ಪುಲ್ವಾಮಾ ದಾಳಿ: ಭಯೋತ್ಪಾದಕರಿಗೆ ಬೆಂಬಲವನ್ನು ತಕ್ಷಣ ನಿಲ್ಲಿಸಿ, ಪಾಕ್ ಗೆ ಅಮೆರಿಕಾ ತಾಕೀತು

ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ಅಮೆರಿಕಾ "ತನ್ನ ಮಣ್ಣಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಭಯೋತ್ಪಾದಕ ಗುಂಪುಗಳಿಗೆ ಬೆಂಬಲ ಹಾಗೂ ರಕ್ಷಣೆ ಒದಗಿಸುವುದನ್ನು ಪಾಕಿಸ್ತಾನ...
ಫೈಲ್ ಫೋಟೋ
ಫೈಲ್ ಫೋಟೋ
ವಾಷಿಂಗ್ಟನ್: ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಖಂಡಿಸಿರುವ ಅಮೆರಿಕಾ "ತನ್ನ ಮಣ್ಣಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಭಯೋತ್ಪಾದಕ ಗುಂಪುಗಳಿಗೆ  ಬೆಂಬಲ ಹಾಗೂ ರಕ್ಷಣೆ ಒದಗಿಸುವುದನ್ನು ಪಾಕಿಸ್ತಾನ ತಕ್ಷಣದಿಂಡ ನಿಲ್ಲಿಸಬೇಕು" ಎಂದಿದೆ.
"ತನ್ನ ಮಣ್ಣಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಭಯೋತ್ಪಾದಕ ಗುಂಪುಗಳಿಗೆ ಒದಗಿಸಿದ ಬೆಂಬಲ ಮತ್ತು ರಕ್ಷಣೆಯನ್ನು ಪಾಕಿಸ್ತಾನ ತಕ್ಷಣ ನಿಲ್ಲಿಸಬೇಕು ಎಂದು ನಾವು ಪಾಕಿಸ್ತಾನಕ್ಕೆ ಎಚ್ಚರಿಸುತ್ತೇವೆ. ಗಡಿ ಭಾಗದಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದನೆ ನಡೆಸುವುದು ಹೇಯಕೃತ್ಯ.ಈ ದಾಳಿಯನ್ನು ನಾವು ಖಂಡಿಸುತ್ತೇವೆ.ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತ ನಡುವಿನ ಸಹಕಾರ ಮತ್ತು ಸಂಬಂಧಗಳು ಇನ್ನಷ್ಟು ಉತ್ತಮಗೊಳ್ಲಲಿದೆ" ಅಮೆರಿಕಾ ಹೇಳಿದೆ.
"ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯು 40 ಭಾರತೀಯ ಅರೆಸೈನಿಕ ಪಡೆಗಳನ್ನು ಕೊಂದಿದ್ದು, ಕನಿಷ್ಠ 44 ಮಂದಿ ಗಾಯಗೊಂಡಿದ್ದರೆಂದು ತಿಳಿದುಬಂದಿದೆ.  ಭಯೋತ್ಪಾದಕ ದಾಳಿಯನ್ನು ಅಮೆರಿಕವು ತೀವ್ರವಾಗಿ ಖಂಡಿಸುತ್ತದೆ.ಹುತಾತ್ಮ ಯೋಧರ ಕುಟುಂಬಗಳಿಗೆ ನಮ್ಮ ಆಲವಾದ ಸಾಂತ್ವನವಿದೆ.: ಅಮೆರಿಕಾ ಸರ್ಕಾರ ಮಾದ್ಯಮ ಕಾರ್ಯದರ್ಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಸಿಆರ್ ಪಿಎಫ್ ವಾಹನದದಲ್ಲಿದ್ದ 40 ಭದ್ರತಾ ಸಿಬ್ಬಂದಿಗಳ ಜೀವ ನಾಶವಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಇ-ಮುಹಮ್ಮದ್ಈ ದಾಳಿಯ ಹೊಣೆ ಹೊತ್ತಿದೆ.
ದಾಳಿಯ ನಂತರ, ಶುಕ್ರವಾರ ಭಾರತವು ಪಾಕಿಸ್ತಾನಕ್ಕೆ ತಾನು ನೀಡಿದ್ದ ವಿಶೇಷ ಆಪ್ತ ರಾಷ್ಟ್ರದ ಸ್ಥಾನಮಾನವನ್ನು ಹಿಂಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com