ಸೌದಿ ಯುವರಾಜನಿಗೆ ಚಿನ್ನ ಲೇಪಿತ ಗನ್ ಉಡುಗೊರೆ ನೀಡಿದ ಪಾಕ್

ಪಾಕಿಸ್ತಾನ ಭಯೋತ್ಪಾದನೆಗೆ ಸಂಬಂಧಿಸಿದಂತೆ ಜಾಗತಿಕವಾಗಿ ತೀವ್ರ ಒತ್ತಡಕ್ಕೆ ಸಿಲುಕಿರುವ ಸಂದರ್ಭದಲ್ಲೇ ಸೌದಿ ಅರೇಬಿಯಾದ ಯುವರಾಜ್ ಮುಹಮ್ಮದ್ ಬಿನ್....

Published: 21st February 2019 12:00 PM  |   Last Updated: 21st February 2019 07:31 AM   |  A+A-


Pak gifts gold-plated assault rifle to Saudi Crown Prince

ಚಿನ್ನ ಲೇಪಿತ ಗನ್

Posted By : LSB LSB
Source : PTI
ಕರಾಚಿ: ಪಾಕಿಸ್ತಾನ ಭಯೋತ್ಪಾದನೆಗೆ ಸಂಬಂಧಿಸಿದಂತೆ ಜಾಗತಿಕವಾಗಿ ತೀವ್ರ ಒತ್ತಡಕ್ಕೆ ಸಿಲುಕಿರುವ ಸಂದರ್ಭದಲ್ಲೇ  ಸೌದಿ ಅರೇಬಿಯಾದ ಯುವರಾಜ್ ಮುಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಚಿನ್ನ ಲೇಪಿತ ಸಬ್ ಮೆಷಿನ್ ಗನ್ ಅನ್ನು ಉಡುಗೊರೆಯಾಗಿ ನೀಡಿದ್ದು, ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಸಾಮಾನ್ಯವಾಗಿ ನಮ್ಮ ದೇಶಕ್ಕೆ ಅತಿಥಿಗಳು ಬಂದಾಗ ವಿಶೇಷವಾದ ಉಡುಗೊರೆಯನ್ನು ನೀಡಿ ಬೀಳ್ಕೊಡುವುದು ಸಂಪ್ರದಾಯ. ನೆರೆಯ ಪಾಕಿಸ್ತಾನ ಸಹ ಈ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದೆ. ಆದರೆ, ಇತ್ತೀಚಿಗೆ ಪಾಕ್ ಭೇಟಿ ನೀಡಿದ್ದ ಸೌದಿ ಯುವರಾಜನಿಗೆ ನೀಡಿರುವ ಉಡುಗೊರೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ಶಸ್ತ್ರಾಸ್ತ್ರ ಉಡುಗೊರೆ ಸ್ವೀಕರಿಸುವ ವಿಚಾರದಲ್ಲಿ ಕೆಲವು ಶಿಷ್ಟಾಚಾರಗಳಿರುತ್ತವೆ. ಆದರೆ ಸೌದಿ ಯುವರಾಜ ಯಾವುದೇ ಶಿಷ್ಟಾಚಾರ ಪಾಲಿಸದೆ ಯಾವುದೇ ಸಂಕೋಚವಿಲ್ಲದೆ ಚಿನ್ನ ಲೇಪಿತ ಸಬ್ ಮಷಿನ್ ಗನ್ ಅನ್ನು ಉಡುಗೊರೆಯಾಗಿ ಪಡೆದಿದ್ದಾರೆ.

ಜರ್ಮನ್ ಇಂಜಿನಿಯರ್ ಗಳು ಈ ಬಂದೂಕನ್ನು ತಯಾರಿಸಿದ್ದು, ಚಿನ್ನದ ಲೇಪನದೊಂದಿಗೆ ಮಾಡಿಫೈ ಮಾಡಲಾಗಿದೆ.

ಸೌದಿ ಯುವರಾಜನಿಗೆ ಬಂದೂಕನ್ನು ಉಡುಗೊರೆಯಾಗಿ ನೀಡಿರುವ ಪಾಕಿಸ್ತಾನದ ವರ್ತನೆ ತೀವ್ರ ಟೀಕೆ ಸಹ ವ್ಯಕ್ತವಾಗಿದೆ.
Stay up to date on all the latest ಅಂತಾರಾಷ್ಟ್ರೀಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp