ಕೈ ಕುಲುಕುವುದಕ್ಕೆ ಬಂದ ಪಾಕ್ ಅಧಿಕಾರಿಗೆ ಕೈ ಮುಗಿದ ಭಾರತೀಯ ಅಧಿಕಾರಿ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯ ನಂತರ ಮತ್ತೆ ಭಾರತ​​ ಹಾಗೂ ಪಾಕಿಸ್ತಾನದ ನಡುವೇ ತೀವ್ರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು...
ದೀಪಕ್ ಮಿತ್ತಲ್
ದೀಪಕ್ ಮಿತ್ತಲ್
ಹೇಗ್: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯ ನಂತರ ಮತ್ತೆ ಭಾರತ​​ ಹಾಗೂ ಪಾಕಿಸ್ತಾನದ ನಡುವೇ ತೀವ್ರ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಸೋಮವಾರ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ತಮ್ಮ ಕೈ ಕುಲುಕುವುದಕ್ಕೆ ಬಂದ ಪಾಕ್ ನ ಹಿರಿಯ ಅಧಿಕಾರಿಯ ಕೈ ಕುಲುಕಿಸದೇ 'ನಮಸ್ತೆ' ಎಂದು ಕೈ ಮುಗಿಯುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ.
ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತೀಯ ಮಾಜಿ ಸೇನಾ ಅಧಿಕಾರಿ ಕುಲಭೂಷಣ್ ಜಾಧವ್​​ಗೆ ಪಾಕ್​​ ವಿಧಿಸಿದ್ದ ಗಲ್ಲು ಶಿಕ್ಷೆ ಕುರಿತು ನಾಲ್ಕು ದಿನಗಳ ವಿಚಾರಣೆ ಇಂದು ಆರಂಭವಾಗಿದೆ.
ವಿಚಾರಣೆ ಆರಂಭವಾಗುವ ಮುನ್ನ ಭಾರತೀಯ ವಿದೇಶಾಂಗ ಜಂಟಿ ಕಾರ್ಯದರ್ಶಿ ದೀಪಕ್ ಮಿತ್ತಲ್ ಅವರು ಪಾಕಿಸ್ತಾನದ ಅಟಾರ್ನಿ ಜನರಲ್ ಅನ್ವರ್ ಮನ್ಸೂರ್ ಖಾನ್‌ರನ್ನು ನ್ಯಾಯಾಲಯದಲ್ಲಿ ಭೇಟಿ ಮಾಡಿದರು. 
ಕುಶಲೋಪರಿ ನಡೆಸುವ ಸಂದರ್ಭದಲ್ಲಿ ಕೈ ಕುಲುಕುವುದಕ್ಕಾಗಿ ಅನ್ವರ್ ಮನ್ಸೂರ್ ಖಾನ್ ಕೈ ಚಾಚಿದಾಗ ದೀಪಕ್ ಮಿತ್ತಲ್ ಅದನ್ನು ತಿರಸ್ಕರಿಸುತ್ತಾರೆ. ಬಳಿಕ ಕೈಜೋಡಿಸಿ 'ನಮಸ್ತೆ' ಎನ್ನುತ್ತಾರೆ. ಈ ಮೂಲಕ ಪಾಕ್​​ ಮೂಲದ ಮನ್ಸೂರ್ ಖಾನ್ ಅವರನ್ನು ಮುಜುಗರಕ್ಕೀಡು ಮಾಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com