ಬ್ರೆಜಿಲ್ ನ ಫುಟ್ಬಾಲ್ ಕ್ಲಬ್ ನಲ್ಲಿ ಅಗ್ನಿ ಅವಘಡ: 10 ಯುವ ಆಟಗಾರರು ಸಜೀವ ದಹನ

ಬ್ರೆಜಿಲ್ ಅತ್ಯಂತ ಜನಪ್ರಿಯ ಫುಟ್ಬಾಲ್ ಕ್ಲಬ್ ಫ್ಲೆಮಿಂಗೋದಲ್ಲಿ ಶುಕ್ರವಾರ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ತರಬೇತಿನಿರತ 10 ಯುವ ಆಟಗಾರರು ಸಜೀವ...

Published: 08th February 2019 12:00 PM  |   Last Updated: 08th February 2019 08:02 AM   |  A+A-


Fire in Brazil kills at least 10 in Flamengo youth football facility: reports

ಸಾಂದರ್ಭಿಕ ಚಿತ್ರ

Posted By : LSB LSB
Source : PTI
ರಿಯೊ ಡಿ ಜನೈರೊ: ಬ್ರೆಜಿಲ್ ಅತ್ಯಂತ ಜನಪ್ರಿಯ ಫುಟ್ಬಾಲ್ ಕ್ಲಬ್ ಫ್ಲೆಮಿಂಗೋದಲ್ಲಿ ಶುಕ್ರವಾರ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ತರಬೇತಿನಿರತ 10 ಯುವ ಆಟಗಾರರು ಸಜೀವ ದಹನವಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರಿಯೊ ಡಿ ಜನೈರೊದಲ್ಲಿರುವ ಫುಟ್ಬಾಲ್ ಕ್ಲಬ್ ಫ್ಲೆಮಿಂಗೋದಲ್ಲಿ 14ರಿಂದ 17 ವರ್ಷದ ಯುವಕರು ತರಬೇತಿ ಪಡೆಯುತ್ತಿದ್ದರು ಎಂದು ಟಿವಿ ಗ್ಲೋಬೋ ತಿಳಿಸಿದೆ.

ಇಂದು ಬೆಳಗ್ಗೆ ಬ್ರೆಜಿಲ್ ಪ್ರಮುಖ ಫುಟ್ಬಾಲ್ ತಂಡವೊಂದು ಈ ಕ್ಲಬ್ ನಲ್ಲಿ ಅಭ್ಯಾಸ ನಡೆಸಲಿದ್ದು, ಅಭ್ಯಾಸಕ್ಕೂ ಮುನ್ನವೇ ಅಗ್ನಿ ಅವಘಡ ಸಂಭವಿಸಿದೆ.

ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಗ್ಲೋಬೋ ವರದಿ ಮಾಡಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp