ಅಬುಧಾಬಿ ಕೋರ್ಟ್ ನಲ್ಲಿ ಹಿಂದಿಗೆ ಮೂರನೇ ಅಧಿಕೃತ ಭಾಷೆ ಸ್ಥಾನ

ಅಬುಧಾಬಿ ನ್ಯಾಯಾಲಯದಲ್ಲಿ ಹಿಂದಿ ಭಾಷೆಯನ್ನು ಮೂರನೇ ಅಧಿಕೃತ ಭಾಷೆಯನ್ನಾಗಿ ಬಳಸುವ ಐತಿಹಾಸಿಕ ನಿರ್ಣಯವನ್ನು ಅಬುಧಾಬಿ ನ್ಯಾಯಾಂಗ.....
ಅಬುಧಾಬಿ ಕೋರ್ಟ್ ನಲ್ಲಿ ಹಿಂದಿಗೆ ಮೂರನೇ ಅಧಿಕೃತ ಭಾಷೆ ಸ್ಥಾನ
ಅಬುಧಾಬಿ ಕೋರ್ಟ್ ನಲ್ಲಿ ಹಿಂದಿಗೆ ಮೂರನೇ ಅಧಿಕೃತ ಭಾಷೆ ಸ್ಥಾನ
ದುಬೈ: ಅಬುಧಾಬಿ  ನ್ಯಾಯಾಲಯದಲ್ಲಿ ಹಿಂದಿ ಭಾಷೆಯನ್ನು ಮೂರನೇ ಅಧಿಕೃತ ಭಾಷೆಯನ್ನಾಗಿ ಬಳಸುವ ಐತಿಹಾಸಿಕ ನಿರ್ಣಯವನ್ನು ಅಬುಧಾಬಿ ನ್ಯಾಯಾಂಗ ಇಲಾಖೆ ತೆಗೆದುಕೊಂಡಿದೆ. ಅಬುಧಾಬಿ ನ್ಯಾಯಾಂಗ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.
ಅರೇಬಿಕ್ ಹಾಗೂ ಒಂಗ್ಲೀಷ್ ಭಾಷೆಗಳು ಮೊದಲೆರಡು ಅಧಿಕೃತ ಭಾಷೆಗಳಾಗಿದ್ದು ಇದೀಗ ಹಿಂದಿ ಭಾಷೆಯನ್ನು ಮೂರನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲಾಗಿದೆ.
ಅಬುಧಾಬಿಯಲ್ಲಿ ಭಾರತೀಯರು ಸೇರಿ ಏಷ್ಯಾದ ಅನೇಕ ಭಾಗಗಳ ಜನರು ಇದ್ದು ಕಾರ್ಮಿಕ  ವರ್ಗದವರು ಹಿಂದಿಯನ್ನೇ ಹೆಚ್ಚು ಬಳಸುವ ಕಾರಣ ಹಿಂದಿಯನ್ನು ನ್ಯಾಯಾಲಯದಲ್ಲಿ ಬಳಸಿದ್ದಾದರೆ ವಾದ-ಪ್ರತಿವಾದಗಳನ್ನು ಸಮರ್ಪಕವಾಗಿ ನಡೆಸಲು ಅನುಕೂಲವಾಗಲಿದೆ.  ಭಾಷಾ ಸಮಸ್ಯೆಯಿಂದ ಆಗಬಹುದಾದ ಸಮಸ್ಯೆಗಳು ಇದರಿಂದ ದೂರಾಗಲಿದೆ,
ಅರಬ್ ಸಂಯುಕ್ತ ಒಕ್ಕೂಟ (ಅರಬ್ ಎಮಿರೇಟ್ಸ್) ನಲ್ಲಿ ಶೇ.30ರಷ್ಟು ಭಾರತೀಯರು ವಾಸವಿದ್ದಾರೆ. ಅಬುಧಾಬಿ ನ್ಯಾಯಾಂಗ ಇಲಾಖೆಯ ನಿರ್ಧಾರದಿಂದ ಅವರಿಗೆ ಅನುಕೂಲವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com