ಹೊಸ ವರ್ಷದ ಸಂಭ್ರಮದ ನಡುವೆಯೇ ಟೋಕಿಯೋ, ಮ್ಯಾಂಚೆಸ್ಟರ್ ನಲ್ಲಿ ಸಾಮೂಹಿಕ ಹತ್ಯೆ ಪ್ರಯತ್ನ, 12 ಮಂದಿಗೆ ಗಾಯ

ಇಡೀ ಜಗತ್ತೇ ನವ ಸಂವತ್ಸರದ ಸಂಭ್ರಮಾಚರಣೆಯಲ್ಲಿ ತೊಡಗಿರುವಂತೆಯೇ ಟೋಕಿಯೋ ಮತ್ತು ಮ್ಯಾಂಚೆಸ್ಟರ್ ನಗರಳಲ್ಲಿ ದುಷ್ಕರ್ಮಿಗಳು ಸಾಮೂಹಿಕ ಹತ್ಯಾ ಯತ್ನ ನೆಡೆಸಿದ್ದು, ಎರಡು ಘಟನೆಗಳಲ್ಲಿ ಒಟ್ಟು 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಇಡೀ ಜಗತ್ತೇ ನವ ಸಂವತ್ಸರದ ಸಂಭ್ರಮಾಚರಣೆಯಲ್ಲಿ ತೊಡಗಿರುವಂತೆಯೇ ಟೋಕಿಯೋ ಮತ್ತು ಮ್ಯಾಂಚೆಸ್ಟರ್ ನಗರಳಲ್ಲಿ ದುಷ್ಕರ್ಮಿಗಳು ಸಾಮೂಹಿಕ ಹತ್ಯಾ ಯತ್ನ ನೆಡೆಸಿದ್ದು, ಎರಡು ಘಟನೆಗಳಲ್ಲಿ ಒಟ್ಟು 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಟೋಕಿಯೋದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಡೆಯುತ್ತಿದ್ದ ಟಕೆಶಿತಾ ಸ್ಟ್ರೀಟ್ ನ ಫುಟ್ ಪಾತ್ ಮೇಲೆ 21 ವರ್ಷದ ಕಾಜುಹಿರೊ ಕುಸಕಾಬೆ ಎಂಬ ಯುವಕ ಪಾದಾಚಾರಿಗಳ ಮೇಲೆ ಏಕಾಏಕಿ ಕಾರು ಹರಿಸಿದ್ದಾನೆ. ಪರಿಣಾಮ ಸುಮಾರು 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾಮೂಹಿಕ ಹತ್ಯೆ ಮಾಡುವ ಉದ್ದೇಶದಿಂದಲೇ ದುಷ್ಕರ್ಮಿ ಪಾದಾಚಾರಿಗಳ ಮೇಲೆ ಕಾರು ಹತ್ತಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಅಂತೆಯೇ ಕೂಡಲೇ ಸ್ಥಳೀಯರ ನೆರವಿನೊಂದಿಗೆ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಮತ್ತೊಂದು ಘಟನೆಯಲ್ಲಿ ಅತ್ತ ಮ್ಯಾಂಚೆಸ್ಟರ್ ನಲ್ಲಿ ದುಷ್ಕರ್ಮಿಯೋರ್ವ ನಡೆಸಿದ ಚಾಕು ದಾಳಿಯಲ್ಲಿ ಕನಿಷ್ಠ ಮೂರು ಮಂದಿ ಗಾಯಗೊಂಡಿದ್ದಾರೆ. ಮ್ಯಾಂಚೆಸ್ಟರ್ ನ ರೈಲ್ವೇ ನಿಲ್ದಾಣದ ಸಮೀಪ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ, ಓರ್ವ ಮಹಿಳೆ ಮತ್ತು ಓರ್ವ ಪುರುಷ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಮಾರು 38 ವರ್ಷದ ಸ್ಯಾಮ್ ಕ್ಲಾಕ್ ಈ ಕೃತ್ಯವೆಸಗಿದ್ದು, ಕೂಡಲೇ ಆತನನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
ಇನ್ನು ಎರಡೂ ದಾಳಿಗಳ ಹಿಂದೆ ಉಗ್ರಗಾಮಿಗಳ ಅಥವಾ ರಹಸ್ಯ ಅಜೆಂಡಾಗಳ ಕೈವಾಡದ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com