ನಿಶ್ಶಸ್ತ್ರ ವ್ಯಕ್ತಿ ಮೇಲೆ ಪಾಕ್ ಸೇನೆಯಿಂದ ಅಮಾನವೀಯ ಗುಂಡಿನ ದಾಳಿ, ವಿಡಿಯೋ ವೈರಲ್

ಪಾಕಿಸ್ತಾನ ಸೇನೆ, ಯಾವುದೇ ಶಸ್ತ್ರಗಳಿಲ್ಲದ ಬಲೋಚಿಸ್ತಾನದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡುತ್ತಿರುವ ವಿಡಿಯೋವೊಂದನ್ನು ಮುಕ್ತ ಬಲೋಚಿಸ್ತಾನ್ ಚಳವಳಿಯ ಕಾರ್ಯಕರ್ತರೊಬ್ಬರು ಹಂಚಿಕೊಂಡಿದ್ದಾರೆ.

Published: 12th February 2019 12:00 PM  |   Last Updated: 12th February 2019 06:59 AM   |  A+A-


WATCH | Pakistan army shoots down unarmed Balochistan man, fires relentlessly

ವ್ಯಕ್ತಿ ಮೇಲೆ ಗುಂಡಿನ ದಾಳಿ ನಡೆಸುತ್ತಿರುವ ಪಾಕ್ ಯೋಧ

Posted By : LSB LSB
Source : ANI
ಬಲೋಚಿಸ್ತಾನ್: ಪಾಕಿಸ್ತಾನ ಸೇನೆ, ಯಾವುದೇ ಶಸ್ತ್ರಗಳಿಲ್ಲದ ಬಲೋಚಿಸ್ತಾನದ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡುತ್ತಿರುವ ವಿಡಿಯೋವೊಂದನ್ನು ಮುಕ್ತ ಬಲೋಚಿಸ್ತಾನ್ ಚಳವಳಿಯ ಕಾರ್ಯಕರ್ತರೊಬ್ಬರು ಹಂಚಿಕೊಂಡಿದ್ದಾರೆ.

ರಾಜಕೀಯ ಕಾರ್ಯಕರ್ತ ಬೀಬಗರ್ ಬಲೋಚ್ ಅವರು ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಷೇರ್ ಮಾಡಿದ್ದು, ಪಾಕಿಸ್ತಾನ ಸೇನೆ ವ್ಯಕ್ತಿಯೊಬ್ಬನನ್ನು ಮನೆಯಿಂದ ಹೊರೆ ಎಳೆದು ತಂದು, ಆತನ ಮೇಲೆ ಅಮಾನವೀಯ ರೀತಿಯಲ್ಲಿ ನಿರಂತರ ಗುಂಡಿನ ದಾಳಿ ನಡೆಸುತ್ತಾರೆ. 

ಈ ಭೀಕರ ಘಟನೆಗೆ ಕಾರಣ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಪಾಕ್ ಸೇನೆ ಹಾಗಾಗ ಇಂತಹ ಕೃತ್ಯಗಳನ್ನು ಎಸಗುತ್ತಿದ್ದು, ಇದನ್ನು ಖಂಡಿಸಿ ಬಲೋಚ್ ರಿಪಬ್ಲಿಕ್ ಪಾರ್ಟಿ, ಬಲೋಚ್ ನ್ಯಾಷನ್ ಮೂಮೆಂಟ್ ಮತ್ತು ಫ್ರೀ ಬಲೋಚಿಸ್ತಾನ್ ಮೂಮೆಂಟ್ ಹಾಗೂ ಇತರೆ ಸಂಘಟನೆಗಳು ಹಲವು ಬಾರಿ ಪ್ರತಿಭಟನೆ ನಡೆಸಿವೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
facebook twitter whatsapp