ಪ್ರೇಯಸಿ ಜತೆ ಸೇರಿ ತನ್ನ ಮಾಜಿ ಪತ್ನಿಗೇ ಸುಪಾರಿ ನೀಡಿದ್ದ ಭಾರತೀಯ ಅಮೆರಿಕನ್ ಜೈಲುಪಾಲು!

ತನ್ನ ಮಾಜಿ ಪತ್ನಿಯನ್ನು ಕೊಲ್ಲಲಿಕ್ಕಾಗಿ ಸುಪಾರಿ ಹಂತಕರನ್ನು ನೇಮಕ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ಅಮೆರಿಕನ್ ಹಾಗೂ ಅವನ ಪ್ರೇಯಸಿಯನ್ನು ಅಮೆರಿಕಾ ಪೋಲೀಸರು ಬಂಧಿಸಿದ್ದಾರೆ.
ಪ್ರೇಯಸಿ ಜತೆ ಸೇರಿ ತನ್ನ ಮಾಜಿ ಪತ್ನಿಗೇ ಸುಪಾರಿ ನೀಡಿದ್ದ ಭಾರತೀಯ ಅಮೆರಿಕನ್ ಜೈಲುಪಾಲು!
ಪ್ರೇಯಸಿ ಜತೆ ಸೇರಿ ತನ್ನ ಮಾಜಿ ಪತ್ನಿಗೇ ಸುಪಾರಿ ನೀಡಿದ್ದ ಭಾರತೀಯ ಅಮೆರಿಕನ್ ಜೈಲುಪಾಲು!
ವಾಷಿಂಗ್ಟನ್: ತನ್ನ ಮಾಜಿ ಪತ್ನಿಯನ್ನು ಕೊಲ್ಲಲಿಕ್ಕಾಗಿ ಸುಪಾರಿ ಹಂತಕರನ್ನು ನೇಮಕ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ಅಮೆರಿಕನ್ ಹಾಗೂ ಅವನ ಪ್ರೇಯಸಿಯನ್ನು ಅಮೆರಿಕಾ ಪೋಲೀಸರು ಬಂಧಿಸಿದ್ದಾರೆ.
ನರ್ಸನ್ ಲಿಂಗಲ(55) ಹಗೂ ಆತನ ಪ್ರೇಯಸಿ ಸಂದ್ಯಾ ರೆಡ್ಡಿ (52) ಬಂಧಿತರು. ಅವರನ್ನು ನೆವಾರ್ಕ್ ಫೆಡರಲ್ ನ್ಯಾಯಾಲಯದನ್ಯಾಯಾಧೀಶ ಮೈಕೆಲ್ ಎ ಹ್ಯಾಮರ್ ಅವರ ಮುಂದೆ  ಹಾಜರುಪಡಿಸಲಾಗಿದೆ.ಇಬ್ಬರನ್ನೂ ಜಾಮೀನು ರಹಿತವಾಗಿ ವಶಕ್ಕೆ ಪಡೆಯಲಾಗಿದೆ.
