ನನ್ನ ಮಕ್ಕಳೂ 'ಅಣ್ವಸ್ತ್ರಗಳ ಒತ್ತಡ' ನಿರ್ವಹಿಸುವುದು ನನಗಿಷ್ಟವಿಲ್ಲ: ಸರ್ವಾಧಿಕಾರಿಯ ಅಚ್ಚರಿ ಹೇಳಿಕೆ

ಅಣ್ವಸ್ತ್ರಗಳ ದಾಳಿ ಮಾಡುವ ಬೆದರಿಕೆಯಿಂದಲೇ ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಿಸಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಅಚ್ಚರಿ ಹೇಳಿಕೆ ನೀಡಿದ್ದು, ನನ್ನ ಮಕ್ಕಳೂ ಅಣ್ವಸ್ತ್ರಗಳ ಒತ್ತಡ ನಿರ್ವಹಣೆ ಮಾಡುವುದು ತಮಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪ್ಯೋಂಗ್ಯಾಂಗ್: ಅಣ್ವಸ್ತ್ರಗಳ ದಾಳಿ ಮಾಡುವ ಬೆದರಿಕೆಯಿಂದಲೇ ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಿಸಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಅಚ್ಚರಿ ಹೇಳಿಕೆ ನೀಡಿದ್ದು, ನನ್ನ ಮಕ್ಕಳೂ ಅಣ್ವಸ್ತ್ರಗಳ ಒತ್ತಡ ನಿರ್ವಹಣೆ ಮಾಡುವುದು ತಮಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಹೌದು.. ದಶಕಗಳಿಂದಲೂ ತನ್ನ ಅಣ್ವಸ್ತ್ರಗಳ ದಾಸ್ತಾನುಗಳನ್ನು ಮುಂದಿಟ್ಟುಕೊಂಡು ಇಡೀ ವಿಶ್ವಕ್ಕೇ ಬೆದರಿಕೆ ಒಡ್ಡುತ್ತಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಮ್ಮ ಅಣ್ವಸ್ತ್ರಗಳ ಕುರಿತ ಭಾವನೆಗಳಿಂದ ಯೂ ಟರ್ನ್ ಹೊಡಿದ್ದಾರೆ. ಇಷ್ಟು ದಿನ ಅಣ್ವಸ್ತ್ರಗಳನ್ನೇ ಪ್ರಬಲ ಅಸ್ತ್ರವಾಗಿಸಿಕೊಂಡು ವಿಶ್ವಕ್ಕೇ ತಲೆನೋವಾಗಿದ್ದ ಕಿಮ್ ಜಾಂಗ್ ಉನ್  ತನ್ನ ಮಕ್ಕಳು ಅಣ್ವಸ್ತ್ರಗಳ ಒತ್ತಡ ನಿರ್ವಹಿಸುವುದು ತಮಗಿಷ್ಟವಿಲ್ಲ ಎಂದು ಹೇಳಿದ್ದಾರೆ.
ಅಮೆರಿಕ ಕಾರ್ಯದರ್ಶಿ ಮೈಕ್ ಪೊಂಪಿಯೋ ಅವರ ಕೊರಿಯಾ ಪ್ರವಾಸದ ಸಂದರ್ಭದಲ್ಲಿ ಉತ್ತರ ಕೊರಿಯಾಗೆ ಭೇಟಿ ನೀಡಿದ್ದು, ಈ ವೇಳೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರನ್ನು ಭೇಟಿ ಮಾಡಿ ಆತ್ಮೀಯ ಮಾತುಕತೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಕಿಮ್ ಜಾಂಗ್ ಉನ್ ತಮ್ಮ ಮನದಾಳದ ಮಾತುಗಳನ್ನು ಪೊಂಪಿಯೋ ಅವರೊಂದಿಗೆ ಹಂಚಿಕೊಂಡಿದ್ದು, ಪರೋಕ್ಷವಾಗಿ ತಮಗೆ ಅಣ್ವಸ್ತ್ರಗಳ ಸಹವಾಸ ಸಾಕಾಗಿದೆ ಎಂಬ ಸಂದೇಶ ರವಾನೆ ಮಾಡಿದ್ದಾರೆ.
ಈ ಬಗ್ಗೆ ಅಮೆರಿಕ ಮಾಧ್ಯಮಗಳು ವರದಿ ಮಾಡಿದ್ದು, 'ನಾನು ಕೂಡ ಓರ್ವ ತಂದೆ ಹಾಗೂ ನನ್ನ ಪತ್ನಿಗೆ ಪ್ರೀತಿಯ ಪತಿಯಾಗಿದ್ದೇನೆ. ನನಗೂ ಮಕ್ಕಳಿದ್ದಾರೆ. ನನ್ನ ಬಳಿಕ ನನ್ನ ಮಕ್ಕಳೂ ಕೂಡ ಅಣ್ವಸ್ತ್ರಗಳ ಒತ್ತಡ ನಿರ್ವಹಣೆ ಮಾಡುವುದು ನನಗೆ ಇಷ್ಟವಿಲ್ಲ. ಅವರು ಜೀವನದ ಪ್ರತೀಯೊಂದು ಕ್ಷಣವನ್ನೂ ಆನಂದಿಸಬೇಕು. ಅವರ ಜೀವನದುದ್ದಕ್ಕೂ ಅಣ್ವಸ್ತ್ರಗಳ ಹಿಂದೆ ಹೋಗುವುದು ನನಗಿಷ್ಟವಿಲ್ಲ ಎಂದು ಉನ್ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಇನ್ನು ಕಳೆದ ವರ್ಷ ಏಪ್ರಿಲ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರನ್ನು ಭೇಟಿ ಮಾಡಿದ್ದ ಉನ್ ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರ ಬೆನಲ್ಲೇ ಉತ್ತರ ಕೊರಿಯಾದಲ್ಲಿ ಅಣ್ವಸ್ತ್ಪ ಪರೀಕ್ಷೆಗೆ ಬ್ರೇಕ್ ಬಿದ್ದಿದ್ದು, ಹೊಸ ಅಣ್ವಸ್ತ್ರಗಳ ಯೋಜನೆಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಉತ್ತರ ಕೊರಿಯಾ ಮಾಧ್ಯಮಗಳು ವರದಿ ಮಾಡಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com