ಭಾರತದ ಏರ್ ಸ್ಟ್ರೈಕ್ ಬಳಿಕ ಚೀನಾ ಸಹ ನಮ್ಮ ಪರವಾಗಿ ಮಾತಾಡ್ತಿಲ್ಲ: ಹುಸೇನ್ ಹಕ್ಕಾನಿ ಅಳಲು!

ಭಾರತದ ಏರ್ ಸ್ಟ್ರೈಕ್ ಮಾಡಿದ ಬಳಿಕ ಪರಮಾಪ್ತ ದೇಶ ಚೀನಾ ಸಹ ನಮ್ಮ ಪರವಾಗಿ ಮಾತನಾಡುತ್ತಿಲ್ಲ ಎಂದು ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಹುಸೇನ್ ಹಕ್ಕಾನಿ
ಹುಸೇನ್ ಹಕ್ಕಾನಿ
ನವದೆಹಲಿ: ಭಾರತದ ಏರ್ ಸ್ಟ್ರೈಕ್ ಮಾಡಿದ ಬಳಿಕ ಪರಮಾಪ್ತ ದೇಶ ಚೀನಾ ಸಹ ನಮ್ಮ ಪರವಾಗಿ ಮಾತನಾಡುತ್ತಿಲ್ಲ ಎಂದು ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.
ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ಬಳಿಕ ಪ್ರಪಂಚದಲ್ಲಿ ಉಗ್ರರಿಗೆ ಉಳಿಗಾಲವಿಲ್ಲ ಎನ್ನುವ ಸಂದರ್ಭ ಸೃಷ್ಟಿಯಾಗಿದೆ. ಭಯೋತ್ಪಾದನ ಕೃತ್ಯಗಳು ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿವೆ. ಇದಕ್ಕೆ ಸಾಕ್ಷಿಯೇ ಪಾಕ್ ಬೆಂಬಲಕ್ಕೆ ಯಾರೂ ನಿಲ್ಲದಿರುವುದು ಎಂದು ಹಕ್ಕಾನಿ ಹೇಳಿದರು.
ಫೆಬ್ರವರಿ 14ರಂದು ಭಯೋತ್ಪಾದಕರು ಪುಲ್ವಾಮಾ ದಾಳಿ ಬಳಿಕ ಭಾರತದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಸರಿಯಾಗಿ 12ನೇ ದಿನಕ್ಕೆ ಪಾಕ್ ನ ಹುಟ್ಟಡಗಿಸಿದೆ. 40 ಯೋಧರ ಬಲಿದಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಹಾತೊರೆಯುತ್ತಿದ್ದ ಭಾರತೀಯ ವಾಯುಪಡೆ, ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ನ ಮೂರು ಉಗ್ರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಿದೆ.
ಈ ಹಿಂದೆಯೂ ಕಾಶ್ಮೀರ ವಿಮೋಚನೆಗೆ ಪಾಕಿಸ್ತಾನ ರೂಪಿಸಿದ್ದ ತಂತ್ರದಲ್ಲಿ ಭಾಗಿಯಾಗಿದ್ದ ಉಗ್ರ ಗುಂಪುಗಳೆ ಈಗ ಪಾಕ್ ಮುಳುವಾಗಿದೆ ಎಂದಿದ್ದರು ಹುಸೇನ್ ಹಕ್ಕಾನಿ. ಲಾಹೋರ್ ನಲ್ಲಿ ನಡೆದ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪಾಕ್ ಮಾಜಿ ರಾಯಭಾರಿ ಹಕ್ಕಾನಿ, ಪಾಕಿಸ್ತಾನದ ದಶಕಗಳ ಹಿಂದಿನಷ್ಟು ಯೋಜನೆ ಈಗ ಪಾಕಿಸ್ತಾನಕ್ಕೆ ಮುಳುವಾಗಿ ಪರಿಣಮಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com