ಭೀಣಿಯಾಗಿದ್ದು ತೀವ್ರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ನಂತರ ಹೆಚ್ಚುವರಿ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗನ್ ಮಹಿಳೆಯ ಮೊದಲ ಪತಿಯದ್ದಾಗಿದ್ದು ನನ್ನ ಗನ್ ಅನ್ನು ಕದ್ದು ತೆಗೆದುಕೊಂಡು ಹೋಗಿದ್ದಳು ಎಂದು ಮಾಜಿ ಗಂಡ ಹೇಳಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com