ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಪಾಕಿಸ್ತಾನಕ್ಕೆ ನೀಡಬೇಕಿದ್ದ ಆರ್ಥಿಕ ನೆರವು ಸ್ಥಗಿತಗೊಳಿಸಿದ ಅಮೆರಿಕ!

ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಇಡೀ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಂದು ಶಾಕ್ ನೀಡಿದ್ದು, ಹಾಲಿ ವಿತ್ತೀಯ ವರ್ಷದಲ್ಲಿ ಪಾಕಿಸ್ತಾನಕ್ಕೆ ತಾನು ನೀಡಬೇಕಿದ್ದ ಸುಮಾರು 1.3 ಬಿಲಿಯನ್ ಡಾಲರ್ ಮೊತ್ತದ ಆರ್ಥಿಕ ನೆರವನ್ನು ಸ್ಥಗಿತಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಪುಲ್ವಾಮ ಉಗ್ರ ದಾಳಿ ಬೆನ್ನಲ್ಲೇ ಇಡೀ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಂದು ಶಾಕ್ ನೀಡಿದ್ದು, ಹಾಲಿ ವಿತ್ತೀಯ ವರ್ಷದಲ್ಲಿ ಪಾಕಿಸ್ತಾನಕ್ಕೆ ತಾನು ನೀಡಬೇಕಿದ್ದ ಸುಮಾರು 1.3 ಬಿಲಿಯನ್ ಡಾಲರ್ ಮೊತ್ತದ ಆರ್ಥಿಕ ನೆರವನ್ನು ಸ್ಥಗಿತಗೊಳಿಸಿದೆ.
ಈ ಹಿಂದೆ ಪಾಕಿಸ್ತಾನಕ್ಕೆ 1.3 ಬಿಲಿಯನ್ ಡಾಲರ್ ಹಣ ನೀಡಲು ಅಮೆರಿಕ ಕಾಂಗ್ರೆಸ್ ಅನುಮೋದನೆ ನೀಡಿತ್ತು. ಇದೀಗ ಪುಲ್ವಾಮ ಉಗ್ರ ದಾಳಿ ಬಳಿಕ ಟ್ರಂಪ್ ಸರ್ಕಾರ ಈ ಆರ್ಥಿಕ ನೆರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಣೆ ಮಾಡಿದೆ.
ಈ ಬಗ್ಗೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದು,  ಪಾಕಿಸ್ತಾನಕ್ಕೆ ನೀಡುತ್ತಿರುವ ಆರ್ಥಿಕ ನೆರವು ನಿಲ್ಲಿಸಿದ್ಜು, ನಾವು ಪ್ರತಿ ವರ್ಷ ಪಾಕಿಸ್ತಾನಕ್ಕೆ 9 ಸಾವಿರ ಕೋಟಿ ರೂ. ಆರ್ಥಿಕ ನೆರವು ನೀಡುತ್ತಿದ್ದೆವು. ಆದರೆ, ಅವರು ನಮಗೆ ಯಾವ ರೀತಿ ಸಹಾಯ ಮಾಡಬೇಕಿತ್ತೋ ಆ ರೀತಿಯಲ್ಲಿ ಸಹಕಾರ ನೀಡುತ್ತಿಲ್ಲ. ಹಾಗಾಗಿ, ಅವರಿಗೆ ಪ್ರತಿ ವರ್ಷ ನೀಡುತ್ತಿರುವ ಈ ಆರ್ಥಿಕ ನೆರವನ್ನು ನಾವು ನಿಲ್ಲಿಸುತ್ತಿದ್ದೇವೆ. ಈ ಮೂಲಕ ಉಗ್ರರ ವಿರುದ್ಧ ಕ್ರಮ ಕೈಗೊಂಡರಷ್ಟೇ ನೆರವು ಎಂದರು.
ಕಳೆದ ಫೆಬ್ರವರಿ 14ರಂದು ಪುಲ್ವಾಮ ಬಳಿ ಆತ್ಮಾಹುತಿ ಸ್ಫೋಟದ ಮೂಲಕ ಭಾರತೀಯ ಸೇನೆಯ 44 ಮಂದಿ ಯೋಧರನ್ನು ಕೊಲ್ಲಲಾಗಿತ್ತು. ಈ ಬಾಂಬ್ ದಾಳಿಯ ನೇತೃತ್ವವನ್ನು ಪಾಕಿಸ್ತಾನ ಮೂಲದ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಹೊತ್ತಿತ್ತು. ಅಂತೆಯೇ ದಾಳಿ ಬಳಿಕ ಮಾತನಾಡಿದ್ದ ಜೈಶ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜರ್, ಇದು ಏನೇನೂ ಅಲ್ಲ. ಪುಲ್ವಾಮ ದಾಳಿಯಲ್ಲಿ 350 ಕೆಜಿ ಸ್ಫೋಟಕ ಸಿಡಿಸಲಾಗಿತ್ತು. ಆದರೆ ಮುಂದಿನ ದಾಳಿಯಲ್ಲಿ 500 ಕೆಜಿ ಸ್ಫೋಟಕ ಸಿಡಿಸುವುದಾಗಿ ಬೆದರಿಕೆ ಹಾಕಿದ್ದ. ಆ ಮೂಲಕ ದಾಳಿಯಲ್ಲಿ ತನ್ನದೇ ನೇರ ಕೈವಾಡದ ಕುರಿತು ಅಜರ್ ಒಪ್ಪಿಕೊಂಡಿದ್ದ. 
ಪುಲ್ವಾಮ ಉಗ್ರ ದಾಳಿ ಬಳಿಕ ಭಾರತ ಸರ್ಕಾರ ಕೂಡ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಆಗ್ರಹಿಸಿತ್ತು. ಆದರೆ ದಾಳಿಯಾಗಿ ಬರೊಬ್ಬರಿ 10 ದಿನಗಳೇ ಕಳೆದರೂ ಪಾಕಿಸ್ತಾನ ಮಾತ್ರ ಈ ವರೆಗೂ ಕ್ರಮ ಕೈಗೊಂಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com