ಘಟನೆ ವಿವರ
ದೂರಿನ ಪ್ರಕಾರ ಮೇ 2018ರಲ್ಲಿ ಲಿಂಗಲ  ಮಿಡ್ಲ್ಸೆಕ್ಸ್ ಕೌಂಟಿ ಸುಪೀರಿಯರ್ ಕೋರ್ಟ್ ನಲ್ಲಿದ್ದ ವೇಳೆ ಅವರು ತನ್ನ ಮಾಜಿ ಪತ್ನಿಉಯನ್ನು ಕೊಲ್ಲುವವರು ಯಾರಾದರೂ ಸಿಗಬಹುದೆ ಎಂದು ಪೋಲೀಸ್ ಅಧಿಕಾರಿಯೊಬ್ಬನನ್ನು ಕೇಳಿದ್ದಾರೆ. ಇದಾಗಿ ಜೂನ್ 2018ರಲ್ಲಿ ಸುಪಾರಿ ಹಂತಕನೊಬ್ಬನ ಪರಿಚಯವಾಗಿದೆ. ಅವನೂ ಸಹ ಪೋಲೀಸ್ ಸೇವೆಯಲ್ಲಿದ್ದವನೇ ಆಗಿದ್ದ.  ಆ ಬಳಿಕ ಲಿಂಗಲ  ಮತ್ತು ರಹಸ್ಯ ಕಾರ್ಯ ವಹಿಸಿದ್ದ ಸುಪಾರಿ ಹಂತಕ ಅಧಿಕಾರಿ ದೂರವಾಣಿ ಮೂಲಕ ಮಾತನಾಡಿದರು ಮತ್ತು ಲಿಂಗಾಲಾ ಇಂಡಿಯಾನಾದಿಂದ ನ್ಯೂಜೆರ್ಸಿಗೆ ಪ್ರಯಾಣಿಸಿ ಅವನನ್ನು ವೈಯುಕ್ತಿಕವಾಗಿ ಭೇಟಿಯಾಗಿದ್ದರು.
ಆಗಸ್ಟ್ 18, 2018ರಂದು, ಲಿಂಗಲ ಹಾಗೂ ಸುಪಾರಿ ಹಂತಕ ಅಧಿಕಾರಿ ನ್ಯೂ ಜೆರ್ಸಿ ಶಾಪಿಂಗ್ ಮಾಲ್ ನ ಹೊರಗೆ ಭೇಟಿ ಮಾಡಲು ಯೋಜಿಸಿದರು. ಅದರಂತೆ ಆ ದಿನ ಪ್ರೇಯಸಿ ರೆಡ್ಡಿಯೊಡನೆ ಲಿಂಗಲ ಸುಪಾರಿ ಹಂತಕ ಅಧಿಕಾರಿಯನ್ನು ಭೇಟಿಯಾಗಿದ್ದಾರೆ. ಅವರಿಗೆ ಸಂದ್ಯಾ ಪರಿಚಯ ಮಾಡಿಸಿದ್ದಾರೆ. ಬಳಿಕ ಅವರು ಮೂವರೂ ರಹಸ್ಯವಾದ ಪೋಲೀಸ್ ಕಾರ್ ನಲ್ಲಿ ಹೊರಟರು.
ಪೊಲೀಸ್ ಅಧಿಕಾರಿ ತಾನು ಏನು ಮಾಡಬೇಕೆಂದು ಬಯಸುತ್ತಾನೆ ಎನ್ನುವುದನ್ನ್ಯು ಲಿಂಗಲ ಅವರಿಂದ ಮತ್ತೊಮ್ಮೆ ಸ್ಪಷ್ಟಪಡಿಸಿಕೊಂಡಿದ್ದನು. ಆ ವೇಳೆ ಲಿಂಗಲ "ಆ ಮಹಿಳೆ ಸಂಪೂರ್ಣವಾಗಿ ನನ್ನ ಜೀವನದಿಂದ ದೂರವಾಗಬೇಕು.ಅವಳೆಂದೂ ಮತ್ತೆ ನನ್ನ ಜೀವನಕ್ಕೆ ಕಾಲಿಡಬಾರದೆಂದು ನಾನು ಬಯಸುವೆ" ಎಂದಿದ್ದಾನೆ.
