ಜಪಾನ್ ನಲ್ಲಿ ಪ್ರಬಲ ಭೂಕಂಪನ, ರಿಕ್ಟರ್ ಮಾಪಕದಲ್ಲಿ 5.7ರಷ್ಟು ತೀವ್ರತೆ ದಾಖಲು

ದ್ವೀಪ ರಾಷ್ಟ್ರ ಜಪಾನ್ ನಲ್ಲಿ ನಿನ್ನೆ ರಾತ್ರಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.7ರಷ್ಟು ತೀವ್ರತೆ ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಟೋಕಿಯೋ: ದ್ವೀಪ ರಾಷ್ಟ್ರ ಜಪಾನ್ ನಲ್ಲಿ ನಿನ್ನೆ ರಾತ್ರಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.7ರಷ್ಟು ತೀವ್ರತೆ ದಾಖಲಾಗಿದೆ.
ಜಪಾನ್ ನ ಹೊಕ್ಕೈಯ್ಡೋ ದ್ವೀಪದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದ್ದು, ಕಡಲಾಳದ ಸುಮಾರು 41 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕ ಭೂಕಂಪನ ಮಾಪನ ಇಲಾಖೆ ಅಧಿಕಾರಿಗಳು ಪ್ರಬಲ ಭೂಕಂಪನವೇ ಆಗಿದ್ದರೂ, ಭೂಮಿಯ ತೀರಾ ಆಳದಲ್ಲಿ ಸಂಭವಿಸಿರುವುದರಿಂದ ಸುನಾಮಿ ಅಲೆಗಳು ಏಳುವ ಸಾಧ್ಯತೆಗಳಿಲ್ಲ ಎಂದು ಹೇಳಿದ್ದಾರೆ.
ಇನ್ನು ಭೂಕಂಪನದಲ್ಲಿ ಸಾವು-ನೋವು, ಆಸ್ತಿ-ಪಾಸ್ತಿಗಳಿಗೆ ನಷ್ಟವಾದ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಮಾಹಿತಿ ನೀಡಿರುವ ಕ್ಯಾಬಿನೆಟ್ ಮುಖ್ಯ ಕಾರ್ಯದರ್ಶಿ ಯೊಶಿಹೈಡ್ ಸುಗ ಅವರು ಭೂಕಂಪನದ ಕುರಿತು ಪರಿಸ್ಥಿತಿ ಅವಲೋಕಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್ ನಲ್ಲಿ ಇದೇ ದ್ವೀಪದಲ್ಲಿ 6 ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿತ್ತು. ಈ ವೇಳೆ ಹತ್ತಾರು ಕಟ್ಟಡಗಳು ನೆಲಕ್ಕುರುಳಿ ಸುಮಾರು 40 ಮಂದಿ ಸಾವಿಗೀಡಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com