ಆ ವೇಳೆ ಹಂತಕ ಅಧಿಕಾರಿ "ನಾನವಳನ್ನು ನೋಡಿಕೊಳ್ಳಬೇಕೆಂದು ನೀವು ಬಯಸುತ್ತೀರಾ?" ಎಂದು ಕೇಳಲಾಗಿ ಲಿಂಗಲ "ಹೌದು" ಎಂದು ಪ್ರತಿಕ್ರಯಿಸಿದ್ದಾನೆ. ಆಗ ರಹಸ್ಯ ಪೋಲೀಸ್ ಅಧಿಕಾರಿ " ನಾನವಳನ್ನು ಕೊಲ್ಲುತ್ತೇನೆ" ಎಂದಾಗ ಈತ ಒಪ್ಪಿಕೊಂಡಿದ್ದಾನೆ. ಹಾಗೂ ಇದುವೇ ಕಥೆಯ ಅಂತ್ಯವೆಂದಿದ್ದಾನೆ. ಸಂಭಾಷಣೆಯ ಸಮಯದಲ್ಲಿ, ಲಿಂಗಾಲಾ ತನ್ನ ಪೂರ್ಣ ಹೆಸರು, ಮನೆ ವಿಳಾಸ, ವಯಸ್ಸು ಮತ್ತು ದೂರವಾಣಿ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ನೀಡಿದ್ದಾನ್ರೆ. ಆತ ತನ್ನ  ಮನೆಯ ಪ್ರವೇಶದ್ವಾರ ಮತ್ತು ವಿನ್ಯಾಸವನ್ನು ವಿವರಿಸಿದ್ದ. ಅವಳು ಕೆಲಸ ಮಾಡುವ ಸಂಸ್ಥೆಯ ಹೆಸರು, ಆಕೆಯ ಕೆಲಸಸಮಯ, ವಿವರಗಳನ್ನೂ ನೀಡಿದ್ದ.
ಉದ್ದೇಶಿತ ಕೆಲಸಕ್ಕಾಗಿ ಹಂತಕ ಅಧಿಕಾರಿ ತನಗೆ 5,000 ದಿಂದ 10,000 ಅಮೆರಿಕನ್ ಡಾಲರ್ ನೀಡಬೇಕಾಗುವುದು. ಎಂದು ಬೇಡಿಕೆ ಇಟ್ಟಿದ್ದಾನೆ.ಇದಕ್ಕೆ ಲಿಂಗಲ ಒಪ್ಪಿದ್ದಾನೆ.ಕೆಲಸದ ನಂತರ ಅವರು ಪಾವತಿಸುವುದಾಗಿ ಹೇಳಿದ್ದಾರೆ. ಆದರೆ ಪೋಲೀಸ್ ಅಧಿಕಾರಿ ಹಂತಕ ಕೆಲ ಅಂಶಗಳ ಹಣವನ್ನು ಈಗಲೇ ನೀಡಬೇಕು ಎಂದಿದ್ದಾನೆ. ಇದಕ್ಕಾಗಿ ಲಿಂಗಲ ಎರಡು ವಾರಗಳ ಕಾಲ ಸಮಯ ಕೇಳಿದ್ದ. ಹೀಗೆ ಸಂಭಾಷಣೆ ನಡೆದ ನಂತರ ಪೋಲೀಸ್ ಅಧಿಕಾರಿಗಳು ಲಿಂಗಲ ಹಾಗೂ ಸಂದ್ಯಾ ರೆಡ್ಡಿಯನ್ನು ಬಂಧಿಸಿದ್ದಾರೆ.
ಇದೀಗ ಪೋಲೀಸ್ ಲಿಂಗಲ ಹಾಗೂ ರೆಡ್ಡಿ`ಗೆ ಗರಿಷ್ಠ 10 ವರ್ಷಗಳ ಜೈಲು ಮತ್ತು 250,000 ಯುಎಸ್ ಡಾಲರ್ ದಂಡ ವಿಧಿಸಲಾಗುವುದು.ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಲಿಂಗಲ  ಡಿಸೆಂಬರ್ 1995ರಲ್ಲಿ ವಿವಾಹವಾಗಿದ್ದು ಈ ದಂಪತಿಗೆ ಒಬ್ಬ ಮಗ, ಒಬ್ಬ ಮಗಳಿದ್ದಾರೆ. ಅವರು ಮೇ 2011 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು ಮತ್ತು ವಿಚ್ಚೇದನ ಬಳಿಕ ಪತ್ನಿಗೆ ನೀಡಬೇಕಾದ ಪರಿಹಾರದ ಹಣ ನೀಡುವುದಕ್ಕೆ ಒಪ್ಪದೆ ಹಲವು ವರ್ಷ ಕಾಲ ಕಳೇದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com